Last Updated:
ರಾಮಾಯಣ ಚಿತ್ರದ ಟ್ರೈಲರ್ ಅನ್ನ ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಟ್ರೋಲರ್‌ಗಳು ಟ್ರೋಲ್ ಕೂಡ ಮಾಡ್ತಿದ್ದಾರೆ. ಆದರೆ, ಪಾಕಿಸ್ತಾನದ ಮಂದಿ ಈ ಟ್ರೈಲರ್ ಮೆಚ್ಚಿಕೊಂಡಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಮಾಯಣ ಚಿತ್ರದ (Ramayana Movie) ಟ್ರೈಲರ್ ಧಮಾಕಾ ಮಾಡುತ್ತಿದೆ. ಆದರೆ, ಟ್ರೋಲ್‌ಗಳು ಟ್ರೋಲ್ ಕೂಡ ಮಾಡ್ತಿದ್ದಾರೆ. ಇದರ ನಡುವೆ ಈ ಚಿತ್ರದ ಟ್ರೈಲರ್ ಹವಾ ಪಾಕಿಸ್ತಾನಕ್ಕೂ (Pakistan) ತಲುಪಿದೆ. ಇಲ್ಲಿಯ ಯುಟ್ಯೂಬರ್ಸ್, ಇನ್‌ಫ್ಲುಯೆನ್ಸರ್ಸ್, ಸಿನಿಮಾಗಳು ಪ್ರೇಮಿಗಳು (Movie Lovers) ಈ ಟ್ರೈಲರ್ (Trailer) ನೋಡಿಯೇ ಕಳೆದು ಹೋಗಿದ್ದಾರೆ. ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ರಾಮಾಯಣ ಟ್ರೈಲರ್ ಮೆಚ್ಚಿದ ಪಾಕ್ ಮಂದಿ
ಇನ್‌ಫ್ಲುಯೆನ್ಸರ್ಸ್ ಈ ಚಿತ್ರದ ಟ್ರೈಲರ್ ಮೆಚ್ಚಿಕೊಂಡು ವಿಡಿಯೋ ಮಾಡಿದ್ದಾರೆ. ಈ ಟ್ರೈಲರ್ ನೋಡಿದ ಇವರೆಲ್ಲ ಇದರ ಬಜೆಟ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.
ಚಿತ್ರದ ಟ್ರೈಲರ್ ನೋಡಿದ ಇವರೆಲ್ಲ ಬಜೆಟ್ ಲೆಕ್ಕ ಹಾಕಿದ್ದಾರೆ. ಈ ಚಿತ್ರ ಸಾವಿರಾರು ಕೋಟಿ ಅಂತಲೂ ಅಂದಾಜು ಮಾಡಿದ್ದಾರೆ. ಇದು ನಾಲ್ಕು ಸಾವಿರ ಕೋಟಿ ಬಜೆಟ್ ಚಿತ್ರ ಅಂತ ಒಬ್ಬರು ಹೇಳಿಕೊಂಡಿದ್ದಾರೆ.
ರಾಮಾಯಣ ಚಿತ್ರದ ಯಶ್ ಅಭಿನಯವನ್ನ ಪಾಕಿಸ್ತಾನ್ ಮಂದಿ ತುಂಬಾನೆ ಇಷ್ಟಪಟ್ಟಿದ್ದಾರೆ. ಯಶ್ ಈ ಒಂದು ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರ ನಟನೆ ನಿಜಕ್ಕೂ ಅದ್ಭುತ ಅಂತಲೇ ಹೇಳಿಕೊಂಡಿದ್ದಾರೆ.
ರಾವಣ ಪಾತ್ರಧಾರಿ ಯಶ್ ಅವರನ್ನ ಮಾತ್ರ ಇಲ್ಲಿಯ ಯುಟ್ಯೂಬರ್ಸ್ ಹೊಗಳಿಲ್ಲ. ರಾಮನ ಪಾತ್ರಧಾರಿ ರಣಬೀರ್ ಕಪೂರ್ ಅವರ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ.
ಯಶ್ ಮೆಚ್ಚಿದ ಪಾಕ್ ಮಂದಿ
ರಾಮಾಯಣ ಚಿತ್ರ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಈ ವರ್ಷದ ದೀಪಾವಳಿ ಹಬ್ಬಕ್ಕೆ ಈ ಸಿನಿಮಾ ತೆರೆ ಕಾಣುತ್ತಿದೆ. ಎರಡನೇ ಭಾಗ 2027 ರ ದೀಪಾವಳಿಗೆ ತೆರೆ ಕಾಣುತ್ತಿದೆ.
ನಿತೇಶ್ ತಿವಾರಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ನಮಿತ್ ಮಲ್ಹೋತ್ರಾ ಈ ಚಿತ್ರವನ್ನ ನಿರ್ಮಿಸಿದ್ದಾರೆ. ನಿರ್ಮಾಣದಲ್ಲಿ ಯಶ್ ಕೂಡ ಸಾಥ್ ಕೊಟ್ಟಿದ್ದಾರೆ.
ರಾಮಾಯಣ ಚಿತ್ರಕ್ಕೆ ಎ.ಆರ್.ರೆಹಮಾನ್ ಹಾಗೂ ಹ್ಯಾನ್ಸ್ ಝಿಮ್ಮರ್ ಸಂಗೀತ ಮಾಡಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ, ಲಾರಾ ದತ್ತಾ, ಅರುಣ್ ಗೋವಿಲ್ (ರಾಮಾಯಣ ಸೀರಿಯಲ್ ರಾಮನ ಪಾತ್ರಧಾರಿ), ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಇನ್ನು ಹಲವು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಎರಡು ಭಾಗದಲ್ಲಿ ಬರ್ತಿರೋ ಈ ಚಿತ್ರದ ಮೊದಲ ಭಾಗದಲ್ಲಿ ಇಡೀ ಕತೆಯ ಕುತೂಹಲದ ವಿಷಯಗಳೇ ಇವೆ. ಎರಡನೇ ಭಾಗದಲ್ಲಿ ಇಡೀ ಕತೆ ರಿವೀಲ್ ಆಗುತ್ತದೆ ಅಂತಲೂ ಡೈರೆಕ್ಟರ್ ನಿತೇಶ್ ತಿವಾರಿ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka














