Last Updated:
ಬಿಗ್ ಬಾಸ್ ಮನೆಯಿಂದ ಮಂಜ್ಯಾ ಎಲಿಮಿನೇಟ್ ಆಗಿದ್ದಾರೆ. ಹಾಗೆ ಹೊರ ಬಂದ್ಮೇಲೆ ಕಿಚ್ಚನ ಮುಂದೆ ಕಣ್ಣೀರಾಗಿದ್ದಾರೆ. ತಪ್ಪು ಮಾಡಿದೆ ಅಂತ ಗೋಳಾಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಏನ್ ಹೇಳಿದರು ಗೊತ್ತಾ? ಆ ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss) ಮನೆಯಿಂದ ಮಂಜ್ಯಾ ಮನೆಗೆ ಹೋಗಿದ್ದಾರೆ. ನಿಯಮ ಉಲ್ಲಂಘನೆ ಮಾಡಿರೋದಕ್ಕೆ ಬಿಗ್ ಬಾಸ್ ಎಲಿಮಿನೇಟ್ (Bigg Boss) ಮಾಡಿದ್ದಾರೆ. ಆದರೆ, ಈ ಒಂದು ಎಲಿಮಿನೇಷನ್ (Elimination) ಬಳಿಕ ಕಿಚ್ಚನ ಮುಂದೆ ಬಂದು ಮಂಜ್ಯಾ (Manjya) ಕಣ್ಣೀರು ಹಾಕಿದ್ದಾರೆ. ನಾನು ತಪ್ಪು ಮಾಡಿದ್ದೇನೆ. “ನನ್ನ ಹತ್ತು ವರ್ಷದ ಕನಸು ನಾನೇ ಹಾಳು ಮಾಡಿಕೊಂಡಿದ್ದೇನೆ. ನಿಮ್ಮನ್ನ ನೋಡುವುದೇ ಒಂದು ಕನಸು. ಆದರೆ, ನನ್ನ ತಪ್ಪಿನಿಂದ ನನ್ನ ಕನಸಿನ ಕಣ್ಣಲ್ಲೂ ನೀರು ತರಿಸಿದ್ದೇನೆ” ಹೀಗೆ ಹೇಳ್ತಾನೇ ಸುದೀಪ್ ಎದುರು ಕಣ್ಣೀರಾಗಿದ್ದಾರೆ. ಮುಂದೆ ಏನಾಯಿತು ಅನ್ನೋದು ಇಲ್ಲಿದೆ ಓದಿ.
ನನ್ನ ಕನಸಿನ ಕಣ್ಣಲ್ಲಿ…
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಸುದೀಪ್ ಅವರನ್ನು ನೋಡೋದೇ ಇವರಿಗೆ ಒಂದು ದೊಡ್ಡ ಕನಸಾಗಿತ್ತು. ಬಿಗ್ ಬಾಸ್ ಮನೆಯ ಎಂಟ್ರಿಯಿಂದ ಅದು ಸಾಧ್ಯವಾಗಿದೆ.
ಆದರೆ, ಸಿಕ್ಕ ಅವಕಾಶವನ್ನ ಸ್ವತಃ ಮಂಜ್ಯಾ ಹಾಳು ಮಾಡಿಕೊಂಡಿದ್ದಾರೆ. ಮನೆಯ ನಿಯಮ ಉಲ್ಲಂಘಿಸಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಏನ್ ಆಯಿತು..ಯಾಕೆ ಈ ಕಣ್ಣೀರು? ಈ ಪ್ರಶ್ನೆಯನ್ನ ಸುದೀಪ್ ಕೇಳ್ತಾರೆ. ಆಗ ಮಂಜ್ಯಾ ಹೇಳ್ತಾರೆ. ನಾನು ತಪ್ಪು ಮಾಡಿದ್ದೇನೆ. ಈ ತಪ್ಪು ಮಾಡಬಾರದಿತ್ತು ಅಂತಲೇ ಹೇಳ್ತಾರೆ.
ಈ ಮಾತು ಕೇಳಿದ ಸುದೀಪ್ ಒಂದು ಮಾತು ಹೇಳ್ತಾರೆ. ತಪ್ಪು ಆಯಿತು ಬಿಡಿ. ತಿದ್ದಿಕೊಳ್ಳಲು ಅವಕಾಶ ಇದೆ. ಇದು ಎಷ್ಟು ವರ್ಷದ ಕನಸು ನಿಮ್ಮದು.
ಹೀಗೆ ಕಿಚ್ಚ ಕೇಳ್ತಾರೆ. ಸರ್,10 ವರ್ಷದ ಕನಸು ನನ್ನದು ಅಂತಲೆ ಮಂಜ್ಯಾ ಹೇಳ್ತಾರೆ. ಇದನ್ನ ಹೇಳಿ ಇನ್ನೂ ಒಂದು ಮಾತನ್ನು ಮಂಜ್ಯಾ ಹೇಳ್ತಾರೆ.
“ನನ್ನ ಕನಸು ನೀವು, ನಿಮ್ಮ ಕಣ್ಣಲ್ಲಿ ನೀರು ಹಾಕಿಸಿದೆ”
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ನಿಮ್ಮನ್ನ ನೋಡೋದು ಸುಮ್ನೆ ಅಲ್ಲ. ಅದೊಂದು ದೊಡ್ಡ ಕನಸೆ ಆಗಿತ್ತು. ಆದರೆ, ನಿಮ್ಮ ಕಣ್ಣಲ್ಲಿ ನೀರು ನೋಡಿದೆ. ಇದಕ್ಕೆ ನಾನೂ ಕಾರಣ ಆಗಿದ್ದೇನೆ.
ಕಿಚ್ಚ ಸುದೀಪ್ ಹೆಗಲ ಮೇಲೆ ತಲೆ ಇಟ್ಟು ಮಂಜು ಅಳ್ತಾನೇ ಇತ್ತಾರೆ. ಆಗಲೇ ಕಿಚ್ಚ ಸುದೀಪ್ ತಮಾಷೆಯಾಗಿ ಒಂದು ಮಾತು ಹೇಳ್ತಾರೆ. ಹೀಗೆ ನೀವು ಅತ್ತು ಅತ್ತು ನನ್ನ ಬಟ್ಟೆ ಹಾಳು ಮಾಡ್ಬೇಡಿ ಅಂತಲೇ ಹೇಳ್ತಾರೆ.
ಅಲ್ಲಿಗೆ ದಿನದ ಪ್ರೋಮೋ ಎಂಡ್ ಆಗುತ್ತದೆ. ಭಾನುವಾರದ ಸೂಪರ್ ಸಂಡೆ ವಿತ್ ಬಾದ್ಷಾ ಸುದೀಪ ಅಲ್ಲಿಯೇ ಮಂಜನ್ಯಾ ಈ ಕಣ್ಣೀರ ಕತೆ ಬರುತ್ತದೆ ಅಂತಲೇ ಹೇಳಬಹುದು.














