Bigg Boss: ಬರ್ತ್​ಡೇ ದಿನವೇ ಆಸ್ಪತ್ರೆ ಸೇರಿದ ಬಿಗ್​ಬಾಸ್ ಮಾಜಿ ಸ್ಪರ್ಧಿ | | ACTPnews

ಜಾಸ್ಮಿನ್-ಅಲಿ


Last Updated:

Bigg Boss: ದುಬೈ  (Dubai) ಪ್ರವಾಸದಲ್ಲಿದ್ದ ಖ್ಯಾತ ಕಿರುತೆರೆ ನಟಿ ಹಾಗೂ ಮಾಜಿ ಬಿಗ್​ಬಾಸ್ ಸ್ಪರ್ಧಿ ಬರ್ತ್​ಡೇ (Birthday) ಸೆಲೆಬ್ರೇಟ್ ಮಾಡುವ ಬದಲು ಆಸ್ಪತ್ರೆಗೆ ಸೇರುವ ಹಾಗಾಗಿದೆ.

ಜಾಸ್ಮಿನ್-ಅಲಿ
ಜಾಸ್ಮಿನ್-ಅಲಿ

ಮಾಜಿ ಬಿಗ್​ಬಾಸ್ (Bigg Boss) ಸ್ಫರ್ಧಿ ಬರ್ತ್​ಡೇ ದಿನವೇ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ದುಬೈ  (Dubai) ಪ್ರವಾಸದಲ್ಲಿದ್ದ ಖ್ಯಾತ ಕಿರುತೆರೆ ನಟಿ ಹಾಗೂ ಮಾಜಿ ಬಿಗ್​ಬಾಸ್ ಸ್ಪರ್ಧಿ ಬರ್ತ್​ಡೇ (Birthday) ಸೆಲೆಬ್ರೇಟ್ ಮಾಡುವ ಬದಲು ಆಸ್ಪತ್ರೆಗೆ ಸೇರುವ ಹಾಗಾಗಿದೆ. ಅಷ್ಟಕ್ಕೂ ಆಗಿದ್ದೇನು?

ನಟಿ ಜಾಸ್ಮಿನ್ ಭಾಸಿನ್ ದುಬೈ ಪ್ರವಾಸದ ವೇಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿಢೀರ್ ನಟಿ ಆಸ್ಪತ್ರೆಗೆ ದಾಖಲಾದ ನಂತರ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಸಡನ್ ಟ್ವಿಸ್ಟ್ ಬಂದಿದೆ. ಅವರ ಬಾಯ್​ಫ್ರೆಂಡ್, ನಟ ಅಲಿ ಗೋನಿ ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರುವಾಗ ಈ ಸುದ್ದಿಯನ್ನು ಶೇರ್ ಮಾಡಿದರು.

ಬಿಗ್​ಬಾಸ್ ಜೋಡಿಯ ವೆಕೇಷನ್ ಆಸ್ಪತ್ರೆಯ ವಾಸ್ತವ್ಯವಾಗಿ ಮಾರ್ಪಟ್ಟಿದೆ ಎಂದು ಬಹಿರಂಗಪಡಿಸಿದರು. ಆಸ್ಪತ್ರೆಯಲ್ಲಿ ಜಾಸ್ಮಿನ್ ಪಕ್ಕದಲ್ಲಿ ಇರುವ ಫೋಟೋಗಳನ್ನು ಅಲಿ ಪೋಸ್ಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಜಾಸ್ಮಿನ್ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾಗ ನಟ ಆಕೆಯನ್ನು ಅಪ್ಪಿಕೊಳ್ಳುತ್ತಿರುವುದು ಕಾಣಬಹುದು.

ಇನ್ನೊಂದು ಫೋಟೋದಲ್ಲಿ ನಟಿ ವೀಲ್‌ಚೇರ್‌ನಲ್ಲಿ ಕುಳಿತಿರುವುದನ್ನು ತೋರಿಸಲಾಗಿದೆ. ಆಸ್ಪತ್ರೆಯಂತೆ ಕಾಣುವ ಸ್ಥಳದಲ್ಲಿ ಜಾಸ್ಮಿನ್ ತನ್ನ ಹುಟ್ಟುಹಬ್ಬದ ಕೇಕ್ ಕಟ್ ಮಾಡುವ ವೀಡಿಯೊವನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಫೋಟೋಗಳ ಜೊತೆಗೆ, ಆಲಿ ತನ್ನ ಗರ್ಲ್​ಫ್ರೆಂಡ್​​ಗೆ ಹುಟ್ಟುಹಬ್ಬದ ಭಾವನಾತ್ಮಕ ವಿಶ್ ಕೂಡಾ ಹಾಕಿದ್ದಾರೆ. ಆಕೆಯ ಅನಾರೋಗ್ಯವನ್ನು ನೋಡುವುದು ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ವಿವರಿಸಿದ್ದಾರೆ.

“ಜನ್ಮದಿನದ ಶುಭಾಶಯಗಳು, ಜಾಸ್ಮಿನ್. ನಾವು ನಿಮ್ಮ ಹುಟ್ಟುಹಬ್ಬವನ್ನು ಆಚರಿಸಲು ಇಲ್ಲಿಗೆ ಬಂದಿದ್ದೆವು, ಆದರೆ ವಿಧಿಯ ಪ್ಲಾನ್ ಬೇರೆ ಇತ್ತು. ಹುಟ್ಟುಹಬ್ಬದ ಸುಂದರ ನೆನಪುಗಳನ್ನು ಹುಟ್ಟುಹಾಕುವ ಬದಲು ನಾವು ಆಸ್ಪತ್ರೆಯ ಕೋಣೆಯಲ್ಲಿದ್ದೇವೆ. ನೀವು ನೋವಿನಿಂದ ಕಷ್ಟಪಡುವುದನ್ನು ನೋಡುವುದು ಈ ಪ್ರವಾಸದ ಅತ್ಯಂತ ಕಠಿಣ ಭಾಗವಾಗಿದೆ ಎಂದಿದ್ದಾರೆ.

ನೀವು ಆರೋಗ್ಯವಾಗಿ ಮತ್ತು ಮತ್ತೆ ನಗುತ್ತಿರುವುದನ್ನು ನೋಡುವುದಕ್ಕಾಗಿ ನಾನು ಪ್ರತಿ ಸೆಲೆಬ್ರೇಷನ್ ಕೂಡಾ ಬಿಟ್ಟುಕೊಡಬಲ್ಲೆ” ಎಂದು ಅವರು ಬರೆದಿದ್ದಾರೆ. ನಂತರ ಅವರು ತಮ್ಮ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡುವ ಇನ್‌ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿದರು.

ನನಗೆ ಮೆಸೇಜ್ ಕಳುಹಿಸುವ ಮತ್ತು ಕಾಲ್ ಮಾಡಿದ ಎಲ್ಲರಿಗೂ ಈ ಮೆಸೇಜ್! ಪ್ರೀತಿ, ಪ್ರಾರ್ಥನೆ ಮತ್ತು ಸಂದೇಶಗಳಿಗಾಗಿ ಎಲ್ಲರಿಗೂ ಧನ್ಯವಾದಗಳು. ಇದು ತುಂಬಾ ಕಷ್ಟಕರ ಮತ್ತು ಭಾವನಾತ್ಮಕ ಕೆಲವು ದಿನಗಳು. ನಿಮ್ಮ ಮೆಸೇಜ್, ಕಾಲ್​ಗೆ ರೆಸ್ಪಾಂಡ್ ಮಾಡಲು ಅಥವಾ ನಿಮ್ಮ ಕರೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದರೆ ಕ್ಷಮಿಸಿ. ಇದೀಗ, ನನ್ನ ಸಂಪೂರ್ಣ ಗಮನ ಅವಳ ಮೇಲಿದೆ ಎಂದಿದ್ದಾರೆ.

ಅವಳು ಅತ್ಯುತ್ತಮ ಆರೈಕೆಯನ್ನು ಪಡೆಯುತ್ತಿದ್ದಾಳೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ. ದಯವಿಟ್ಟು ಅವಳಿಗಾಗಿ ಪ್ರಾರ್ಥಿಸಿ. ಅವಳು ಶೀಘ್ರ ಗುಣಮುಖಳಾಗುತ್ತಾಳೆ” ಎಂದು ಅಲಿ ಹೇಳಿದರು.

ಇದನ್ನೂ ಓದಿ: Vijayalakshmi Darshan: ದರ್ಶನ್​ ಜೊತೆಗಿನ ಲವ್ಲೀ ಫೋಟೋ ಹಾಕಿ ‘ಮಾತಾಡು ನೀ’ ಎಂದ ವಿಜಯಲಕ್ಷ್ಮಿ

ಜಾಸ್ಮಿನ್ ಮತ್ತು ಅಲಿ ಮೊದಲು ಭೇಟಿಯಾದದ್ದು ಖತ್ರೋನ್ ಕೆ ಖಿಲಾಡಿಯಲ್ಲಿ ಭಾಗವಹಿಸುವಾಗ. ವರ್ಷಗಳ ಕಾಲ ಡೇಟಿಂಗ್ ವದಂತಿಗಳು ಅವರನ್ನು ಸುತ್ತುವರೆದಿದ್ದರೂ, ಇಬ್ಬರೂ ತಾವು ಕೇವಲ ಆಪ್ತ ಸ್ನೇಹಿತರು ಎಂದು ಹೇಳಿಕೊಂಡರು. ಬಿಗ್ ಬಾಸ್ 14 ರಲ್ಲಿ ಭಾಗವಹಿಸಿದ್ದಾಗ ಅವರು ಅಧಿಕೃತವಾಗಿ ತಾವು ಸಂಬಂಧದಲ್ಲಿದ್ದೇವೆ ಎಂದು ದೃಢಪಡಿಸಿದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports