ಬೃಂದಾವಿಹಾರಿ ಕನ್ನಡದ ಸಿನಿಮಾ. ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರದ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕೃಷ್ಣಂ ಪ್ರಣಯ ಸಖಿ ಆದ್ಮೇಲೆ ಡೈರೆಕ್ಟ್ ಶ್ರೀನಿವಾಸ್ ರಾಜು ಈ ಚಿತ್ರ ಮಾಡಿದ್ದಾರೆ.
ಒಂದೇ ವಾರ ತ್ರಿಪಲ್ ಧಮಾಕಾ
(ಚಿತ್ರ ಕೃಪೆ: ಗೋಲ್ಡನ್ ಸ್ಟಾರ್ ಗಣೇಶ್ ಇನ್ಸ್ಟಾಗ್ರಾಮ್)
ಹೇಶಮ್ ಅಬ್ದುಲ್ ವಹಾಬ್ ಮ್ಯೂಸಿಕ್ ಮಾಡಿದ್ದಾರೆ. ಇವರ ಸಂಗೀತ ಮತ್ತು ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಮೋಡಿ ಮಾಡ್ತಿದೆ. ಚಿತ್ರದಲ್ಲಿ ದೇವಿಕಾ ಭಟ್, ಮಾಳವಿಕಾ ಶರ್ಮಾ ನಟಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಇಲ್ಲಿ ಮಾಡರ್ನ್ ಕೃಷ್ಣನ ರೀತಿ ಕಾಣಿಸುತ್ತಿದ್ದಾರೆ. ಈ ಚಿತ್ರ ಅಕ್ಟೋಬರ್-16 ರಂದು ತೆರೆ ಕಾಣುತ್ತಿದೆ.
ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ಗಳಿವೆ. ಇವುಗಳನ್ನ ಕನ್ನಡಿಗ ಚೇತನ್ ಡಿಸೋಜಾ ಮಾಡಿದ್ದಾರೆ. ಈ ಚಿತ್ರವೂ ಮಲ್ಟಿಸ್ಟಾರರ್ ಸಿನಿಮಾನೇ ಆಗಿದೆ. ದೊಡ್ಡಮಟ್ಟದಲ್ಲಿಯೇ ಇದು ತೆರೆ ಕಾಣುತ್ತಿದೆ.
ರಣಬಾಲಿ ಚಿತ್ರ ಬ್ರಿಟಿಷ್ ಆಡಳಿತದ ಕತೆಯನ್ನ ಹೊಂದಿದೆ. 1854 ರಿಂದ 1878ರ ಅವಧಿಯಲ್ಲಿ ಬ್ರಿಟಿಷ್ ಇಂಡಿಯಾದ ರಾಯಲಸೀಮಾ ಪ್ರಾಂತ್ಯದಲ್ಲಿ ನಡೆದ ನೈಜ ಹಾಗೂ ರಕ್ತಸಿಕ್ತ ಘಟನೆಗಳನ್ನು ಇದು ಆಧರಿಸಿದೆ.
ಜೈಲರ್-2
(ಚಿತ್ರ ಕೃಪೆ: ಜೈಲರ್-2 ಸಿನಿಮಾ ಇನ್ಸ್ಟಾಗ್ರಾಮ್)
ಶಿಂಗನಮಲ ಬೊಬ್ಬಿಲಿ ರಣಬಾಲಿ ಪಾತ್ರದಲ್ಲಿ ವಿಜಯ್ ದೇವರಕೊಂಡ ಅಭಿನಯಿಸಿದ್ದಾರೆ. ಪತ್ನಿ ಪಾತ್ರದಲ್ಲಿ ನಟಿ ಹಾಗೂ ಪತ್ನಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ.
ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದು ರೋಚಕವಾಗಿದೆ. ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಈ ಚಿತ್ರದಲ್ಲಿ ಬ್ರಿಟಿಷ್ ಅಧಿಕಾರಿ ಆಗಿದ್ದಾರೆ. ಖಡಕ್ ವಿಲನ್ ಕೂಡ ಇವರೇ ನೋಡಿ.
ಹಾಗೆ ಆ ದಿನಗಳ ಅಸಲಿ ಸತ್ಯವನ್ನು ಇದು ಕಟ್ಟಿಕೊಡುತ್ತದೆ. ತೆಲುಗು, ತಮಿಳು, ಹಿಂದಿ, ಮಲೆಯಾಳಂ, ಕನ್ನಡ ಹೀಗೆ ಬಹುಭಾಷೆಯಲ್ಲಿ ಈ ಸಿನಿಮಾ ಬರ್ತಿದೆ.
ರಣಬಾಲಿ ಟ್ರೈಲರ್
(ಚಿತ್ರ ಕೃಪೆ: ರಣಬಾಲಿ ಸಿನಿಮಾ ಟೀಮ್)
ಈ ಮೂರು ಸಿನಿಮಾಗಳಲ್ಲಿ ರಣಬಾಲಿ ಹಾಗೂ ಬೃಂದಾವಿಹಾರಿ ಒಂದೇ ದಿನ ರಿಲೀಸ್ ಆಗುತ್ತಿವೆ. ಅದು ಅಕ್ಟೋಬರ್-16 ರಂದು ಈ ಎರಡೂ ಸಿನಿಮಾಗಳು ತೆರೆ ಕಾಣುತ್ತಿವೆ.
ಆದರೆ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್-2 ಸಿನಿಮಾ ಒಂದು ದಿನ ಮುಂಚೆ ಬರ್ತಿದೆ. ಅಂದ್ರೆ, ಅಕ್ಟೋಬರ್-15 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ.
ಹಾಗಾಗಿ ಕನ್ನಡ ಚಿತ್ರ ಪ್ರೇಮಿಗಳು ಬೃಂದಾವಿಹಾರಿ ನೋಡಬಹುದು. ತೆಲುಗು ಸಿನಿಮಾ ಪ್ರೇಮಿಗಳು ರಣಬಾಲಿ ವೀಕ್ಷಿಸಬಹುದು. ತಮಿಳು ಚಿತ್ರ ಲವರ್ಸ್ ಜೈಲರ್-2 ಸಿನಿಮಾ ನೋಡಬಹುದು.









