Bank Job: ಕೆನರಾ ಬ್ಯಾಂಕ್‌ ಸೇರಿದಂತೆ 11 ಪ್ರಮುಖ ಬ್ಯಾಂಕ್‌ಗಳಿಗೆ ಬೃಹತ್‌ ನೇಮಕಾತಿ; ಕನ್ನಡದಲ್ಲೇ ಪರೀಕ್ಷೆ, ಇಂದೇ ಅರ್ಜಿ ಸಲ್ಲಿಸಿ! | | ACTPnews

ನೇಮಕಾತಿ


Last Updated:

ಸರ್ಕಾರಿ ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ IBPS ಭರ್ಜರಿ ಅವಕಾಶ ನೀಡಿದೆ. 11 ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ CSA ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಗಸ್ಟ್ 21 ಕೊನೆಯ ದಿನವಾಗಿದೆ. ಪದವೀಧರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ನೇಮಕಾತಿ
ನೇಮಕಾತಿ

ಬೆಂಗಳೂರು: ಸರ್ಕಾರಿ ಬ್ಯಾಂಕ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಹಗಲಿರುಳು ಪುಸ್ತಕ ಹಿಡಿದು ಓದುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ! ಸಾರ್ವಜನಿಕ ವಲಯದ 11 ಪ್ರಮುಖ ಬ್ಯಾಂಕ್‌ಗಳಲ್ಲಿ ‘ಕಸ್ಟಮರ್ ಸರ್ವೀಸ್ ಅಸೋಸಿಯೇಟ್’ (CSA) ಹುದ್ದೆಗಳ ಭರ್ತಿಗಾಗಿ ಬಹುನಿರೀಕ್ಷಿತ ‘CRP CSA XVI’ ನೇಮಕಾತಿಯ ಬೃಹತ್ ಅಧಿಸೂಚನೆ ಹೊರಬಿದ್ದಿದೆ. ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯುಕೋ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಬ್ಯಾಂಕ್ ಹಾಗೂ ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್‌ಗಳಲ್ಲಿ ಈ ಹುದ್ದೆಗಳು ಖಾಲಿಯಿದ್ದು, ನಿರುದ್ಯೋಗಿಗಳಿಗೆ ಇದೊಂದು ಬಂಪರ್ ಲಾಟರಿ ಹೊಡೆದಂತಾಗಿದೆ.

ಇನ್ನೂ 20 ದಿನ ಮಾತ್ರ ಅವಕಾಶ

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 01, 2026 ರಿಂದಲೇ ಶುರುವಾಗಿದ್ದು, ಆಗಸ್ಟ್ 21, 2026 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಅರ್ಜಿಯಲ್ಲಿ ತಪ್ಪುಗಳಾಗಿದ್ದರೆ ತಿದ್ದಿಕೊಳ್ಳಲು ನೋಂದಣಿ ಮುಕ್ತಾಯವಾದ ನಂತರ ಕೇವಲ 2 ದಿನಗಳ ಕಾಲ ‘ಎಡಿಟ್ ವಿಂಡೋ’ ಓಪನ್ ಇರಲಿದೆ. ಸೆಪ್ಟೆಂಬರ್ 2026 ರಲ್ಲಿ ಪೂರ್ವ-ಪರೀಕ್ಷಾ ತರಬೇತಿ (PET) ಹಾಗೂ ಪ್ರಿಲಿಮ್ಸ್ ಪರೀಕ್ಷೆಯ ಕಾಲ್ ಲೆಟರ್ ಲಭ್ಯವಾಗಲಿದ್ದು, ಅಕ್ಟೋಬರ್ 2026 ರಲ್ಲಿ ಪ್ರಿಲಿಮಿನರಿ ಆನ್‌ಲೈನ್ ಪರೀಕ್ಷೆ ನಡೆಯಲಿದೆ. ಇದರ ರಿಸಲ್ಟ್ ನವೆಂಬರ್‌ನಲ್ಲಿಯೇ ಪ್ರಕಟವಾಗಿ, ಅದೇ ತಿಂಗಳು ಮೇನ್ಸ್ ಪರೀಕ್ಷೆಯ ಕಾಲ್ ಲೆಟರ್ ಕೂಡ ಸಿಗಲಿದೆ. ಡಿಸೆಂಬರ್ 2026 ರಲ್ಲಿ ಮುಖ್ಯ (Main) ಪರೀಕ್ಷೆ ಮುಗಿದರೆ, ಮಾರ್ಚ್ 2027 ರ ಹೊತ್ತಿಗೆ ನಿಮ್ಮ ಕೈಯಲ್ಲಿ ಅಪಾಯಿಂಟ್‌ಮೆಂಟ್ ಲೆಟರ್ (Provisional Allotment) ಇರಲಿದ್ದು, ಬ್ಯಾಂಕ್ ಉದ್ಯೋಗಿ ಆಗುವ ನಿಮ್ಮ ಕನಸು ನನಸಾಗುವುದು ಗ್ಯಾರಂಟಿ!

64 ಸಾವಿರದವರೆಗೂ ಸಂಬಳ ಪಡೆಯುವ ಅವಕಾಶ

ಈ ಹುದ್ದೆಗೆ ಆಯ್ಕೆಯಾದವರಿಗೆ ಹಣದ ಹೊಳೆಯೇ ಹರಿಯಲಿದೆ ಎಂದರೆ ತಪ್ಪಾಗಲಾರದು! ಮೂಲ ವೇತನವೇ ₹24,050 ದಿಂದ ಶುರುವಾಗಲಿದ್ದು, ಕಾಲಕ್ರಮೇಣ ₹64,480 ರವರೆಗೆ ತಲುಪುವ ಬೃಹತ್ ಪೇ-ಸ್ಕೇಲ್ (ಅಂದರೆ 24050-1340/3-28070-1650/3-33020-2000/4-41020-2340/7-57400-4400/1-61800-2680/1-64480) ಇದಾಗಿದೆ. ಜೊತೆಗೆ ಬ್ಯಾಂಕಿನ ನಿಯಮಗಳ ಪ್ರಕಾರ ಆಕರ್ಷಕ ಭತ್ಯೆಗಳೂ ಸಿಗಲಿವೆ. ಇನ್ನು ಅರ್ಜಿ ಶುಲ್ಕದ ವಿಚಾರಕ್ಕೆ ಬಂದರೆ, ಸಾಮಾನ್ಯ ಹಾಗೂ ಇತರ ವರ್ಗದ ಅಭ್ಯರ್ಥಿಗಳಿಗೆ ₹850 (ಜಿಎಸ್‌ಟಿ ಸೇರಿ) ನಿಗದಿಪಡಿಸಿದ್ದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು ಹಾಗೂ ಮಾಜಿ ಸೈನಿಕ (SC/ST/PwBD/ESM/DESM) ಅಭ್ಯರ್ಥಿಗಳಿಗೆ ಕೇವಲ ₹175 ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್ ಬ್ಯಾಂಕ್ ವಹಿವಾಟು ಶುಲ್ಕವನ್ನು ಅಭ್ಯರ್ಥಿಗಳೇ ಭರಿಸಬೇಕಾಗುತ್ತದೆ ಎಂಬುದನ್ನು ಮರೆಯದಿರಿ.

ವಯೋಮಿತಿಯ ವಿವರ ಇಲ್ಲಿದೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆಗಸ್ಟ್ 01, 2026 ಕ್ಕೆ ಕನಿಷ್ಠ 20 ವರ್ಷ ತುಂಬಿರಬೇಕು ಹಾಗೂ 28 ವರ್ಷ ಮೀರಿರಬಾರದು. ಆದರೆ ಮೀಸಲಾತಿ ಕೋರುವವರಿಗೆ ವಯೋಮಿತಿಯಲ್ಲಿ ಭರ್ಜರಿ ಸಡಿಲಿಕೆ ಇದೆ! ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ (ನಾನ್-ಕ್ರೀಮಿ ಲೇಯರ್) ಅಭ್ಯರ್ಥಿಗಳಿಗೆ 3 ವರ್ಷ, ವಿಕಲಚೇತನರಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ. ಮಾಜಿ ಸೈನಿಕರಿಗೆ (ESM/DESM) ತಾವು ಸೇವೆ ಸಲ್ಲಿಸಿದ ಅವಧಿ ಜೊತೆಗೆ 3 ವರ್ಷ (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 8 ವರ್ಷ, ಗರಿಷ್ಠ 50 ವರ್ಷ ವಯಸ್ಸಿನ ಮಿತಿ) ಹಾಗೂ ವಿಧವೆಯರು, ವಿಚ್ಛೇದಿತ ಮಹಿಳೆಯರಿಗೆ 35 ವರ್ಷದವರೆಗೆ (ಒಬಿಸಿ 38, ಎಸ್‌ಸಿ/ಎಸ್‌ಟಿ 40 ವರ್ಷ) ಅರ್ಜಿ ಸಲ್ಲಿಸಲು ಅವಕಾಶವಿದೆ.

ಶೈಕ್ಷಣಿಕ ಅರ್ಹತೆಯ ವಿಚಾರ

ಶೈಕ್ಷಣಿಕ ಅರ್ಹತೆಯ ವಿಚಾರಕ್ಕೆ ಬಂದರೆ, ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation) ಮುಗಿಸಿರಬೇಕು ಹಾಗೂ ಆಗಸ್ಟ್ 21, 2026 ರೊಳಗೆ ನಿಮ್ಮ ರಿಸಲ್ಟ್ ಅಧಿಕೃತವಾಗಿ ಪ್ರಕಟವಾಗಿರಬೇಕು. ಜೊತೆಗೆ ಕಂಪ್ಯೂಟರ್ ಆಪರೇಷನ್/ಭಾಷೆಯಲ್ಲಿ ಪ್ರಮಾಣಪತ್ರ/ಡಿಪ್ಲೊಮಾ/ಪದವಿ ಹೊಂದಿರಬೇಕು ಅಥವಾ ಹೈಸ್ಕೂಲ್/ಕಾಲೇಜಿನಲ್ಲಿ ಕಂಪ್ಯೂಟರ್ ಅನ್ನು ಒಂದು ವಿಷಯವಾಗಿ ಓದಿರಲೇಬೇಕು. ಅತ್ಯಂತ ಪ್ರಮುಖ ವಿಚಾರವೆಂದರೆ, ನೀವು ಕೇವಲ ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಮಾತ್ರ ಅರ್ಜಿ ಸಲ್ಲಿಸಬೇಕು ಹಾಗೂ ಆ ರಾಜ್ಯದ ಪ್ರಾದೇಶಿಕ ಭಾಷೆ (ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು) ಕಡ್ಡಾಯವಾಗಿ ಬರಲೇಬೇಕು! ಎಕ್ಸಾಮ್‌ ಅನ್ನೂ ಕೂಡ ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಬರೆಯಬಹುದು!

ಪರೀಕ್ಷಾ ಮಾದರಿ ಹೀಗಿರಲಿದೆ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports