Bihar: ಯುವಕನಾಗಿದ್ದಾಗ ಕೇಸ್, ವೃದ್ಧನಾದಾಗ ಶಿಕ್ಷೆ! 34 ವರ್ಷದ ನಂತರ ತೀರ್ಪು, ಕೋರ್ಟ್‌ಗೆ ಬಂದ 84 ವರ್ಷದ ವೃದ್ಧ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ದೀಪ್ ರಾಯ್‌


Last Updated:

Bihar: 34 ವರ್ಷ. ಅಂದ್ರೆ ಒಬ್ಬ ಮಗು ಹುಟ್ಟಿ ಮದುವೆ ಆಗಿ ಮಕ್ಕಳಿಗೆ ಮದುವೆ ಮಾಡೋಷ್ಟು ಸಮಯ. ಆದ್ರೆ, ಬಿಹಾರದ ವೈಶಾಲಿ ಜಿಲ್ಲಾ ನ್ಯಾಯಾಲಯ ಈಗ ಅಷ್ಟೇ ಹಳೆಯದಾದ ಕ್ರಿಮಿನಲ್ ಕೇಸ್‌ಗೆ ತೀರ್ಪು ಕೊಟ್ಟಿದೆ. ಈ ಮೂಲಕ 1992ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಈಗ 84 ವರ್ಷ ತುಂಬಿರುವ ವೃದ್ಧನನ್ನ ದೋಷಿ ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿದೆ.

ದೀಪ್ ರಾಯ್‌
ದೀಪ್ ರಾಯ್‌

ವೈಶಾಲಿ (ಬಿಹಾರ): 34 ವರ್ಷ. ಅಂದ್ರೆ ಒಬ್ಬ ಮಗು ಹುಟ್ಟಿ ಮದುವೆ ಆಗಿ ಮಕ್ಕಳಿಗೆ ಮದುವೆ ಮಾಡೋಷ್ಟು ಸಮಯ. ಆದ್ರೆ, ಬಿಹಾರದ (Bihar) ವೈಶಾಲಿ ಜಿಲ್ಲಾ ನ್ಯಾಯಾಲಯ (Vaishali District Court) ಈಗ ಅಷ್ಟೇ ಹಳೆಯದಾದ ಕ್ರಿಮಿನಲ್ ಕೇಸ್‌ಗೆ (Criminal Case) ತೀರ್ಪು ಕೊಟ್ಟಿದೆ. ಈ ಮೂಲಕ 1992ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಈಗ 84 ವರ್ಷ ತುಂಬಿರುವ ವೃದ್ಧನನ್ನ ದೋಷಿ ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿದೆ. ಅದರಂತೆ, “ನ್ಯಾಯ ತಡವಾಗಿ ಬಂದರೂ ಸೋಲುವುದಿಲ್ಲ” ಅನ್ನೋ ಮಾತಿಗೆ ಇದು ಮತ್ತೊಂದು ನಿದರ್ಶನ. ಆ ಕುರಿತ ವರದಿ ಇಲ್ಲಿದೆ.

ಏನಿದು ಪ್ರಕರಣ?

ಈ ಸುದೀರ್ಘ ಕಾನೂನು ಹೋರಾಟದ ಕಥೆ ಆರಂಭವಾಗಿದ್ದು 1992 ರಲ್ಲಿ. ಬಿಹಾರದ ವೈಶಾಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಹಸುವನ್ನು ಕಟ್ಟುವ ಜಾಗ ಮತ್ತು ದಾರಿಯ ಬಳಕೆಗೆ ಸಂಬಂಧಿಸಿದಂತೆ ಅಕ್ಕ-ಪಕ್ಕದ ಮನೆಯವರ ನಡುವೆ ಭೀಕರ ಜಗಳ ನಡೆದಿತ್ತು. ಈ ಗಲಾಟೆಯು ವಿಕೋಪಕ್ಕೆ ತಿರುಗಿ, ಆರೋಪಿ ದೀಪ್ ರಾಯ್ ಮತ್ತು ಆತನ ಕಡೆಯವರು ಎದುರಾಳಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ದಂಪತಿಗಳು ತೀವ್ರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿ, ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು.

ದಶಕಗಳ ಕಾಲ ಸಾಗಿದ ವಿಚಾರಣೆ

1992 ರಲ್ಲಿ ದಾಖಲಾದ ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಬರೋಬ್ಬರಿ 34 ವರ್ಷಗಳ ಕಾಲ ಸುದೀರ್ಘವಾಗಿ ಸಾಗಿತು. ಭಾರತದ ನ್ಯಾಯಾಲಯಗಳಲ್ಲಿ ಸಾಕ್ಷ್ಯಗಳ ವಿಚಾರಣೆ, ವಕೀಲರ ವಾದ-ಪ್ರತಿವಾದ ಮತ್ತು ಮುಂದೂಡಿಕೆಗಳ ಸರಣಿಯಿಂದಾಗಿ ವರ್ಷಗಳು ಉರುಳುತ್ತಾ ಹೋದವು. ಈ ಸುದೀರ್ಘ ಅವಧಿಯಲ್ಲಿ, ಪ್ರಕರಣದ ತೀವ್ರತೆ ಮತ್ತು ಸಾಕ್ಷ್ಯಗಳು ಹಾಗೇ ಉಳಿದಿದ್ದರೂ, ಕಾಲಚಕ್ರ ಮಾತ್ರ ನಿಲ್ಲಲಿಲ್ಲ.

84ರ ಇಳಿವಯಸ್ಸಿನಲ್ಲಿ ಜೈಲು ಶಿಕ್ಷೆ

ಪ್ರಕರಣ ನಡೆದು 34 ವರ್ಷಗಳ ನಂತರ ವೈಶಾಲಿ ನ್ಯಾಯಾಲಯವು ದೀಪ್ ರಾಯ್‌ನನ್ನು ದೋಷಿ ಎಂದು ಘೋಷಿಸಿ, 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತು. ಶಿಕ್ಷೆ ಪ್ರಕಟವಾದಾಗ ಆರೋಪಿಗೆ 84 ವರ್ಷ ವಯಸ್ಸಾಗಿತ್ತು. ಒಟ್ಟಾರೆಯಾಗಿ, ಯೌವನದ ಉತ್ಸಾಹದಲ್ಲಿ, ಆಯುಧಗಳನ್ನು ಝಳಪಿಸಿ, ಗುಂಡುಗಳನ್ನು ಹಾರಿಸಿ, ಅಪರಾಧದ ಹಾದಿಯನ್ನು ಹಿಡಿಯುವ ಇಂದಿನ ಯುವಕರಿಗೆ ಈ ಚಿತ್ರಣವು ಒಂದು ಪಾಠವಾಗಿದೆ. ಯೌವನದಲ್ಲಿ ಮಾಡಿದ ಅಪರಾಧಗಳು ವೃದ್ಧಾಪ್ಯದ ಅಸಹಾಯಕತೆಯಲ್ಲೂ ಮುಂದುವರಿಯುತ್ತವೆ ಎಂಬ ಸ್ಪಷ್ಟ ಸಂದೇಶವನ್ನು ಈ ಪ್ರಕರಣವು ರವಾನಿಸುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed