Bhavya Gowda: ಭವ್ಯ ಗೌಡ ಫೈನಲ್ ಆಗೋ ಮುನ್ನ 19 ನಟಿಯರ ಅಪ್ರೋಚ್ ಮಾಡಿದ್ದ ದೇವಿ ಚಿತ್ರದ ಹೀರೋ! | | ACTPnews

ಭವ್ಯ ಗೌಡ ಆಯ್ಕೆ ಮುಂಚೆ 19 ನಾಯಕಿಯರನ್ನ ಅಪ್ರೋಚ್ ಮಾಡಿದ್ದ ದೇವಿ ಚಿತ್ರದ ಹೀರೋ!


Last Updated:

ಬಿಗ್ ಬಾಸ್ ಖ್ಯಾತಿಯ ನಟಿ ಭವ್ಯ ಗೌಡ ನಾಯಕಿ ಆಗುತ್ತಿದ್ದಾರೆ. ದೇವಿ ಅನ್ನೋದು ಈ ಚಿತ್ರಕ್ಕೆ ಇಟ್ಟಿರೋ ಟೈಟಲ್ ಆಗಿದೆ. ಈ ಚಿತ್ರದ ನಾಯಕ ಚೇತನ್ ಗೌಡ ಸಾಕಷ್ಟು ಸತ್ಯಗಳನ್ನ ಹೇಳಿಕೊಂಡಿದ್ದಾರೆ. ಸಿನಿಮಾದ ಮೊದಲ ಪ್ರೆಸ್ ಮೀಟ್ ಅಲ್ಲಿ ನಾಯಕಿಯರು ತಮಗೆ ಅದೆಷ್ಟು ತೊಂದರೆ ಕೊಟ್ಟರು ಅಂತ ಹೇಳಿದ್ದಾರೆ. ಇನ್ನಷ್ಟು ಸಾಕಷ್ಟು ವಿಷಯ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ಭವ್ಯ ಗೌಡ ಆಯ್ಕೆ ಮುಂಚೆ 19 ನಾಯಕಿಯರನ್ನ ಅಪ್ರೋಚ್ ಮಾಡಿದ್ದ ದೇವಿ ಚಿತ್ರದ ಹೀರೋ!
ಭವ್ಯ ಗೌಡ ಆಯ್ಕೆ ಮುಂಚೆ 19 ನಾಯಕಿಯರನ್ನ ಅಪ್ರೋಚ್ ಮಾಡಿದ್ದ ದೇವಿ ಚಿತ್ರದ ಹೀರೋ!

ಸ್ಯಾಂಡಲ್‌ವುಡ್‌ನ (Sandalwood) ಕರಾಳ ಸತ್ಯವನ್ನ ಯುವ ರೈತ ಹಾಗೂ ನವ ನಟ ಚೇತನ್ ಗೌಡ (Chethan Gowda) ಬಿಚ್ಚಿಟ್ಟಿದ್ದಾರೆ. 10 ಜನ ಡೈರೆಕ್ಟರ್ಸ್ ಸಿನಿಮಾ ಮಾಡ್ತೀನಿ ಅಂತ ಮೋಸ ಮಾಡಿದ್ದಾರೆ. ಒಂದಷ್ಟು ದುಡ್ಡು ಕಿತ್ತುಕೊಂಡಿದ್ದಾರೆ ಅಂತಲೂ ಹೇಳಿಕೊಂಡಿದ್ದಾರೆ. ಇನ್ನು ನಾಯಕಿಯ ವಿಚಾರವೋ? ಇದು ದೊಡ್ಡ ಲಿಸ್ಟೇ ಇದೆ. ಬರೋಬ್ಬರಿ 20 ಜನ ನಾಯಕ ನಟಿಯರನ್ನ ಅಪ್ರೋಚ್ ಮಾಡಿದ್ದಾರೆ. ಕತೆ ಚೆನ್ನಾಗಿದೆ, ಅದಕ್ಕೆ ಚೇತನ್ ಗೌಡ ಹೀರೋ ಅಂದಾಗ ಮೂಗುಮುರಿದವರೇ ಹೆಚ್ಚು. ಆದರೆ, ಕೊನೆಗೆ ಈ ದೇವಿ ಚಿತ್ರಕ್ಕೆ (Devi Movie) ಭವ್ಯ ಗೌಡ ನಾಯಕಿ (Bhavya Gowda Heroine) ಆಗಿದ್ದಾರೆ. ಇನ್ನೂ ಒಂದು ವಿಷಯ ಅಂದರೆ ಇವರು ಮುಹೂರ್ತಕ್ಕೂ ಬಂದಿಲ್ಲ. ಪ್ರೆಸ್ ಮೀಟ್‌ಗೂ ಬಂದಿಲ್ಲ. ಕ್ಷಮೆ ಇರಲಿ ಅಂತ ಸಂಜೆ ವಿಡಿಯೋ ಮೂಲಕ Sorry ಕೇಳಿರೋದು ಇದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ದೇವಿ ಚಿತ್ರದ ಕಷ್ಟದ ಕ್ಷಣಗಳು

ದೇವಿ ಚಿತ್ರದ ನಾಯಕ ನಟ ಚೇತನ್ ಗೌಡ ಸಾಕಷ್ಟು ಸತ್ಯಗಳನ್ನ ಹೇಳಿದ್ದಾರೆ. 10 ಜನ ಡೈರೆಕ್ಟರ್ಸ್ ಮೋಸ ಮಾಡಿದ್ದಾರೆ. ಸಿನಿಮಾ ಮಾಡ್ತೀನಿ ಅಂತ ದುಡ್ಡು ಕಿತ್ತುಕೊಂಡವರೂ ಇದ್ದಾರೆ.

The Devi film hero and producer approached 19 actresses before selecting Bhavya Gowda

ಪ್ರಕಾಶ್ ಈ ಸಿನಿಮಾ ಡೈರೆಕ್ಟರ್

(ಚಿತ್ರ ಕೃಪೆ: ಭವ್ಯ ಗೌಡ ಇನ್‌ಸ್ಟಾಗ್ರಾಮ್)

ಚಿತ್ರೀಕರಣ ಶುರು ಮಾಡಿ ಅರ್ಧಕ್ಕೆ ನಿಲ್ಲಿಸಿದವರೂ ಇದ್ದಾರೆ. ಇಷ್ಟೆಲ್ಲ ಆದ್ಮೇಲೆ ಏನು ಮಾಡೋದು ಹೇಳಿ?. ಆದರೆ, ನಮ್ಮ ಈ ಚಿತ್ರದ ಕತೆಯನ್ನ ಕೇಳಿದ ನಾಯಕಿಯರು ಲಿಸ್ಟ್ ಚಿಕ್ಕದಿಲ್ಲ ಬಿಡಿ. ಅದು ದೊಡ್ಡದೇ ಇದೆ. ಎಲ್ಲರ ಹೆಸರೂ ಬರೆದುಕೊಂಡಿದ್ದೇನೆ. ಸಿನಿಮಾ ಹೊರ ಬಂದ್ಮೇಲೆ ಅವರಿಗೆ ಉತ್ತರ ಕೊಡ್ತೀನಿ ಅಂತಲೂ ಚಿತ್ರದ ಪ್ರೆಸ್ ಮೀಟ್ ಅಲ್ಲಿಯೇ ಚೇತನ್ ಗೌಡ ಹೇಳಿದ್ದಾರೆ.

ಕತೆ ಸೂಪರ್, ಹೀರೋ ನೀವೇನಾ?

ದೇವಿ ಚಿತ್ರದ ಕತೆಯನ್ನ ಒಂದೋ ಎರಡೋ ಚಿತ್ರದ ಮಾಡಿದ ನಾಯಕಿಯುರು ಕೇಳಿದ್ದಾರೆ. ಕತೆ ಸೂಪರ್ ಆಗಿದೆ. ಹೀರೋ ನಾನೇ ಅಂತ ಹೇಳಿದಾಗ ಮೂಗುಮುರಿದವರೇ ಹೆಚ್ಚು.

ಕತೆ ಸೂಪರ್ ಅಂತ ಹೇಳಿದವರು ಚಿತ್ರವನ್ನ ಒಪ್ಪಿಕೊಳ್ಳಲೇ ಇಲ್ಲ. ನಾಯಕಿಯರು ನಿಜಕ್ಕೂ ತುಂಬಾನೆ ತೊಂದರೆ ಕೊಟ್ಟಿದ್ದಾರೆ. ಅವರ ಹೆಸರನ್ನ ಬರೆದು ಇಟ್ಟುಕೊಂಡಿದ್ದೇನೆ. ಆದರೆ, ಇಲ್ಲಿ ಹೇಳೋದಿಲ್ಲ. ಅವರಿಗೂ ಕರಿಯರ್ ಇರುತ್ತದೆ ಅಂತಲು ಯುವ ರೈತ ಚೇತನ್ ಗೌಡ ಹೇಳಿಕೊಂಡಿದ್ದಾರೆ.

ಪ್ರಕಾಶ್ ಈ ಸಿನಿಮಾ ಡೈರೆಕ್ಟರ್

ದೇವಿ ಕತೆಯನ್ನ ಸ್ವತಃ ಚೇತನ್ ಗೌಡ ಅವರೇ ಬರೆದುಕೊಂಡಿದ್ದಾರೆ. ಮಂತ್ರಾಲಯಕ್ಕೆ ಹೋಗಿದ್ದಾರೆ. ಅಲ್ಲಿಂದ ಹೊರ ಬಂದ್ಮೆಲೆ 20 ನಿಮಿಷದಲ್ಲಿಯೇ ಒಂದು ಕತೆ ರೆಡಿ ಮಾಡಿದ್ದಾರೆ.

The Devi film hero and producer approached 19 actresses before selecting Bhavya Gowda

ಕತೆ ಸೂಪರ್, ಹೀರೋ ನೀವೇನಾ?

ಹಾಗೆ ಮುಂದೆ ಹೋಗ್ತಾ ಪಕ್ಕಕ್ಕೆ ನೋಡಿದ್ದಾರೆ. ಅಲ್ಲೊಂದು ದೇವಸ್ಥಾನ ಇತ್ತು. ಅದು ದೇವಿ ಗುಡಿನೆ ಆಗಿತ್ತು. ಅದೇ ನಮ್ಮ ಚಿತ್ರದ ಟೈಟಲ್ ಅಂತಲೇ ತಾವೇ ಬರೆದ ಕತೆಗೆ ದೇವಿ ಅಂತ ಹೆಸರಿಟ್ಟಿದ್ದಾರೆ.

ದೇವಿ ಅನ್ನುವ ಟೈಟಲ್ ಇಟ್ಟುಕೊಂಡು ಮಧು ಬಂಗಾರಪ್ಪ ಒಂದು ಚಿತ್ರ ಶುರು ಮಾಡಿದ್ದಾರೆ. ಆದರೆ, ಅದು ನಿಂತು ಹೋಗಿದೆ. ಹಾಗಂತ ಇವರಿಗೆ ಟೈಟಲ್ ಸಿಕ್ಕಿಲ್ಲ ಅನ್ಕೋಬೇಡಿ. ಫಿಲ್ಮ್ ಚೇಂಬರ್‌ನಿಂದ ಟೈಟಲ್ ಸಿಕ್ಕಿದೆ. ಆ ಟೈಟಲ್ ಇಟ್ಟುಕೊಂಡೇ ಈ ಸಿನಿಮಾ ಶುರು ಮಾಡಿದ್ದಾರೆ.

ಮಾಸ್ತಿ ಮಾತುಗಳ ಸ್ಪರ್ಶ

ಈ ದೇವಿ ಚಿತ್ರಕ್ಕೆ ಮಾಸ್ತಿ ಅವರ ಮಾತುಗಳ ಸ್ಪರ್ಶ ಇದೆ. ಅಂದ್ರೆ, ಡೈಲಾಗ್ ರೈಟರ್ ಮಾಸ್ತಿ ಡೈಲಾಗ್ ಬರೆದಿದ್ದಾರೆ. ಈ ಚಿತ್ರದ ಕತೆ ವಿಚಾರಕ್ಕೆ ಬಂದ್ರೆ ಇದು ಅಮ್ಮ ಮತ್ತು ಮಗನ ಸೆಂಟಿಮೆಂಟ್ ಇರೋ ಕತೇನೆ ಆಗಿದೆ.

ಜೋಗಿ-2 ತರವೇ ಈ ಕತೆ ಇದೆ ಅಂತಲೂ ಚೇತನ್ ಗೌಡ ವಿವರಿಸಿದ್ದಾರೆ. ಈ ಸಿನಿಮಾದ ಇತರ ವಿಚಾರ ಹೇಳೋದಾದ್ರೆ, ಶ್ರೀ ಬಂಡೆ ಮಹಾಳಮ್ಮ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ಆಗಿದೆ. ವಿ.ನಾಗೇಂದ್ರ ಪ್ರಸಾದ್ ಬಂದು ಗುಡ್ ಲಕ್ ಹೇಳಿದ್ದಾರೆ. ರೈತರು ಬಂದು ಕ್ಲಾಪ್ ಮಾಡಿದ್ದಾರೆ. ಪ್ರಕಾಶ್ ಅನ್ನೋರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports