Last Updated:
ಸುಲಭವಾಗಿ ಹಣ ಸಂಪಾದಿಸಲು ರೂಢಿ ಮಾಡಿಕೊಂಡಿರುವ ಕೆಲವು ಖದೀಮರು ದಿನದಿಂದ ದಿನಕ್ಕೆ ಮತ್ತಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ.
ಸಾಮಾನ್ಯವಾಗಿ ವಿಕಲಚೇತನರು ಅಥವಾ ಭಿಕ್ಷುಕರು (Beggars) ರೈಲಿನಲ್ಲಿ ಪ್ರಯಾಣಿಕರ ಬಳಿ ಹಣ ಕೇಳುವುದನ್ನು ನಾವು ನೋಡಿರುತ್ತೇವೆ. ಆದರೆ ಹಾವುಗಳ (Snakes) ಮೂಲಕ ಪ್ರಯಾಣಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವ ಗ್ಯಾಂಗ್ವೊಂದು ಪತ್ತೆಯಾಗಿದೆ. ಈ ಆಘಾತಕಾರಿ ಘಟನೆ ಬಿಹಾರದಲ್ಲಿ (Bihar) ಬೆಳಕಿಗೆ ಬಂದಿದೆ. ಸೋನ್‌ಪುರ್ ವಿಭಾಗದ ವ್ಯಾಪ್ತಿಯಲ್ಲಿ ಸಂಚರಿಸುವ ಜನಸೇವಾ ಎಕ್ಸ್‌ಪ್ರೆಸ್ (Janaseva Express) ರೈಲನ್ನು ಹತ್ತಿದ ಆರು ಮಂದಿ, ಕೈಯಲ್ಲಿ ಹಾವುಗಳನ್ನು ಹಿಡಿದುಕೊಂಡು ಪ್ರಯಾಣಿಕರನ್ನು ಬೆದರಿಸಿ ಹಣ ವಸೂಲಿ ಮಾಡಲು ಆರಂಭಿಸಿದ್ದಾರೆ. ಇದರಿಂದ ಪ್ರಯಾಣಿಕರು ತೀವ್ರ ಭೀತಿಗೊಳಗಾಗಿದ್ದರು.
ನಂತರ ಅವರನ್ನು ಸ್ಟೇಷನ್‌ಗೆ ಕರೆತಂದು ವಿಚಾರಣೆ ನಡೆಸಲಾಗಿದ್ದು, ಅವರೆಲ್ಲರೂ ಪರಸ್ಪರ ಸಂಬಂಧವಿಲ್ಲದ ಸುಳ್ಳು ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಹಿನ್ನೆಲೆಯ ಬಗ್ಗೆ ಪ್ರಶ್ನಿಸಿದಾಗ ಕೆಲವರು ಲಕ್ನೋ ಎಂದೂ, ಮತ್ತೆ ಕೆಲವರು ಹಿಮಾಚಲ ಪ್ರದೇಶ ಎಂದೂ ಹೊಂದಾಣಿಕೆಯಿಲ್ಲದ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಈಸಿಆರ್ (ECR) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸರಸ್ವತಿ ಚಂದ್ರ ತಿಳಿಸಿದ್ದಾರೆ.
ಇನ್ನು, ಈ ಘಟನೆ ಕುರಿತು ಮಾಹಿತಿ ನೀಡಿರುವ ಪೂರ್ವ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಸರಸ್ವತಿ ಚಂದ್ರ, ‘ರೈಲುಗಳಲ್ಲಿ ಹಾವು ತೋರಿಸಿ ಹಣ ವಸೂಲಿ ಮಾಡುವುದು ಸಂಪೂರ್ಣವಾಗಿ ಕಾನೂನುಬಾಹಿರ. ಪ್ರಯಾಣಿಕರು ಇಂತಹ ಕೃತ್ಯಗಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು. ರೈಲು ಪ್ರಯಾಣಿಕರ ಸುರಕ್ಷತೆಗೆ ಬದ್ಧವಾಗಿರುವ ರೈಲ್ವೆ ಇಲಾಖೆಯು, ಇಂತಹ ಕಿಡಿಗೇಡಿಗಳ ಚಟುವಟಿಕೆ ಕಂಡುಬಂದ ಕೂಡಲೇ ಆರ್‌ಪಿಎಫ್ ಅಥವಾ ‘ರೈಲ್ ಮದದ್’ಗೆ ದೂರು ನೀಡುವಂತೆ ಮನವಿ ಮಾಡಲಾಗಿದೆ.














