Last Updated:
ಬಿಗ್ ಬಾಸ್ ಸೀಸನ್ ಶುರು ಆಗುವ ಮುನ್ನ ಒಂದು ಕುತೂಹಲ ಇರ್ತಾ ಇತ್ತು. ಮನೆ ಒಳಗೆ ಹೋಗುವ ಸ್ಪರ್ಧಿಗಳು ಯಾರು ಅನ್ನುವ ಪ್ರಶ್ನೆ ಇರ್ತಾ ಇತ್ತು. ಆದರೆ, ಈ ಸಲ ಸ್ವತಃ ಬಿಗ್ ಬಾಸ್ ಕೆಲವು ಸ್ಪರ್ಧಿಗಳನ್ನ ರಿವೀಲ್ ಮಾಡಿದೆ. ಆದರೂ ಈ ಬಗ್ಗೆ ಕುತೂಹಲ ಹಾಗೆ ಇದೆ. ಯಾಕೆ ಅನ್ನೋ ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss) ಮನೆ ಒಳಗೆ ಯಾರು ಹೋಗುತ್ತಾರೆ? ಈ ಸಲ ಸೆಲೆಬ್ರಿಟಿಗಳು (Celebrities) ಯಾರು? ಸಾಮಾನ್ಯ ಜನರ ಜೊತೆಗೆ ಯಾರು ಇರ್ತಾರೆ? ಈ ಪ್ರಶ್ನೆಗಳಿವೆ. ಇದಕ್ಕೆ ಉತ್ತರವನ್ನ ಬಿಗ್ ಬಾಸ್ ಟೀಮ್ (Bigg Boss Team) ಒಂದು ಹೊಸ ಐಡಿಯಾ ಮೂಲಕ ಕೊಟ್ಟಿದೆ. ಹಲವು ಸ್ಪರ್ಧಿಗಳನ್ನು ಈಗ ರಿವೀಲ್ ಮಾಡಿದೆ. ಆದರೆ, ಮುಖ ತೋರಿಸೋದಿಲ್ಲ. ಮುಖವನ್ನ ಹೈಡ್ ಮಾಡಿಯೇ ಆಯಾ ಸ್ಪರ್ಧಿಗಳ ವಿಡಿಯೋ ತೋರಲಾಗಿದೆ. ಈ ಒಂದು ಪ್ರೋಮೋ (Promo) ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.














