Bengaluru: ರಾಜಧಾನಿಯ ಯಾವ ಪ್ರದೇಶ ವೇಗವಾಗಿ ಅಭಿವೃದ್ಧಿಯಾಗ್ತಿದೆ? ಹೂಡಿಕೆ ಮಾಡುವವರಿಗೆ ಇದೇ ಬೆಸ್ಟ್​ ಪ್ಲೇಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

Bengaluru: ರಾಜಧಾನಿಯ ಯಾವ ಪ್ರದೇಶ ವೇಗವಾಗಿ ಅಭಿವೃದ್ಧಿಯಾಗ್ತಿದೆ? ಹೂಡಿಕೆ ಮಾಡುವವರಿಗೆ ಇದೇ ಬೆಸ್ಟ್​ ಪ್ಲೇಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News)


ಹೂಡಿಕೆಗೆ ಸೂಕ್ತವಾಗಿರುವ 7 ಕಾರಿಡಾರ್​ಗಳು!

ಬಿಡದಿ ಕಾರಿಡಾರ್: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆ ನಿರ್ಮಾಣವಾದ ಬಳಿಕ ಈ ಪ್ರದೇಶದ ಅದೃಷ್ಟವೇ ಬದಲಾಗಿದೆ ಎಂದು ಹೇಳಬಹುದು. ಇಂಡಸ್ಟ್ರಿಯಲ್ ಲ್ಯಾಂಡ್ಸ್ ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿರುವವರಿಗೆ ಇದು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.

ದೇವನಹಳ್ಳಿ ಕಾರಿಡಾರ್: ದೀರ್ಘಕಾಲದ ಹೂಡಿಕೆಗೆ ಈ ಪ್ರದೇಶ ಅತ್ಯುತ್ತಮ ಎಂದು ಹೇಳಬಹುದು. ಏಕೆಂದರೆ ಈ ಪ್ರದೇಶದಲ್ಲಿ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಏರೋಸ್ಪೇಸ್ ವರ್ಕ್​, ಔಟರ್ ರಿಂಗ್ ರೋಡ್ ಸೇರಿದಂತೆ ಹಲವು ಯೋಜನೆಗಳು ಅಭಿವೃದ್ಧಿಗೆ ಕಾರಣವಾಗಿದೆ. ಇಲ್ಲಿ ಭೂಮಿ ಮೇಲೆ ಹೂಡಿಕೆ ಮಾಡುವುದು ಸೇಫ್ & ಬೆಸ್ಟ್ ಅಂತ ಹೇಳಲಾಗಿದೆ.

ಸರ್ಜಾಪುರ ಕಾರಿಡಾರ್: ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಯಂತಹ ಐಟಿ ಹಬ್ ಗಳನ್ನು ಹೊಂದಿರುವ ಈ ಪ್ರದೇಶವು ಭಾರೀ ವೇಗದಲ್ಲಿ ಬೆಳೆಯುತ್ತಿದೆ. ಈ ಹಿಂದೆ ಇಲ್ಲಿ ಒಂದು ಚದರ ಅಡಿ 4,500 ರೂಪಾಯಿ ಇದ್ದರೆ, ಈಗ ಇದು 8-16 ಸಾವಿರದ ವರೆಗೂ ಹೆಚ್ಚಾಗಿದೆ. ಐಟಿ ಉದ್ಯೋಗಿಗಳಿಂದ ಇಲ್ಲಿ ಬಾಡಿಗೆಗೆ ಭಾರೀ ಬೇಡಿಕೆ ಇದೆ.

ದೊಡ್ಡಬಳ್ಳಾಪುರ ಕಾರಿಡಾರ್: ವಿಮಾನ ನಿಲ್ದಾಣಕ್ಕೆ ಹತ್ತಿರದ ಪ್ರದೇಶ ಆಗಿರುವುದರಿಂದ ಈ ಪ್ರದೇಶದಲ್ಲಿ ಕಳೆದ ಐದು ವರ್ಷಗಳಿಂದ ಫ್ಲಾಟ್ ಬೆಲೆಗಳು ಶೇಕಡಾ 80-85ರಷ್ಟು ಹೆಚ್ಚಾಗಿದೆ. ಟೆಕ್ಸ್​​ಟೈಲ್ ಪಾರ್ಕ್, ಮ್ಯಾನುಫ್ಯಾಕ್ಚರಿಂಗ್ ಇಂಡಸ್ಟ್ರಿಗಳು ಭಾರೀ ಪ್ರಮಾಣದಲ್ಲಿ ಈ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ.

ನೆಲಮಂಗಲ ಕಾರಿಡಾರ್: ಇ-ಕಾಮರ್ಸ್, ಗೋಡೌನ್ ಗಳಿಗೆ ನೆಲಮಂಗಲ ಕೇರಾಫ್ ಅಡ್ರೆಸ್​ ಆಗಿ ಖ್ಯಾತಿ ಪಡೆದಿದೆ. ಇಂಡಸ್ಟ್ರಿಯಲ್ ಭೂಮಿ ಖರೀದಿ ಮಾಡುವವರಿಗೆ ಈ ಪ್ರದೇಶ ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ತಂದುಕೊಡುವ ಉತ್ತಮ ಆಯ್ಕೆಯಾಗಿದೆ.

ಕನಕಪುರ ರೋಡ್ ಕಾರಿಡಾರ್: ಮೆಟ್ರೋ ಗ್ರೀನ್ ಲೈನ್ ಎಕ್ಸ್ ಟೆನ್ಷನ್ ಆಗುತ್ತಿರುವುದರಿಂದ ಫ್ಯಾಮಿಲಿಸ್ ಇರೋದಕ್ಕೆ ಇದು ಬೆಸ್ಟ್ ಆಯ್ಕೆ. ಇಲ್ಲಿ ಫ್ಲಾಟ್, ವಿಲ್ಲಾ ದರಗಳು ಚದರ ಅಡಿಗೆ 7 ಸಾವಿರ ರೂಪಾಯಿಯಿಂದ 14 ಸಾವಿರ ರೂಪಾಯಿ ವರೆಗೂ ಮಾರಾಟ ಆಗ್ತಿದೆ.

ಹೊಸಕೋಟೆ ಕಾರಿಡಾರ್: ವೈಟ್ ಫೀಲ್ಡ್, ಕೆಆರ್ ಪುರ, ಚೆನ್ನೈ ಎಕ್ಸ್ ಪ್ರೆಸ್​​ ವೇ ಬಳಿಯೇ ಇರುವುದರಿಂದ ಇದು ಲಾಜಿಸ್ಟಿಕ್ಸ್, ಇಂಡಸ್ಟ್ರಿಯಲ್ ಹಬ್ ಆಗಿ ಬದಲಾವಣೆ ಆಗ್ತಿದೆ. ಇಲ್ಲಿ ಭೂಮಿಯ ಒಂದು ಚದರ ಅಡಿ ಬೆಲೆ 2500 ರೂಪಾಯಿ ಯಿಂದ 6500 ರೂಪಾಯಿ ಇದೆ.

ಇದನ್ನೂ ಓದಿ: GST on Fuel: ಇಂಧನ ಬೆಲೆ GST ಅಡಿ ಬಂದರೆ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್​​ ಬೆಲೆ ಎಷ್ಟು ಕಡಿಮೆಯಾಗುತ್ತದೆ?

ರಿಯಲ್ ಎಸ್ಟೇಟ್​ ಗೆ ಹೊಸ ರೆಕ್ಕೆಗಳನ್ನು ನೀಡುತ್ತಿರುವ ಈ ಮೆಗಾ ಪ್ರಾಜೆಕ್ಟ್ ಗಳು, ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳು ಈ ರೀತಿ ಅಭಿವೃದ್ಧಿ ಆಗಲು ಕಾರಣ ಆಗುತ್ತಿರೋದು ಭಾರೀ ಮೂಲಸೌಕರ್ಯ ಯೋಜನೆಗಳು. ಫೇಜ್​ 2, ಫೇಜ್​​ 3 ಅಡಿ ಸುಮಾರು 175 ಕಿಲೋ ಮೀಟರ್ ದೂರ ನಡೆಯುತ್ತಿರುವ ಮೆಟ್ರೋ ವಿಸ್ತರಣೆ ಇತರೇ ಪ್ರದೇಶಗಳಿಗೆ ಸಂಪರ್ಕ ಸಾಧಿಸುತ್ತಿದೆ. ಇದಕ್ಕೆ ಪೂರಕವಾಗಿ 73 ಕಿಲೋ ಮೀಟರ್ ಪೆರಿಫೆರಲ್ ರಿಂಗ್ ರೋಡ್ (ಒಆರ್​ಆರ್) ಹಾಗೂ ಉಪನಗರಗಳಿಗೆ ಸಂಪರ್ಕ ಕಲ್ಪಿಸುವ 400 ಕಿಲೋ ಮೀಟರ್ ದೂರದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್​ಟಿಆರ್ಆರ್) ಯೋಜನೆಗಳು ಸಾರಿಗೆ ಸಂಪರ್ಕದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿ ಮಾಡಲಿವೆ.

(Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed