Last Updated:
ಜಾಕಿ ಚಿತ್ರದ ಭಾವನಾ ಮತ್ತು ನಿರ್ಮಾಪಕ ನವೀನ್ ಲವ್ ಸ್ಟೋರಿ ಸಿನಿಮಾ ತರವೇ ಇದೆ. ಇಂಟ್ರಸ್ಟಿಂಗ್ ವಿಷಯ ಅಂದ್ರೆ ಇಬ್ಬರದ್ದೂ ಲವ್ ಫೇಲ್ಯೂರ್ ಸ್ಟೋರಿನೇ ಇದೆ. ಅದಾಗ್ಯೂ ಇವರು ಪ್ರೀತಿಯಲ್ಲಿ ಬಿದ್ದರು. ಮುಂದೆ ಏನಾಯಿತು ಅನ್ನೋದು ಇಲ್ಲಿದೆ ಓದಿ.
ಜಾಕಿ ಚಿತ್ರದ ನಟಿ ಭಾವನಾ ಮೆನನ್ (Bhavana Menon) ಲವ್ ಸ್ಟೋರಿ (Love Story) ಮಜವಾಗಿದೆ. ಸಿನಿಮಾ ತರವೇ ಇದೆ. ನಿನ್ನದು ಹಾರ್ಟ್ ಬ್ರೇಕ್ ನನ್ನದು ಹಾರ್ಟ್ ಬ್ರೇಕ್ ಅನ್ನುವ ಹಾಗೆ ಇದೆ. ಆಗತಾನೆ ಒಂದು ಲವ್ ಫೇಲ್ಯೂರ್ ಆಗಿತ್ತು. ಅದೇ ಡಿಪ್ರೆಷನ್ ಅಲ್ಲಿಯೇ ಭಾವನಾ ಮೆನನ್ ಇದ್ದರು. ಆದರೆ, ಅದೇ ಮೂಡ್ ಅಲ್ಲಿಯೇ ಸಿನಿಮಾ ಕೆಲಸದಲ್ಲೂ ಬ್ಯುಸಿ ಆಗಿದ್ದರು. ಒಂದು ದಿನ ಒಂದು ಕಾಲ್ ಬಂತು. ಅದನ್ನ ರೋಮಿಯೋ ಚಿತ್ರದ (Romeo Movie) ನಿರ್ಮಾಪಕ ನವೀನ್ ಮಾಡಿದ್ದರು. ಗಣೇಶ್ ಅವರು ಈ ಚಿತ್ರದ ನಾಯಕರಾಗಿದ್ದಾರೆ. ನೀವು ಕತೆ ಕೇಳಿ ಅಂತಲೇ ಹೇಳಿದರು. ಆಯಿತು ಬನ್ನಿ ಅಂತಲೇ ಭಾವನಾ ಕೇರಳಕ್ಕೂ ಕರೆದರು. ನವೀನ್ (Naveen) ಅಲ್ಲಿಗೆ ಹೋದರು, ಕತೆ ಹೇಳಿದರು. ವಾಪಾಸ್ ಬಂದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
8 ವರ್ಷ ಆಯ್ತು
(ಚಿತ್ರ ಕೃಪೆ: ಭಾವನಾ ಮೆನನ್ ಇನ್ಸ್ಟಾಗ್ರಾಮ್)
ಇದಾದ್ಮೇಲೆ ಸುದೀಪ್ ಅವರ ಸಿನಿಮಾದಲ್ಲೂ ನಟಿಸಿದ್ದರು. ಆದರೆ, ಇವರನ್ನ ಇಂದಿಗೂ ಜಾಕಿ ಭಾವನಾ ಅಂತಲೇ ಕರೆಯುತ್ತಾರೆ. ಇಷ್ಟೆಲ್ಲ ನೇಮ್ ಆ್ಯಂಡ್ ಫೇಮ್ ಅನ್ನ ಮೊದಲೆರಡು ಚಿತ್ರದಲ್ಲಿಯೇ ಭಾವನಾ ಪಡೆದುಕೊಂಡಿದ್ದರು.
ರೋಮಿಯೋ ಚಿತ್ರವನ್ನ ಪಿ.ಸಿ.ಶೇಖರ್ ಡೈರೆಕ್ಷನ್ ಮಾಡಿದ್ದರು. ನವೀನ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದರು. ಈ ಚಿತ್ರದ ನಾಯಕಿ ಆಯ್ಕೆ ವಿಚಾರದಲ್ಲಿ ಭಾವನಾ ಅವರನ್ನ ನವೀನ್ ಅವರು ಅಪ್ರೋಚ್ ಮಾಡಿದ್ದರು.
ರೋಮಿಯೋ ಚಿತ್ರಕ್ಕೆ ಆಯ್ಕೆ ಆದ್ಮೇಲೆ ಭಾವನಾ ಮೆನನ್ ಹಾಗೂ ನವೀನ್ ಪರಿಚಯ ಆದರು. ಭಾವನಾ ಅವರನ್ನ ನವೀನ್ ಮೀಟ್ ಆದಾಗ ನವೀನ್ ಅವರ ಲವ್ ಫೇಲ್ಯೂರ್ ಆಗಿತ್ತು.
ಭಾವನಾ ಅವರದ್ದು ಲವ್ ಫೇಲ್ಯೂರ್ ಕೂಡ ಆಗಿತ್ತು. ಹಾಗಾಗಿಯೇ ಇವರು ಎಮೋಷನಲಿ ಬೇಗ ಕನೆಕ್ಟ್ ಆದರು. ಹಾಗೆ ಕನೆಕ್ಟ್ ಆದವರು ಒಳ್ಳೆ ಸ್ನೇಹಿತರೂ ಆದರು. ಈ ಸ್ನೇಹ ಮುಂದೆ ಪ್ರೀತಿ ಆಗಿಯೂ ಬದಲಾಯಿತು. ಇಬ್ಬರು ಪರಸ್ಪರ ಪ್ರಮೋಸ್ ಮಾಡಿದರು. ಈ ಒಂದು ಲವ್ ಸ್ಟೋರಿಯನ್ನ Behindwoods ಸಂದರ್ಶನದಲ್ಲಿ ಭಾವನಾ ಮೆನನ್ ಹೇಳಿಕೊಂಡಿದ್ದಾರೆ.
ಭಾವನಾ-ನವೀನ್ ಮಸ್ತ್ ಲವ್ ಸ್ಟೋರಿ
ಭಾವನಾ ಮತ್ತು ನವೀನ್ 6 ವರ್ಷ ಡೇಟಿಂಗ್ ಮಾಡಿದರು. ಇಷ್ಟು ವರ್ಷದ ಪ್ರೀತಿಯ ಬಳಿಕ 2017 ರಂದು ಇವರು ನಿಶ್ಚಿತಾರ್ಥ ಮಾಡಿಕೊಂಡರು.
ನಿಶ್ಚಿತಾರ್ಥ ಆದ ಒಂದೇ ವರ್ಷದಲ್ಲಿಯೇ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜನವರಿ 22, 2018 ರಂದು ಕೇರಳದ ತೃಶೂರ್ನಲ್ಲಿರುವ ತಿರುವಂಬಾಡಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಇವರು ಸಿಂಪಲ್ ಆಗಿಯೇ ಮದುವೆ ಆದರು.
ನವೀನ್ ಮತ್ತು ಭಾವನಾ ಅವರು ಮದುವೆ ಆಗಿ 8 ವರ್ಷ ಆಗಿದೆ. ಇದನ್ನ ಸೆಲೆಬ್ರೇಟ್ ಕೂಡ ಮಾಡಿದ್ದಾರೆ. ಆದರೆ, ಇವರ ನಡುವೆ ಯಾವುದು ಸರಿ ಇಲ್ಲ. ಇವರು ವಿಚ್ಛೇದನ ಪಡೆದುಕೊಂಡಿದ್ದಾರೆ ಅನ್ನುವ ಸುದ್ದಿ ಹರಡಿದಿತ್ತು.
ಆದರೆ, ಇದೆಲ್ಲ ಸುಳ್ಳು ಸುದ್ದಿ ಆಗಿದೆ. ನಾವು ಪ್ರತಿ ದಿನವೂ ನಮ್ಮ ಫೋಟೋಗಳನ್ನ ಹಾಕುವುದಕ್ಕೆ ಆಗೋದಿಲ್ಲ. ಆ ರೀತಿಯ ಜೋಡಿನೂ ನಾವಲ್ಲ ಬಿಡಿ. ನಾವು ಫೋಟೋ ಹಾಕಿಲ್ಲ ಅಂದ್ರೆ ಡಿವೋರ್ಸ್ ಆಯಿತು ಅಂತ ಅಲ್ವೇ ಅಲ್ಲ ಅನ್ನೋದನ್ನು ಭಾವನಾ ನೇರವಾಗಿಯೇ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka













