Last Updated:
ಬಾಲಯ್ಯ ಅಭಿನಯದ 112 ನೇ ಸಿನಿಮಾ ಸೆಟ್ಟೇರಿದೆ. ವಿಶೇಷವೆಂದ್ರೆ ಚಿತ್ರದ ಮೊದಲ ದೃಶ್ಯವನ್ನ ವಿಶೇಷ ವ್ಯಕ್ತಿನೇ ಡೈರೆಕ್ಷನ್ ಮಾಡಿದ್ದಾರೆ. ಆದರೆ, ಈ ಚಿತ್ರದ ಡೈರೆಕ್ಟರ್ ಬೇರೆ ಇದ್ದಾರೆ! ಈ ಸಿನಿಮಾದ ಇತರ ವಿವರ ಇಲ್ಲಿದೆ ಓದಿ.
ಟಾಲಿವುಡ್ ಗಾಡ್ ಆಫ್ ಮಾಸ್ ನಟ ಬಾಲಕೃಷ್ಣ (Balakrishna) ಅಭಿನಯದ 112 ನೇ ಚಿತ್ರ ಸೆಟ್ಟೇರಿದೆ. ವಿಶೇಷವೆಂದ್ರೆ ಈ ಚಿತ್ರದ ಮೊದಲ ದೃಶ್ಯವನ್ನ ಬಾಲಯ್ಯ (Balayya) ಅವರ ಮಗಳೇ ಡೈರೆಕ್ಷನ್ ಮಾಡಿದ್ದಾರೆ. ಆದರೆ, ಈ ಚಿತ್ರದ ನಿರ್ದೇಶಕರು ಬೇರೆ ಇದ್ದಾರೆ. ಹೆಸರಾಂತ ಸಿನಿಮಾ ನಿರ್ದೇಶಕರೇ ಈ ಚಿತ್ರಕ್ಕೆ ಡೈರೆಕ್ಷನ್ (Direction) ಮಾಡ್ತಿದ್ದಾರೆ. ಬಾಲಯ್ಯ (Balayya) ಇವರ ಜೊತೆಗೆ ಫಸ್ಟ್ ಟೈಮ್ ಕೆಲಸ ಮಾಡ್ತಿದ್ದಾರೆ. ಈ ಸಿನಿಮಾದ ನಿರ್ಮಾಪಕರ ಜೊತೆಗೂ ಇದು ಫಸ್ಟ್ ಸಿನಿಮಾನೇ ಆಗಿದೆ. ಇಷ್ಟೆಲ್ಲ ಫಸ್ಟ್ಗಳ ಈ ಚಿತ್ರದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಈ ಚಿತ್ರದ ಡೈರೆಕ್ಟರ್ ಯಾರು
ಈ ಒಂದು ಚಿತ್ರದ ಮೊದಲ ದೃಶ್ಯವನ್ನ ಮಗಳು ಡೈರೆಕ್ಷನ್ ಮಾಡಿರೋದು ಬಾಲಯ್ಯ ಅವರಿಗೆ ಅಷ್ಟೆ ಖುಷಿನೂ ತಂದಿದೆ. ಈ ಹಿಂದಿನ ತಮ್ಮ ಅನ್ಸ್ಟಾಪಬಲ್ ಕಾರ್ಯಕ್ರಮಕ್ಕೂ ತೇಜಸ್ವಿನಿ ಕೆಲಸ ಮಾಡಿದ್ದಾರೆ. ಕ್ರಿಯೇಟಿವ್ ವಿಭಾಗದಲ್ಲಿಯೇ ಇವರಿದ್ದರು ನೋಡಿ. ಈ ವಿಚಾರವನ್ನು ಸ್ವತಃ ಬಾಲಯ್ಯ ಈ ಸಮಯದಲ್ಲಿ ಹೇಳಿಕೊಂಡಿದ್ದಾರೆ.
ಬಾಲಯ್ಯ ಅವರ ಈ ಚಿತ್ರವನ್ನ ಕೊರಟಾಲ ಶಿವ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಹಿಂದೆ ಇವರು ಜನತಾ ಗ್ಯಾರೇಜ್, ಭರತ್ ಅನೆ ನೇನು, ಮಿರ್ಚಿ ಹಾಗೂ ಶ್ರೀಮಂತುಡು ಚಿತ್ರ ಮಾಡಿದ್ದರು.
ಆದರೆ, ಬಾಲಯ್ಯ ಅವರಿಗೆ ಇದು ಇವರ ಜೊತೆಗೆ ಮಾಡ್ತಿರೋ ಪ್ರಥಮ್ ಚಿತ್ರವೇ ಆಗಿದೆ. ನಿರ್ಮಾಪಕರ ವಿಚಾರದಲ್ಲೂ ಅಷ್ಟೇನೆ ನೋಡಿ. ಸುಧಾಕರ್ ಚೆರುಕುರಿ ಮತ್ತು ಸುಧಾಕರ್ ಮಿಕ್ಕಿಲಿನೇನಿ ಅವರು ಈ ಚಿತ್ರಕ್ಕೆ ದುಡ್ಡು ಹಾಕುತ್ತಿದ್ದಾರೆ. ಬಾಲಯ್ಯ ಅವರು ಇವರ ಜೊತೆಗೂ ಫಸ್ಟ್ ಟೈಮ್ ಕೆಲಸ ಮಾಡುತ್ತಿದ್ದಾರೆ.
ಈ ಚಿತ್ರದ ಮುಹೂರ್ತದ ಫೋಟೋಗಳು ಮಾಧ್ಯಮಗಳಿಗೆ ಶೇರ್ ಆಗಿವೆ. ಈ ಚಿತ್ರದ ಮಾಹಿತಿನೂ ಅಧಿಕೃತವಾಗಿಯೇ ಕೊಡಲಾಗಿದೆ.
ಬಾಲಯ್ಯನ 112 ನೇ ಸಿನಿಮಾ
ಈ ಚಿತ್ರದ ಮುಹೂರ್ತದಲ್ಲಿ ಇನ್ನೊಂದಿಷ್ಟು ವಿಚಾರ ಹಂಚಿಕೊಂಡಿದ್ದಾರೆ. ತಮ್ಮನ್ನ ಪ್ರೀತಿಸುವ ಜನರ ಕುರಿತು ಹೇಳಿಕೊಂಡಿದ್ದಾರೆ. ಜನರ ಪ್ರೀತಿ ಪಡೆದಿರೋ ನಾನೇ ಅದೃಷ್ಟವಂತ ಅಂತಲೇ ಹೇಳಿದ್ದಾರೆ. ಚಿತ್ರದ ಮೊದಲ ದೃಶ್ಯವನ್ನ ಡೈರೆಕ್ಟ್ ಮಾಡಿರೋ ಮಗಳಿಗೂ ಬಾಲಯ್ಯ ಧನ್ಯವಾದ ಹೇಳಿದ್ದಾರೆ.
ಈ ಚಿತ್ರದ ಇತರ ಮಾಹಿತಿ ಹೆಚ್ಚಿಗೆ ಏನು ಹೊರ ಬಂದಿಲ್ಲ. ನಾಯಕಿ ಯಾರು ಅನ್ನೋ ಪ್ರಶ್ನೆ ಇದ್ದೇ ಇದೆ. ಅದರ ಹೊರತಾಗಿ ಬಾಲಯ್ಯ ಸದ್ಯ ಗೋಪಿಚಂದ್ ಮಲಿನೇನಿ ಅವರ ಸಿನಿಮಾ ಮಾಡುತ್ತಿದ್ದಾರೆ.
ಈ ಚಿತ್ರದ ಶೂಟಿಂಗ್ ಸದ್ಯ ಕಾಕಿನಾಡ ಬಂದರಿನಲ್ಲಿಯೇ ನಡೆಯುತ್ತಿದೆ. ಈ ಸಿನಿಮಾದ ಕೆಲಸ ಮುಗಿದ್ಮೇಲೆ ಕೊರಟಾಲ ಶಿವ ಅವರ ಈ ಚಿತ್ರದ ಕೆಲಸದಲ್ಲಿ ಬ್ಯೂಸಿ ಆಗುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿಯೇ ಈ ಸಿನಿಮಾದ ಶೂಟಿಂಗ್ ಶುರು ಆಗುತ್ತಿದೆ ಅಂತ ಹೇಳಬಹುದು
Bangalore [Bangalore],Bangalore,Karnataka













