Last Updated:
ಶೀಘ್ರದಲ್ಲೇ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಉದ್ಘಾಟನೆಯಾಗಲಿದೆ. ಇದು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ವಿಶೇಷ ವಿನ್ಯಾಸದಿಂದ ಜಗತ್ತಿನ ಗಮನ ಸೆಳೆಯಲಿದೆ.
ವಾರಣಾಸಿ (Varanasi) ಹೆಸರು ಕೇಳಿದರೆ ಮೊದಲು ನೆನಪಾಗುವುದು ಅಸ್ಸಿ ಘಾಟ್ (Assi Ghat), ಗಂಗಾ ಆರತಿ (Ganga Aarti), ಕಾಶಿ ವಿಶ್ವನಾಥ (Kashi Vishwanath) ದೇವಸ್ಥಾನ, ಲಸ್ಸಿ ಮತ್ತು ಚಾಟ್. ಈಗ ಈ ನಗರಕ್ಕೆ ಇನ್ನೊಂದು ಹೊಸ ಹೆಸರು ಸಿಗಲಿದೆ. ಶೀಘ್ರದಲ್ಲೇ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ (Cricket) ಮೈದಾನ ತೆರೆಯಲಿದೆ. ಇದು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ವಿಶೇಷ ವಿನ್ಯಾಸದಿಂದ ಜಗತ್ತಿನ ಗಮನ ಸೆಳೆಯಲಿದೆ.














