Bengaluru: ಫುಟ್​​ಪಾತ್​ ತೆರವು ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಆಪರೇಷನ್, ವಾಹನ ಸವಾರರೇ ಹುಷಾರ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

News18


Last Updated:

ಬೆಂಗಳೂರಿನಲ್ಲಿ ಜುಲೈ 10ರಿಂದ ರಸ್ತೆ ಬದಿ ನಿಲ್ಲಿಸಿದ ಗುರುತು ಇಲ್ಲದ ವಾಹನಗಳ ತೆರವಿಗೆ ಜಿಬಿಎ ಮುಂದಾಗಿದೆ. ಸಚಿವ ಕೃಷ್ಣಬೈರೇಗೌಡ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.

News18
News18

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಆಪರೇಷನ್ ಫುಟ್​​ಪಾತ್​ (Bengaluru) ತೆರವು ಬೆನ್ನಲ್ಲೇ ಮತ್ತೊಂದು ಕಾರ್ಯಾಚರಣೆಗೆ ಜಿಬಿಎ ಮುಹೂರ್ತ (GBA) ನಿಗದಿ ಮಾಡಿದೆ. ಜುಲೈ 10ರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ ಮಾಲೀಕರ ಗುರುತು ಇಲ್ಲದ ವಾಹನಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಸಚಿವ ಕೃಷ್ಣಬೈರೇಗೌಡ (Minister Krishna Byre Gowda) ಸೂಚನೆಯಂತೆ ವಾಹನಗಳ ತೆರವಿಗೆ ನಿರ್ಧಾರ ಮಾಡಲಾಗಿದೆ. ತೆರವಾದ ವಾಹನಗಳನ್ನು ಇಂತಿಷ್ಟು ಕಾಲಮಿತಿಯಲ್ಲಿ ಮಾಲೀಕರಿಗೆ ಬಿಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆ ಬಳಿಕ ತೆರವಾದ ವಾಹನಗಳನ್ನು ಜಿಬಿಎ ಹರಾಜು ಹಾಕಲಿದೆ.

ಬೆಂಗಳೂರು ನಗರದಲ್ಲಿ ಪಾದಚಾರಿಗಳ ಸುಗಮ ಓಡಾಟಕ್ಕೆ ಅಡ್ಡಿಯಾಗುತ್ತಿರುವ ಫುಟ್​​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಜೋರಾಗಿದೆ. ನಿನ್ನೆ ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಒತ್ತುವರಿ ತೆರವು ಮಾಡಲಾಗಿತ್ತು. ಶಿವಾಜಿನಗರದಲ್ಲಿ 6 ಕಡೆ, ಗಾಂಧಿನಗರದಲ್ಲಿ 4 ಕಡೆ, ಚಿಕ್ಕಪೇಟೆಯ 4 ಕಡೆ ಹಾಗೂ ಚಾಮರಾಜಪೇಟೆಯ 2 ಕಡೆ ಒತ್ತುವರಿ ತೆರವು ಮಾಡಲಾಗಿದೆ. ಇಂದು ಎರಡನೇ ದಿನವೂ ಆರ್ಟಿರಿಯಲ್ & ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ತೆರವು ಕಾರ್ಯ ಮುಂದುವರೆದಿತ್ತು. ಪಾದಚಾರಿ ಮಾರ್ಗಗಳ ಮೇಲೆ ಅನಧಿಕೃತವಾಗಿ ಅಳವಡಿಕೆ ಮಾಡಿರುವ ನಾಮಫಲಕ, ಮೆಟ್ಟಿಲು, ಅಂಗಡಿ ಮೇಲ್ಭಾಗದಲ್ಲಿ ಅಳವಡಿಸಿರುವ ಶೀಟ್​ಗಳನ್ನ ಅಧಿಕಾರಿಗಳು ತೆರವು ಮಾಡುತ್ತಿದ್ದಾರೆ.

ಇನ್ನು, ಆಪರೇಷನ್ ಫುಟ್​ಪಾತ್​ ತೆರವು ಕಾರ್ಯಾಚರಣೆ ಕುರಿತು ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯೆ ನೀಡಿ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ತೆರವು ಕಾರ್ಯ ಮಾಡ್ತಾ ಇದ್ದೇವೆ. ವ್ಯಾಪಾರಿಗಳು ಸಹಕಾರ ಕೊಡಬೇಕು. ನಾವು 2,000 ಕಿಲೋ ಮೀಟರ್ ತೆರವುಗೊಳಿಸಿ ಅಂತಾ ಮಾತ್ರ ಹೇಳಿದ್ದೇವೆ. ಹೆಚ್ಚು ಜನರು ಓಡಾಡುವ ಕಡೆ ಮಾತ್ರ ತೆರವು ಮಾಡುತ್ತಿದ್ದೇವೆ ಎಂದು ಹೇಳಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed