Last Updated:
ಸರ್ರೆ ಕೌಂಟಿ ಕ್ಲಬ್ ಚೆಂಡನ್ನು ಸ್ವಿಂಗ್ ಮಾಡಬಲ್ಲ ಬೌಲರ್ನನ್ನು ಹುಡುಕುತ್ತಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿಯೇ ಲಂಡನ್ ಮೂಲದ ಪ್ರತಿಷ್ಠಿತ ಕೌಂಟಿ ಕ್ಲಬ್ಗಾಗಿ ನಬಿಗೆ ಕೆಲವು ಪಂದ್ಯಗಳನ್ನು ಆಡಲು ಅವಕಾಶ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇಂಗ್ಲೆಂಡ್ನ ಮಾಜಿ ನಾಯಕ ಮತ್ತು ಸರ್ರೆಯ ಉನ್ನತ ಅಧಿಕಾರಿಗಳಲ್ಲಿ ಒಬ್ಬರಾದ ಅಲೆಕ್ ಸ್ಟೀವರ್ಟ್ ಈ ವಿಷಯದ ಬಗ್ಗೆ ಬಿಸಿಸಿಐ ಜೊತೆ ಚರ್ಚೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಭಾರತದ (Team India) ಮುಂಬರುವ ಕಿವೀಸ್ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ಯೋಜನೆ ರೂಪಿಸುತ್ತಿದೆ. ಕಿವೀಸ್ ಪರಿಸ್ಥಿತಿಯ ಅನುಭವ ಪಡೆದುಕೊಳ್ಳುವುದಕ್ಕಾಗಿ ಕೌಂಟಿ ಚಾಂಪಿಯನ್ಶಿಪ್ ಪಂದ್ಯಗಳಿಗೆ ಪ್ರತಿಭಾನ್ವಿತ ವೇಗದ ಬೌಲರ್ ಆಕಿಬ್ ನಬಿಯನ್ನ (Auqib Nabi) ಕಳುಹಿಸಲು ಬಯಸುತ್ತಿದೆ. ಅಲ್ಪಾವಧಿಯ ಒಪ್ಪಂದವನ್ನು ಪಡೆಯಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೆಲವು ಇಂಗ್ಲಿಷ್ ಕೌಂಟಿ ತಂಡಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ವಿದೇಶಿ ನೆಲದಲ್ಲಿ ಪ್ರಥಮ ದರ್ಜೆ ಪಂದ್ಯಗಳಲ್ಲಿ ನಬಿ ಅನುಭವವನ್ನು ಪಡೆಯಬೇಕೆಂದು ಬಿಸಿಸಿಐ ಬಯಸುತ್ತಿದೆ. ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ನಬಿ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು, 60 ವಿಕೆಟ್ಗಳನ್ನು ಕಬಳಿಸಿದ್ದರು.














