Bangalore: ತೀವ್ರ ಬಿಸಿಲಿನ ಅಪಾಯದಲ್ಲಿ ಸಿಲಿಕಾನ್​ ಸಿಟಿ! ಟಾಪ್ 50 ಲಿಸ್ಟ್​ನಲ್ಲಿ ಬೆಂಗಳೂರು | bangalore among world s 50 most heat risk cities | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಬೆಂಗಳೂರು


Last Updated:

Bangalore: ಸಿಲಿಕಾನ್ ಸಿಟಿಗೆ ಬಿಸಿಲಿನ ಅಪಾಯ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಹೀಟ್ ರಿಸ್ಕ್ ಹೆಚ್ಚಾಗಿದ್ದು ವಿಶ್ವದ ಅಪಾಯಕಾರಿ ಬಿಸಿಲ ನಗರಗಳಲ್ಲಿ ಬೆಂಗಳೂರು ಸೇರಿದೆ.

ಬೆಂಗಳೂರು
ಬೆಂಗಳೂರು

ವಿಶ್ವದಲ್ಲೇ ಭಾರತ (India), ಪಾಕಿಸ್ತಾನ (Pakistan), ನೈಜೀರಿಯಾ ಮತ್ತು ಘಾನಾ ಅತಿ ಹೆಚ್ಚು ಶಾಖದ ಅಪಾಯದಲ್ಲಿರುವ ನಗರಗಳನ್ನು (Cities) ಹೊಂದಿರುವ ದೇಶಗಳಾಗಿವೆ. ಬೆಂಗಳೂರು, ಜೈಪುರ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಕೇಂದ್ರಗಳಾಗಿ ಗುರುತಿಸಲ್ಪಟ್ಟ ಟಾಪ್ 50 ನಗರಗಳಲ್ಲಿ ಹೀಟ್ ರಿಸ್ಟ್ ಹೆಚ್ಚಿದೆ ಎಂದು ವಿಶ್ಲೇಷಣೆಯೊಂದು ತಿಳಿಸಿದೆ.

ಹೆಚ್ಚು ಅಪಾಯದಲ್ಲಿರುವ ನಗರಗಳಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ನಗರಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಮತ್ತು ಉಪ-ಸಹಾರನ್ ಆಫ್ರಿಕಾದಲ್ಲಿವೆ.

ಅತ್ಯಂತ ಅಧಿಕ ಅಪಾಯದಲ್ಲಿರುವ ಸಿಟಿ

ಇರಾಕ್‌ನ ಅಲ್ ಬಸ್ರಾ ನಗರವು ವಿಶ್ವದಲ್ಲಿಯೇ ಅತ್ಯಂತ ಅಪಾಯದಲ್ಲಿದೆ. ನಂತರ ಗುಜರಾತ್‌ನ ಅಹಮದಾಬಾದ್ ಎಂದು ಸಸ್ಟೈನಬಲ್ ಸಿಟೀಸ್ ಅಂಡ್ ಸೊಸೈಟಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಹೇಳುತ್ತದೆ. ಭೂಮಿ ಬೆಚ್ಚಗಾಗುತ್ತಲೇ ಇರುವಾಗ ಜನರು ಹೆಚ್ಚು ಅಪಾಯದಲ್ಲಿರುವ ಸ್ಥಳಗಳನ್ನು ಗುರುತಿಸಲಾಗಿದೆ.

ಬೆಂಗಳೂರಿಗೆ ರಿಸ್ಕ್

ಮಹಾರಾಷ್ಟ್ರದ ನಾಗ್ಪುರ ಮತ್ತು ಪುಣೆ, ತಮಿಳುನಾಡಿನ ಮಧುರೈ ಮತ್ತು ಚೆನ್ನೈ, ಕರ್ನಾಟಕದ ಬೆಂಗಳೂರು ಮತ್ತು ಉತ್ತರ ಪ್ರದೇಶದ ಕಾನ್ಪುರ ಮತ್ತು ಲಕ್ನೋ ಸೇರಿದಂತೆ ಹದಿನಾಲ್ಕು ಭಾರತೀಯ ನಗರಗಳು ಟಾಪ್ 50 ಅಪಾಯಕಾರಿ ಸ್ಥಳಗಳಲ್ಲಿ ಸ್ಥಾನ ಪಡೆದಿವೆ.

“ಕೇವಲ ಬಿಸಿ ತಾಪಮಾನಕ್ಕೆ ಒಡ್ಡಿಕೊಳ್ಳುವುದಷ್ಟೇ ಅಪಾಯಕ್ಕೆ ಕಾರಣವಾಲ್ಲ. ಹೀಟ್ ರಿಸ್ಕ್ ಬೇರೆ ಬೇರೆ ರೀತಿ ಪರಿಣಾಮ ಬೀರುತ್ತದೆ” ಎಂದು ಪ್ರಮುಖ ಲೇಖಕಿ, ಯುಕೆಯ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕಿ ನೇತ್ಮಿ ಜಯರತ್ನ ಕರಿಯವಾಸಮ್ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಈ ಅಧ್ಯಯನವು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳನ್ನು ಸ್ಟಡಿ ಮಾಡಿದೆ. “ಭಾರತ, ಪಾಕಿಸ್ತಾನ, ನೈಜೀರಿಯಾ ಮತ್ತು ಘಾನಾ ಅತಿ ಹೆಚ್ಚು ಹೀಟ್ ರಿಸ್ಕ್ ನಗರಗಳನ್ನು ಹೊಂದಿವೆ” ಎಂದು ಲೇಖಕರು ಬರೆದಿದ್ದಾರೆ.

“ಕೈರೋ (ಈಜಿಪ್ಟ್), ಬ್ಯಾಂಕಾಕ್ (ಥೈಲ್ಯಾಂಡ್), ಹನೋಯ್ (ವಿಯೆಟ್ನಾಂ) ಮತ್ತು ಜೈಪುರ (ಭಾರತ) ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಕೇಂದ್ರಗಳು ಸಹ ಅಗ್ರ 50 ರಲ್ಲಿ ಸ್ಥಾನ ಪಡೆದಿವೆ” ಎಂದು ಅವರು ಹೇಳಿದರು.

ಸೌದಿ ಅರೇಬಿಯಾದ ಬ್ಯಾಂಕಾಕ್ ಮತ್ತು ಜೆಡ್ಡಾದಂತಹ ಹೆಚ್ಚು ಒಡ್ಡಿಕೊಂಡ ನಗರಗಳು ಹೀಟ್ ರಿಸ್ಕ್ ಮ್ಯಾನೇಜ್ ಮಾಡುತ್ತವೆ. ಹಾಗಾಗಿ ಲಿಸ್ಟ್​ನಲ್ಲಿ ಅವು ಟಾಪ್​ನಲ್ಲಿ ಕಾಣಿಸಿಕೊಂಡಿಲ್ಲ. ಇಲ್ಲಿ ಅಪಾಯವೂ ಕಡಿಮೆಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed