Amir Khan: 3 ಮದುವೆ, 3 ಮಕ್ಕಳು! ರೀನಾ To ಗೌರಿ, ಅಮೀರ್ ಖಾನ್ ಮ್ಯಾರೇಜ್ ಸ್ಟೋರಿ! | | ACTPnews

ಅಮೀರ್ ಖಾನ್


Last Updated:

Amir Khan: ಅಮೀರ್ ಖಾನ್ ಅವರ ವೈವಾಹಿಕ ಜೀವನವನ್ನೇ ಒಂದು ಸಿನಿಮಾ ಮಾಡಬಹುದು. ಒಂದಲ್ಲ, 2 ಮದುವೆ, 2 ಡಿವೋರ್ಸ್. ಈಗ ಮೂರನೇ ಮದುವೆ ಸಿದ್ಧತೆ.

ಅಮೀರ್ ಖಾನ್
ಅಮೀರ್ ಖಾನ್

ಬಾಲಿವುಡ್​ನ (Bollywood) ಖ್ಯಾತ ನಟ ಅಮೀರ್ ಖಾನ್  (Amir Khan) ಮೂರನೇ ಮದುವೆಯಾಗುತ್ತಿದ್ದಾರೆ. ಜುಲೈ 5 ರಂದು ಅಮೀರ್ ಖಾನ್ ಅವರು ಬೆಂಗಳೂರು (Bengaluru) ಮೂಲದ ಗೌರಿ ಅವರನ್ನು ವರಿಸಲಿದ್ದಾರಂತೆ. ಇದು ಅಮೀರ್ ಜೀವನದಲ್ಲಿ 3ನೇ ಮದುವೆ. ಈ ಹಿಂದೆ ಅವರು ರೀನಾ ದತ್ತಾ ಹಾಗೂ ಕಿರಣ್ ರಾವ್ ಅವರನ್ನು ಮದುವೆಯಾಗಿ ಇಬ್ಬರಲ್ಲಿ ಒಟ್ಟು ಮೂವರು ಮಕ್ಕಳಿಗೆ ತಂದೆಯಾಗಿದ್ದಾರೆ. ಇಬ್ಬರಿಗೂ ಡಿವೋರ್ಸ್ ಕೂಡಾ ಕೊಟ್ಟಿದ್ದು ಮೂರನೇ ಮದುವೆಗೆ ರೆಡಿಯಾಗಿದ್ದಾರೆ.

ಹಾಗಾದರೆ ಅಮೀರ್ ಖಾನ್ ಅವರ ಸಂಪೂರ್ಣ ವೈವಾಹಿಕ ಜೀವನದ ಒಂದು ನೋಟ ಇಲ್ಲಿದೆ. ಎರಡು ದಿನಗಳಿಂದ ಅಮೀರ್ ಖಾನ್ ಅವರು ಬೆಂಗಳೂರು ಮೂಲದ ಗೌರಿ ಅವರನ್ನು ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಇನ್ನೂ ಅಧಿಕೃತವಾಗಿ ಯಾವುದೇ ಅಪ್ಡೇಟ್ ಬಂದಿಲ್ಲವಾದರೂ ಇವರ ವಿವಾಹದ ಸುದ್ದಿ ಬಹುತೇಕ ಖಚಿತ ಎನ್ನಲಾಗುತ್ತಿದೆ.

ಅಮೀರ್ ಖಾನ್ ಅವರು ಸಿನಿಮಾಗಾಗಿ ಎಷ್ಟು ಚರ್ಚಿಸಲ್ಪಡ್ತಾರೋ ಅಷ್ಟೇ ಅವರ ವೈವಾಹಿಕ ಜೀವನದ ಕುರಿತಾಗಿಯೂ ಸುದ್ದಿಯಾಗುತ್ತಾರೆ. ಅವರ ಪರ್ಸನಲ್ ಲೈಫ್ ಯಾವಾಗಲೂ ಪಬ್ಲಿಕ್ ಟಾಕ್ ಇಂಟ್ರೆಸ್ಟ್ ಆಗಿದೆ.

ಮೊದಲ ಪ್ರೀತಿ ರೀನಾ ದತ್ತ

ಇಂಡಿಯನ್ ಸಿನಿಮಾದ ದೊಡ್ಡ ಸ್ಟಾರ್ ಆಗುವ ಮೊದಲೇ ಅಮೀರ್ ಖಾನ್ ಅವರು ರೀನಾ ದತ್ತಾ ಅವರನ್ನು ಪ್ರೀತಿಸಿದ್ದರು. ಮುಂಬೈನಲ್ಲಿ ನೆರೆ ಹೊರೆಯವರಾಗಿ ಪರಿಚಯವಾದ ಇವರು ಯೌವ್ವನದಲ್ಲೇ ಪ್ರೇಮ ಜೋಡಿಗಳಾದರು. ರೀನಾ ಹಾಗೂ ಅಮೀರ್ 1986ರಲ್ಲಿ ಮದುವೆಯಾದರು.

ಅಮೀರ್ ಖಾನ್ ಮತ್ತು ರೀನಾ ಮದುವೆಯಾದ ಕೇವಲ ಎರಡು ವರ್ಷಗಳ ನಂತರ ಆಮಿರ್ ಅವರ ಚಲನಚಿತ್ರ ‘ಖಯಾಮತ್ ಸೆ ಖಯಾಮತ್ ತಕ್’ ನ ಅದ್ಭುತ ಯಶಸ್ಸಿನೊಂದಿಗೆ ಅವರ ವೃತ್ತಿಜೀವನವು ಉತ್ತುಂಗಕ್ಕೇರಿತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ- ಜುನೈದ್ ಖಾನ್ ಮತ್ತು ಇರಾ ಖಾನ್.

Amir Khan

ಅಮೀರ್ ಖಾನ್

ಸುಮಾರು 16 ವರ್ಷಗಳ ದಾಂಪತ್ಯದ ನಂತರ, ಆಮಿರ್ ಮತ್ತು ರೀನಾ 2002 ರಲ್ಲಿ ಬೇರೆಯಾಗಲು ನಿರ್ಧರಿಸಿದರು. ಈ ಸುದ್ದಿ ಅಭಿಮಾನಿಗಳಿಗೆ ಈ ಸುದ್ದಿ ಅಚ್ಚರಿ ಮೂಡಿಸಿತು. ತಮ್ಮ ದಾಂಪತ್ಯ ಕೊನೆಯಾದರೂ ಇಬ್ಬರೂ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡರು.

ಕಿರಣ್ ರಾವ್ ಜೊತೆಗಿನ ಸಂಬಂಧ ಮತ್ತು ಮದುವೆ

ವಿಚ್ಛೇದನದ ನಂತರ, ಆಮಿರ್ ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರಿಗೆ ಹತ್ತಿರವಾದರು. ಲಗಾನ್ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಮೊದಲು ಭೇಟಿಯಾದರು, ಆದರೆ ನಂತರ ಅವರ ಸಂಬಂಧವು ಬೆಳೆಯಿತು ಎಂದು ವರದಿಯಾಗಿದೆ.

ಡಿಸೆಂಬರ್ 2005 ರಲ್ಲಿ ಇವರು ಮದುವೆಯಾದರು. 2011 ರಲ್ಲಿ, ಅವರು ತಮ್ಮ ಮಗ ಆಜಾದ್ ರಾವ್ ಖಾನ್ ಅವರನ್ನು ಸರೊಗಸಿ ಮೂಲಕ ಸ್ವಾಗತಿಸಿದರು. ಇದು ಅವರ ಕುಟುಂಬ ಜೀವನಕ್ಕೆ ಮತ್ತೊಂದು ಸಂತೋಷದಾಯಕ ಅಧ್ಯಾಯವನ್ನು ಸೇರಿಸಿತು.

15 ವರ್ಷಗಳಿಗೂ ಹೆಚ್ಚು ಕಾಲ, ಅಮೀರ್ ಮತ್ತು ಕಿರಣ್ ಅವರು ಸುಂದರವಾಗಿ ಸಂಸಾರ ಮಾಡಿದರು. 2021 ರಲ್ಲಿ ಅವರು ತಮ್ಮ ಮದುವೆಯನ್ನು ಕೊನೆಗೊಳಿಸುತ್ತಿದ್ದಾರೆಂದು ಘೋಷಿಸಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ವಿಚ್ಛೇದನದ ನಂತರವೂ, ಕಿರಣ್ ಮತ್ತು ಆಮಿರ್ ಕುಟುಂಬ ಆಗಾಗ ಭೇಟಿಯಾಗುತ್ತಿತ್ತು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed