Bigg Boss Kannada: ಬಿಗ್ ಬಾಸ್ ಸ್ಪರ್ಧಿಗೆ ಹಳ್ಳಿ ಮನೆ ಹೋಟೆಲ್‍ನಿಂದ ಬೆಂಬಲ, ಕಾಸು ಕೊಟ್ಟು ಬಿಲ್ ನೋಡಿದ್ರೆ ಕಣ್ಣಿಗೆ ಬೀಳುತ್ತೆ ಈ ಸಂದೇಶ! | | ACTPnews

Rapid Read


Last Updated:

ಬಿಗ್ ಬಾಸ್ ಕನ್ನಡ ಸ್ಪರ್ಧಿ ಮಂಜುನಾಥ್ ಪರವಾಗಿ ನಂಜನಗೂಡಿನ ಹಳ್ಳಿ ಮನೆ ಹೋಟೆಲ್ ಮಾಲೀಕರು ಬಿಲ್ ಮೇಲೆ ವೋಟ್ ಮಾಡುವಂತೆ ಮುದ್ರಿಸಿ ವಿಭಿನ್ನ ಪ್ರಚಾರ ನಡೆಸಿದ್ದು ವೈರಲ್ ಆಗಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮೈಸೂರು: ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ (Bigg Boss Kannada) ರಿಯಾಲಿಟಿ ಶೋ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ಪರವಾಗಿ ಅಭಿಮಾನಿಗಳು (Fans) ಹತ್ತಾರು ವಿಭಿನ್ನ ದಾರಿಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ, 13ನೇ ಸೀಸನ್‍ನ ಜನಪ್ರಿಯ ಸ್ಪರ್ಧಿ ‘ಮಾಡರ್ನ್ ಮಹಾಕವಿ ಮಂಜ’ (Madarn Mahakavi Manja) ಎಂದೇ ಖ್ಯಾತಿ ಗಳಿಸಿರುವ ಮಂಜುನಾಥ್ ಅವರಿಗೆ ನಂಜನಗೂಡಿನ ಹೋಟೆಲ್ ಮಾಲೀಕರೊಬ್ಬರು ನೀಡಿರುವ ಬೆಂಬಲ ಸಖತ್ ವೈರಲ್ (Viral) ಆಗುತ್ತಿದೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೇ, ಹೋಟೆಲ್‍ಗೆ (Hotel) ಬರುವ ಗ್ರಾಹಕರ ಕೈಸೇರುವ ಬಿಲ್‍ನಲ್ಲೇ ವೋಟ್ ಮಾಡುವಂತೆ ಮನವಿ ಮಾಡುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

‘ಮಂಜುನಾಥ್ ಅವರಿಗೆ ವೋಟ್ ಮಾಡಿ’

ಸಾಮಾನ್ಯವಾಗಿ ಹೋಟೆಲ್‍ಗಳಿಗೆ ಹೋದಾಗ ನಾವು ತಿಂಡಿ ಅಥವಾ ಊಟ ಮಾಡಿದ ಬಳಿಕ ಬರುವ ಬಿಲ್‍ನಲ್ಲಿ ತಿಂಡಿಯ ಹೆಸರು, ಅದರ ಬೆಲೆ ಹಾಗೂ ಒಟ್ಟು ಮೊತ್ತದ ವಿವರಗಳು ಮಾತ್ರ ಮುದ್ರಿತವಾಗಿರುತ್ತವೆ. ಆದರೆ ನಂಜನಗೂಡು ಸಮೀಪದಲ್ಲಿರುವ ಜನಪ್ರಿಯ ‘ಹಳ್ಳಿ ಮನೆ ಹೋಟೆಲ್’ ಮಾಲೀಕರು ಮಾತ್ರ ಇದಕ್ಕೆ ಭಿನ್ನವಾದ ಹಾದಿಯನ್ನು ಆಯ್ದುಕೊಂಡಿದ್ದಾರೆ. ತಮ್ಮ ಹೋಟೆಲ್‍ಗೆ ನಿತ್ಯವೂ ಬರುವ ನೂರಾರು ಗ್ರಾಹಕರಿಗೆ ನೀಡುವ ಬಿಲ್‍ನ ಮುದ್ರಣದಲ್ಲಿ ನೇರವಾಗಿ “ಮಂಜುನಾಥ್ ಅವರಿಗೆ ವೋಟ್ ಮಾಡಿ” ಎಂಬ ವಿಶೇಷ ಸಂದೇಶವನ್ನು ಮುದ್ರಿಸಿದ್ದಾರೆ. ಇದರಿಂದಾಗಿ ಹೋಟೆಲ್‍ನಲ್ಲಿ ಊಟ ಮಾಡಿ ಬಿಲ್ ನೋಡುವ ಪ್ರತಿಯೊಬ್ಬ ಗ್ರಾಹಕರ ಕಣ್ಣುಗಳು ಆ ಸಂದೇಶದ ಮೇಲೆಯೇ ಬೀಳುತ್ತಿವೆ.
ವಿಭಿನ್ನ ಶೈಲಿಯ ಪ್ರಚಾರ

ತಮ್ಮ ನೆಚ್ಚಿನ ಸ್ಪರ್ಧಿಯ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಲು ಪ್ರತಿಯೊಬ್ಬರೂ ಒಂದಲ್ಲ ಒಂದು ಮಾರ್ಗವನ್ನು ಅನುಸರಿಸುತ್ತಾರೆ. ಆದರೆ ಹಳ್ಳಿ ಮನೆ ಹೋಟೆಲ್ ಮಾಲೀಕರು ವ್ಯಾಪಾರದ ಜೊತೆಗೆ ತಾವು ಮೆಚ್ಚಿದ ಕಲಾವಿದನಿಗೆ ವೋಟ್ ಮಾಡುವಂತೆ ಗ್ರಾಹಕರನ್ನು ಜಾಗೃತಿಗೊಳಿಸುತ್ತಿರುವ ರೀತಿ ನಿಜಕ್ಕೂ ವಿಶಿಷ್ಟವಾಗಿದೆ. ಬಿಲ್ ಕೈಗೆತ್ತಿಕೊಂಡ ಗ್ರಾಹಕರು ಅದರಲ್ಲಿರುವ ಬಿಗ್ ಬಾಸ್ ಸಂದೇಶವನ್ನು ನೋಡಿ ಅಚ್ಚರಿ ವ್ಯಕ್ತಪಡಿಸುವುದಲ್ಲದೆ, ಮಂಜುನಾಥ್ ಅವರ ಆಟದ ಬಗ್ಗೆಯೂ ಹೋಟೆಲ್‍ನಲ್ಲಿ ಚರ್ಚೆ ಆರಂಭಿಸುತ್ತಿದ್ದಾರೆ. ಸ್ಥಳೀಯವಾಗಿ ಈ ವಿನೂತನ ಪ್ರಚಾರದ ಶೈಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದು, ಮಂಜು ಅಭಿಮಾನಿಗಳ ವಲಯದಲ್ಲಿ ಫುಲ್ ಖುಷ್ ಆಗಿದ್ದಾರೆ.
ಬಿಗ್ ಬಾಸ್ ಪಯಣಕ್ಕೆ ಹೆಚ್ಚಿದ ಹವಾ

‘ಮಾಡ್ರನ್ ಕವಿ ಮಂಜು’ ಮೂಲತಃ ವಿಜಯನಗರದವರಾದ್ರೂ ಮೈಸೂರಿನಲ್ಲಿ ಪೂರ ಬೆಂಬಲ ಸಿಗುತ್ತಿದೆ. ಅವರು ತಮ್ಮ ವಿಭಿನ್ನ ಶೈಲಿಯ ಮಾತುಗಳು ಹಾಗೂ ವರ್ತನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚಾಗುತ್ತಿದ್ದು, ನಂಜನಗೂಡಿನ ಹೋಟೆಲ್ ಮಾಲೀಕರ ಈ ದಿಢೀರ್ ಸಾಥ್ ಅವರ ಗೆಲುವಿನ ಹಾದಿಯನ್ನು ಮತ್ತಷ್ಟು ಸುಲಭಗೊಳಿಸಬಹುದು ಎಂದು ಅಭಿಮಾನಿಗಳು ನಂಬಿದ್ದಾರೆ. ಒಟ್ಟಿನಲ್ಲಿ, ಬಿಗ್ ಬಾಸ್ ಸ್ಪರ್ಧಿಯೊಬ್ಬರ ಪರವಾಗಿ ವ್ಯಾಪಾರೀ ಸ್ಥಳದಲ್ಲೇ ಇಂತಹ ಸೃಜನಶೀಲ ಬೆಂಬಲ ಸಿಕ್ಕಿರುವುದು ಸದ್ಯದ ಮಟ್ಟಿಗೆ ಸೋಷಿಯಲ್ ಮೀಡಿಯಾದಲ್ಲೂ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed