Bengaluru: ಬನಶಂಕರಿ ಅಮ್ಮನವರ ಭಕ್ತರಿಗೆ ಗುಡ್​​​ನ್ಯೂಸ್​! ಬಹುದಿನ ಸಮಸ್ಯೆ ಕೊನೆಗೂ ಬ್ರೇಕ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

Bengaluru: ಬನಶಂಕರಿ ಅಮ್ಮನವರ ಭಕ್ತರಿಗೆ ಗುಡ್​​​ನ್ಯೂಸ್​! ಬಹುದಿನ ಸಮಸ್ಯೆ ಕೊನೆಗೂ ಬ್ರೇಕ್


Last Updated:

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನವೂ ನಗರದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಕೇಂದ್ರ ಆಗಿದ್ದು, ಇಂತಹ ಐತಿಹಾಸಿಕ ದೇವಾಲಯದ ಭಕ್ತರಿಗೆ ಮುಜರಾಯಿ ಇಲಾಖೆ ಗುಡ್ ನ್ಯೂಸ್ ನೀಡಿದೆ.

Bengaluru: ಬನಶಂಕರಿ ಅಮ್ಮನವರ ಭಕ್ತರಿಗೆ ಗುಡ್​​​ನ್ಯೂಸ್​! ಬಹುದಿನ ಸಮಸ್ಯೆ ಕೊನೆಗೂ ಬ್ರೇಕ್
Bengaluru: ಬನಶಂಕರಿ ಅಮ್ಮನವರ ಭಕ್ತರಿಗೆ ಗುಡ್​​​ನ್ಯೂಸ್​! ಬಹುದಿನ ಸಮಸ್ಯೆ ಕೊನೆಗೂ ಬ್ರೇಕ್

ಬೆಂಗಳೂರು ಎಂಬ ದೊಡ್ಡ ನಗರದಲ್ಲಿ (Bengaluru) ಜನ ಜಂಗುಳಿಯು ಹೇಗೆ ಹೆಚ್ಚಿದೆಯೋ, ಅದೇ ರೀತಿ ಬೃಹದಾಕಾರದ ಕಟ್ಟಡಗಳು ಎದ್ದು ನಿಂತಿವೆ (). ಇದರ ಪರಿಣಾಮವಾಗಿ ಯಾವುದೇ ದೇವಸ್ಥಾನಕ್ಕೆ (Banashankari Temple) ತೆರಳುವಾಗ ಪಾರ್ಕಿಂಗ್‌ ಮಾಡಬೇಕೆಂದರೆ ಹಲವು ಕಡೆ ಪಾರ್ಕಿಂಗ್‌ ಮಾಡಲು ಬಹಳ ಸಮಸ್ಯೆ ಉಂಟಾಗುತ್ತಿತ್ತು. ಇದೇ ರೀತಿಯ ಸಮಸ್ಯೆಯು ಬನಶಂಕರಿ ದೇವಾಲಯಕ್ಕೆ ತೆರಳುವ ಭಕ್ತಾಧಿಗಳಿಗೂ (Devotees) ಕೂಡ ಪಾರ್ಕಿಂಗ್‌ ಮಾಡಲು ಜಾಗವೇ ಸಿಗುತ್ತಿರಲಿಲ್ಲ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆ (Muzrai Department) ಗುಡ್‌ ನ್ಯೂಸ್‌ ಕೊಟ್ಟಿದೆ.

ನಿರ್ಮಾಣ ಆಗಲಿದೆ ಬಹುಮಹಡಿ ಪಾರ್ಕಿಂಗ್‌ ಕಾಂಪ್ಲೆಕ್ಸ್‌

ಬೆಂಗಳೂರಿನ ಶ್ರೀ ಬನಶಂಕರಿ ದೇವಾಲಯದಲ್ಲಿ ಮಂಗಳವಾರ ಬಂದರೆ ಸಾಕು ಸಾವಿರಾರು ಭಕ್ತಾಧಿಗಳು ದೇಗುಲಕ್ಕೆ ಬರುತ್ತಾರೆ. ದೇವಾಲಯದ ಬಳಿ ಪಾರ್ಕಿಂಗ್‌ ವ್ಯವಸ್ಥೆ ಸರಿಯಾಗಿರದ ಕಾರಣ ಭಕ್ತಾಧಿಗಳು ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಬೇಕಾಗಿತ್ತು. ಆದರೇ ಇದೀಗ ಈ ಸಮಸ್ಯೆಯನ್ನು ಅರಿತ ಮುಜರಾಯಿ ಇಲಾಖೆ ಭಕ್ತಾಧಿಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ದೇವಾಲಯದ ಆವರಣದಲ್ಲಿ ಬಹು ಮಹಡಿಯ ಪಾರ್ಕಿಂಗ್‌ ಸಂಕೀರ್ಣವನ್ನು ನಿರ್ಮಿಸಲು ನಿರ್ಧರಿಸಿದೆ.

ಪ್ರತಿದಿನ ಇಲ್ಲಿಗೆ ಸಾವಿರಾರು ಭಕ್ತಾಧಿಗಳು ಕಾರು ಮತ್ತು ದ್ವಿ-ಚಕ್ರ ವಾಹನದಲ್ಲಿ ಆಗಮಿಸುತ್ತಾರೆ. ಇನ್ನೂ ಮಂಗಳವಾರ, ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ ಅಂತು ದೇವಾಲಯವೂ ತುಂಬಿ ತುಳುಕುವುದಲ್ಲದೆ. ದೇಗುಲದ ಹೊರಗಡೆ ವಾಹನಗಳು ತುಂಬಿ ಹೋಗಿರುತ್ತದೆ.

ದೇವಾಲಯ ಹೊರಕಡೆ ಪಾರ್ಕಿಂಗ್‌ ಮಾಡಲು ಸರಿಯಾದ ಸ್ಥಳವಿಲ್ಲದಿರುವುದರಿಂದ ಭಕ್ತಾದಿಗಳು ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿ ಮತ್ತು ದೇವಸ್ಥಾನದ ಸುತ್ತಲಿನ ಹೋಣಿಯಲ್ಲಿ ನಿಲ್ಲಿಸುತ್ತಿದ್ದರು. ಇದರಿಂದಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿತ್ತು.

ಪ್ರಸ್ತುತ ದೇವಾಲಯದ ದಾಸೋಹದ ಭವನದ ಮುಂಭಾಗದಲ್ಲಿರುವ ಸೀಮಿತ ಜಾಗದಲ್ಲಿ ಬೆರಳಣಿಕೆಯಷ್ಟು ವಾಹನವನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಬಂದರಂತೂ ಇಲ್ಲಿ ಸ್ಥಳವನ್ನು ಹುಡುಕುವುದು ದುಸ್ವಪ್ನವಿದ್ದಂತೆ ಎಂದು ಬನಶಂಕರಿ 2ನೇ ಹಂತದ ನಿವಾಸಿ ರಮೇಶ್‌ಗೌಡ ಹೇಳಿದ್ದಾರೆ.

ದರ್ಶನ ಸರದಿಯಲ್ಲಿ ನಿಲ್ಲುವುದಕ್ಕಿಂತ ಪಾರ್ಕಿಂಗ್‌ಗಾಗಿ ಹುಡುಕುತ್ತಾ ನಿಂತಿದ್ದೆ ಹೆಚ್ಚು

ಭಕ್ತರಿಗೆ ನಮ್ಮ ವಸತಿ ದ್ವಾರಗಳು ಮತ್ತು ಕಿರಿದಾದ ದಾರಿಗಳನ್ನು ನಿರ್ಬಂಧಿಸದೆ ಬೇರೆ ದಾರಿಯಿಲ್ಲ. ಬೇಕಾಬಿಟ್ಟಿ ಅವರಿಗೆ ಇಷ್ಟ ಬಂದಂತೆ ನಿಲ್ಲಿಸಲಾದ ಕಾರುಗಳಿಂದಾಗಿ ನಮ್ಮ ಸ್ವಂತ ರಸ್ತೆಯಿಂದ ಹೊರಬರಲು ನಮಗೆ 30 ನಿಮಿಷಗಳು ಬೇಕಾಗುತ್ತದೆ. ಮೀಸಲಾದ ಪಾರ್ಕಿಂಗ್ ಕಟ್ಟಡವು ಖಂಡಿತವಾಗಿಯೂ ಸಹಾಯ ಮಾಡುತ್ತದೆ. ‘ನಾನು ದರ್ಶನ ಸರದಿಯಲ್ಲಿ ನಿಲ್ಲುವುದಕ್ಕಿಂತ ದೇವಾಲಯದ ಸುತ್ತಲೂ ಪಾರ್ಕಿಂಗ್‌ಗಾಗಿ ಹುಡುಕುತ್ತಾ ಹೆಚ್ಚು ಸಮಯ ಕಳೆಯುತ್ತಿದ್ದೆ’ ಎಂದು ಸ್ಥಳೀಯ ಆಟೋ ಚಾಲಕ ಸುಮಂತ್ ಆರ್ ಹೇಳಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಕನಕಪುರ ರಸ್ತೆಯವರೆಗೂ ಕಾರುಗಳನ್ನು ದೂರದಲ್ಲಿ ನಿಲ್ಲಿಸುವುದರಿಂದ ಅನೇಕ ಬಾರಿ ಹಿರಿಯ ನಾಗರಿಕರು ನೂರಾರು ಮೀಟರ್ ನಡೆದುಕೊಂಡು ಹೋಗಬೇಕಾಗುತ್ತದೆ. ಈ ಸಂಕೀರ್ಣದ ಒಳಗಿನ ಸೌಲಭ್ಯವು ನಮ್ಮ ಸಮಯ ಮತ್ತು ಮನಸ್ಸಿನ ಶಾಂತಿ ಎರಡನ್ನೂ ಉಳಿಸುತ್ತದೆ’ ಎಂದು ಹೇಳಿದ್ದಾರೆ.

ಪ್ರಸ್ತಾವಿತ ಪಾರ್ಕಿಂಗ್ ಸೌಲಭ್ಯವನ್ನು ದೇವಾಲಯದ ಒಡೆತನದ 100×150 ಅಡಿ ಜಾಗದಲ್ಲಿ ನಿರ್ಮಿಸಲಾಗುತ್ತದೆ. ಕಟ್ಟಡವನ್ನು ಆರರಿಂದ ಎಂಟು ಮಹಡಿಗಳವರೆಗೆ ನಿರ್ಮಿಸಲು ಯೋಜಿಸಲಾಗಿದೆ. ಸ್ವಯಂಚಾಲಿತ ಸಂಕೀರ್ಣದ ಪ್ರತಿ ಮಹಡಿಯಲ್ಲಿ ಸುಮಾರು 80 ಕಾರುಗಳಿಗೆ ಸ್ಥಳಾವಕಾಶ ಕಲ್ಪಿಸುವ ನಿರೀಕ್ಷೆಯಿದ್ದು. ಇದು ಒಟ್ಟು ಪಾರ್ಕಿಂಗ್ ಸಾಮರ್ಥ್ಯವನ್ನು 600 ರಿಂದ 700 ಕಾರುಗಳವರೆಗೂ ಹೆಚ್ಚಿಸಬಹುದು.

‘ಬಹುಮಹಡಿ ಪಾರ್ಕಿಂಗ್ ರಚನೆಯ ಒಟ್ಟು ವೆಚ್ಚದ ಬಗ್ಗೆ ವಿವರವಾದ ಅಂದಾಜನ್ನು ಕೋರಿ ಲೋಕೋಪಯೋಗಿ ಇಲಾಖೆಗೆ (PWD) ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ’ ಎಂದು ಬನಶಂಕರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್ ಕೃಷ್ಣಪ್ಪ ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed