Last Updated:
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮೇಲೆ ಟಾಸ್ಕ್ ಶುರು ಆಗಿವೆ. ಮನೆ ಒಳಗೆ ಹೋದ 8 ಜನಕ್ಕೆ ವಜ್ರದ ಟಾಸ್ಕ್ ಬಂದಿದೆ. ಈ ವಜ್ರ ಯಾರ ಬಳಿ ಇದೆ ಅನ್ನೋ ಕುತೂಹಲ ಇದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss) ಈ ಸಲ ಸ್ಪೀಡ್ ಅಲ್ಲಿಯೇ ಇದ್ದಾರೆ. ಸ್ಪರ್ಧಿಗಳು ಮನೆಗೆ ಕಾಲಿಡೋದೇ ತಡ, ಟಾಸ್ಕ್ (Task) ಮೇಲೆ ಟಾಸ್ಕ್ ಕೊಡ್ತಾನೇ ಇದ್ದಾರೆ. ವಿಮಾನ ಇಳಿದು 8 ಜನ ಮನೆ ಒಳಗೆ ಹೋಗಿದ್ದಾರೆ. ಆದರೆ, ಮನೆ ಬಂದ್ಮೇಲೆ ಇವರಿಗೆ ಬಿಗ್ ಬಾಸ್ ಒಂದು ಟಾಸ್ಕ್ ಕೊಟ್ಟಿದ್ದಾರೆ. ಕೆಂಪು ಡಬ್ಬದಲ್ಲಿ ವರ್ಜ (Diamond) ಇದೆ ಅಂತ ಹೇಳಿದ್ದಾರೆ. ಯಾರ ಡಬ್ಬದಲ್ಲಿ (Box) ವ್ರಜ ಇದೆಯೋ ಅವರು ಸೀಕ್ರೆಟ್ ಮೆಂಟೇನ್ ಮಾಡ್ಬೇಕು ಅನ್ನುವ ಕಂಡಿಷನ್ ಕೂಡ ಇದೆ. ಹಾಗಾಗಿಯೇ ಈ ಟಾಸ್ಕ್ ಮಜವಾಗಿದೆ ಅನಿಸುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.














