Last Updated:
ಬಿಗ್ ಬಾಸ್ ಮನೆಯಿಂದ ಮಾಡರ್ನ್ ಕವಿ ಮಂಜ್ಯಾ ಮನೆಗೆ ಹೋಗಿದ್ದಾರೆ. ಬಿಗ್ ಬಾಸೇ ಮಂಜ್ಯಾನನ್ನ ಮನೆಗೆ ಕಳಿಸಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ ಸೀಸನ್-13 (Bigg Boss-13) ರಿಂದ ಮಾಡರ್ನ್ ಕವಿ ಮಂಜ್ಯಾ ಎಲಿಮಿನೇಟ್ (Eliminated) ಆಗಿದ್ದಾರೆ. ದೊಡ್ಮನೆಯ ನಿಯಮವನ್ನ ಉಲ್ಲಂಘನೆ ಮಾಡಿರುವುದಕ್ಕೇನೆ ಸ್ವತಃ ಬಿಗ್ ಬಾಸ್ (Bigg Boss) ಈ ಮಂಜ್ಯಾನನ್ನ ಮನೆಗೆ ಕಳಿಸಿದ್ದಾರೆ. ಕಾಮನ್‌ಮ್ಯಾನ್ ಆಗಿಯೆ ಮನೆಗೆ ಕಾಲಿಟ್ಟಿದ್ದ ಮಂಜ್ಯಾ (Manjya) ಮನೆಯ ಸದಸ್ಯರ ವಯಕ್ತಿಕ ವಿಷಯವನ್ನ ಇಟ್ಟುಕೊಂಡು ನಿಂದಿಸಿದ್ದಾರೆ. ಹಾಗಾಗಿಯೇ ಈ ಎಲ್ಲ ವಿಚಾರವನ್ನ ಹೇಳಿಯೇ ಬಿಗ್ ಬಾಸ್ ಈಗ ಮಾಡರ್ನ್ ಕವಿ ಮಂಜ್ಯಾನನ್ನ ಎಲಿಮಿನೇಟ್ ಮಾಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ.
ಮನೆಗೆ ಹೋದ ಮಂಜ್ಯಾ
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಹತ್ತು ಹಲವು ಸಲ ಈ ಬಗ್ಗೆ ಎಚ್ಚರಿಕೆನೂ ಕೊಡಲಾಗಿದೆ. ಆದರೂ ತಿದ್ದಿಕೊಳ್ಳದ ಮಂಜ್ಯಾ, ಈಗ ಮನೆಗೆ ಹೋಗಿದ್ದಾರೆ. ಎಲಿಮಿನೇಟ್ ಅಂತ ಹೇಳುವ ಮೊದಲು ಮೇಲೆ ಹೇಳಿದ ಎಲ್ಲ ವಿಚಾರಗಳನ್ನ ಬಿಗ್ ಬಾಸ್ ಹೇಳಿಯೇ ಬಿಟ್ಟಿದ್ದಾರೆ.
ಈ ಒಂದು ಎಲಿಮಿನೇಷನ್‌ನಿಂದ ಯಶಸ್ ತುಂಬಾನೆ ಖುಷಿ ಆಗಿದ್ದಾರೆ. ಥ್ಯಾಂಕ್ಸ್ ಬಿಗ್ ಬಾಸ್, ಜಸ್ಟಿಸ್ ಸಿಕ್ಕಿದೆ ಬಿಗ್ ಬಾಸ್. ಸ್ವೀಟ್ ತಿನ್ನೋಣ ಅಂತಲೇ ಯಶಸ್ ಸಿಹಿ ತಿಂದ್ದಾರೆ.
ಮನೆಯಿಂದ ಹೊರಗೆ ಹೋಗುವಾಗ ಮಂಜ್ಯಾ ಕೈ ಮಾಡ್ತಾರೆ. ಆದರೆ, ಯಾರಿಗೆ ಅನ್ನುದು ಗೊತ್ತಾಗಲ್ಲ. ಅಲ್ಲಿಗೆ ಈ ದಿನದ ಎಲಿಮಿನೇಷನ್ ಪ್ರೋಮೋ ಎಂಡ್ ಆಗುತ್ತದೆ.
ಮಂಜ್ಯಾ ಕೈ ಮಾಡಿದ್ಯಾರಿಗೆ
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಮಂಜ್ಯಾನ ಈ ಎಲಿಮಿನೇಷನ್ ಅನ್ನ ಯಶಸ್ ಸೆಲೆಬ್ರೇಟ್ ಮಾಡಿದ್ದಾರೆ. ಗಿಚ್ಚಿ ಗಿಲಿಗಿಲಿ ಮಂಜ್ಯಾ, ಸೌಂದರ್ಯ ಶೆಟ್ಟಿ ಕೂಡ ಇದೇ ಕೆಲಸ ಮಾಡಿದ್ದಾರೆ ಅಂತ ಹೇಳಬಹುದು.
ಕನ್ನಡದ ಈ ಹಿಂದಿನ ಬಿಗ್ ಬಾಸ್ ಸೀಸನ್‌ಗಳಲ್ಲಿ ಒಂದಷ್ಟು ಸ್ಪರ್ಧಿಗಳು ಅರ್ಧದಲ್ಲಿಯೇ ಮನೆಗೆ ಹೋಗಿದ್ದರು. ಇವರೂ ಮನೆಯ ನಿಯಮ ಉಲ್ಲಂಘನೆ ಮಾಡಿದ್ದರು. ಇವರಲ್ಲಿ ಹುಚ್ಚ ವೆಂಕಟ್, ಸಂಯುಕ್ತಾ ಹೆಗಡೆ, ಲಾಯರ್ ಜಗದೀಶ್ ಎಲಿಮಿನೇಟ್ ಆಗಿದ್ದರು.
ಹಾಗಾಗಿಯೇ ನಿಮ್ಮನ್ನಕಳಿಸುತ್ತಿದ್ದೇವೆ ಅಂತಲೇ ಹೇಳಿದ್ದಾರೆ. ಭಾನುವಾರದ ಕಿಚ್ಚನ ಸಂಚಿಕೆಯ ದಿನದ ಪ್ರೋಮೋದಲ್ಲಿಯೇ ಈ ವಿಷಯ ರಿವೀಲ್ ಆಗಿದೆ.
ಮಂಜುನಾಥ್ ಎಲಿಮಿನೇಟ್ ಅಂತಲೇ ಅಧಿಕೃತವಾಗಿಯೇ ಕಲರ್ಸ್ ಕನ್ನಡ ತನ್ನ ಪ್ರೋಮೋದಲ್ಲಿ ಹೇಳಿಕೊಂಡಿದೆ ಅಂತ ಹೇಳಬಹುದು.














