Last Updated:
ಬಿಗ್ ಬಾಸ್ ಕ್ಯಾಪ್ಟನ್ ಕಿಚ್ಚ ಸುದೀಪ್ ರೆಡಿ ಆಗಿದ್ದಾರೆ. ಬ್ಯಾಗ್ ಹಿಡಿದು ವಿಮಾನ ನಿಲ್ದಾಣಕ್ಕೂ ಬಂದಿದ್ದಾರೆ. ಈ ಸಲದ ಶೋ ವಿಮಾನಯಾನದ ಥೀಮ್ ಅಲ್ಲಿಯೇ ಇದೆ. ಅದಕ್ಕೆ ಪೂರಕವಾಗಿಯೇ ಈ ಪ್ರೋಮೋ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ ಸೀಸನ್-13 (Bigg Boss Season-13) ರ ಹೊಸ ಪ್ರೋಮೋ (Promo) ಹೊರ ಬಂದಿದೆ. ಇದರಲ್ಲಿ ಇಡೀ ಶೋ ಹೇಗೆ ಇರುತ್ತದೆ ಅನ್ನುವುದರ ಝಲಕ್ ಕೂಡ ಸಿಗುತ್ತಿದೆ. ಬಿಗ್ ಬಾಸ್ (Bigg Boss) ಮುನ್ನಡೆಸಿಕೊಂಡು ಹೋಗುವ ಕಿಚ್ಚ ಸುದೀಪ್ ಇಲ್ಲಿ ಪೈಲಟ್ ಆಗಿಯೇ ಕಂಗೊಳಿಸುತ್ತಿದ್ದಾರೆ. ಇನ್ನೇನು ವಿಮಾನ ಹೊರಡುತ್ತದೆ. ನಾನು ರೆಡಿ ಇದ್ದೇನೆ. ನೀವು ರೆಡಿನಾ ಅನ್ನುವ ಅರ್ಥದಲ್ಲಿಯೇ ಕಿಚ್ಚ ಸುದೀಪ್ (Kichcha Sudeepa) ಇಲ್ಲಿ ಎಕ್ಸಪ್ರೆಷನ್ ಕೊಟ್ಟಿದ್ದಾರೆ. ಇನ್ನು ಐದು ದಿನಗಳಲ್ಲಿ ಬಿಗ್ ಬಾಸ್ ಶುರು ಅನ್ನುವುದು ಗೊತ್ತಾಗುತ್ತದೆ. ಈ ಪ್ರೋಮೋದಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.














