BAN vs ZIM ODI: ಆಸ್ಟ್ರೇಲಿಯಾ, ಪಾಕ್ ಮಣಿಸಿದ್ದ ಬಾಂಗ್ಲಾಗೆ ಭಾರೀ ಮುಖಭಂಗ! 142 ರನ್​ ಚೇಸ್ ಮಾಡಲಾಗದೇ ಜಿಂಬಾಬ್ವೆ ವಿರುದ್ಧ ಸೋಲು | ಕ್ರೀಡಾ ಸುದ್ದಿ | ACTPnews

ಬಾಂಗ್ಲಾದೇಶ ಮಣಿಸಿದ ಜಿಂಬಾಬ್ವೆ


Last Updated:


ಸೋಮವಾರ ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ, ಜಿಂಬಾಬ್ವೆ ಬಾಂಗ್ಲಾದೇಶದ ವಿರುದ್ಧ 25 ರನ್‌ಗಳ ರೋಮಾಂಚಕ ಗೆಲುವು ಸಾಧಿಸಿತು. ಜಿಂಬಾಬ್ವೆ ನೀಡಿದ್ದ 142 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 33.1 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು.

ಬಾಂಗ್ಲಾದೇಶ ಮಣಿಸಿದ ಜಿಂಬಾಬ್ವೆ
ಬಾಂಗ್ಲಾದೇಶ ಮಣಿಸಿದ ಜಿಂಬಾಬ್ವೆ

ಜಿಂಬಾಬ್ವೆ ಪ್ರವಾಸದ ಸಮಯದಲ್ಲಿ ಬಾಂಗ್ಲಾದೇಶ ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲು ಅನುಭವಿಸಿದೆ. ಕಳೆದ ತಿಂಗಳಷ್ಟೇ ಬಲಿಷ್ಠ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡವನ್ನ ತವರು ನೆಲದಲ್ಲಿ ಸೋಲಿಸಿದ್ದ ಬಾಂಗ್ಲಾದೇಶ ತಂಡ ಜಿಂಬಾಬ್ವೆ ಈ ಪ್ರವಾಸದಲ್ಲಿ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿದೆ. ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಅಂತರದ ಸೋಲಿನಿಂದ ದಿಗ್ಭ್ರಮೆಗೆ ಒಳಗಾಗಿದ್ದ ಬಾಂಗ್ಲಾದೇಶ, ಇದೀಗ ಏಕದಿನ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದೆ. ಕೇವಲ 142 ರನ್‌ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಲಾಗದೇ ಸೋಲು ಕಂಡಿರುವುದು ಬಾಂಗ್ಲಾದೇಶ ತಂಡಕ್ಕೆ ನುಂಗಲಾರದ ತುತ್ತಾಗಿದೆ.

ಸೋಮವಾರ ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ, ಜಿಂಬಾಬ್ವೆ ಬಾಂಗ್ಲಾದೇಶದ ವಿರುದ್ಧ 25 ರನ್‌ಗಳ ರೋಮಾಂಚಕ ಗೆಲುವು ಸಾಧಿಸಿತು. 142 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 33.1 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು. ನೂರುಲ್ ಹಸನ್ (31), ತೌಹಿದ್ ಹೃದಯ್ (25), ಮತ್ತು ಮೆಹಿದಿ ಹಸನ್ (10) ಹೊರತುಪಡಿಸಿ, ತಂಡದ ಎಲ್ಲಾ ಬಾಂಗ್ಲಾದೇಶಿ ಬ್ಯಾಟ್ಸ್‌ಮನ್‌ಗಳು ಒಂದಂಕಿಯ ಸ್ಕೋರ್‌ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.

ರಿಚರ್ಡ್-ಇವಾನ್ಸ್ ಮಾರಕ ದಾಳಿ

ಜಿಂಬಾಬ್ವೆ ಬೌಲರ್‌ಗಳಲ್ಲಿ, ನಾಯಕ ರಿಚರ್ಡ್ ಎನ್‌ಗರವಾ ಮತ್ತು ಬ್ರಾಡ್ ಇವಾನ್ಸ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಬ್ಲೆಸಿಂಗ್ ಮುಜರಬಾನಿ ಮತ್ತು ನ್ಯೂಮನ್ ನ್ಯಾಮ್ಹುರಿ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

141ಕ್ಕೆ ಆಲೌಟ್ ಆಗಿದ್ದ ಜಿಂಬಾಬ್ವೆ

ಇದಕ್ಕೂ ಮೊದಲು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 36.4 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಗಿತ್ತು. ನ್ಯೂಮನ್ ನ್ಯಾಮ್‌ಹುರಿ (33) ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರೆ, ನಾಯಕ ರಿಚರ್ಡ್ ಎನ್‌ಗರವಾ (27) ಮತ್ತು ಇನ್ನೋಸೆಂಟ್ ಕೈಯಾ (26) ಎರಡಂಕಿ ದಾಟಿ ತಂಡದ ಮೊತ್ತವನ್ನ 100ರ ಗಡಿದಾಟಿಸಿದ್ದರು.

ಜುಲೈ 9ಕ್ಕೆ 2ನೇ ಪಂದ್ಯ

ಬಾಂಗ್ಲಾದೇಶದ ಬೌಲರ್‌ಗಳಲ್ಲಿ, ನಹಿದ್ ರಾಣಾ 6 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ತಸ್ಕಿನ್ ಅಹ್ಮದ್ 2 ವಿಕೆಟ್‌ಗಳನ್ನು ಪಡೆದರು. ಆಲ್‌ರೌಂಡ್ ಪ್ರದರ್ಶನ ತೋರಿ ಮಿಂಚಿದ  ನ್ಯೂಮನ್ ನ್ಯಾಮ್‌ಹುರಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿಯನ್ನು ಪಡೆದರು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಜಿಂಬಾಬ್ವೆ 1-0 ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಜುಲೈ 9 ರಂದು ನಿಗದಿಯಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed