Last Updated:
ಬಲರಾಮನ ದಿನಗಳು ಚಿತ್ರದ 3 ನೇ ಹಾಡು ರಿಲೀಸ್ ಆಗಿದೆ. ಇದು ಅಷ್ಟೆ ಕಲರ್‌ಫುಲ್ ಆಗಿದೆ. ವಿನೋದ್ ಪ್ರಭಾಕರ್ ಹಾಗೂ ವಂದಿತಾ ಗೌಡ ಇದರಲ್ಲಿದ್ದಾರೆ. ಇವರ ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಆ ದಿನಗಳು ಡೈರೆಕ್ಟರ್ ಕೆ.ಎಂ.ಚೈತನ್ಯ (K M Chaitanya) ಅವರ ಬಲರಾಮನ ದಿನಗಳು ಚಿತ್ರ (Balaramana Dinagalu Movie) ರಿಲೀಸ್‌ಗೆ ರೆಡಿ ಆಗಿದೆ. ಸಿನಿಮಾದ ಎರಡು ಹಾಡುಗಳು ಈಗಾಗಲೇ ರಿಲೀಸ್ ಆಗಿವೆ. ಅಷ್ಟರಲ್ಲಿಯೇ ಚಿತ್ರದ ಇನ್ನೂ ಒಂದು ಹಾಡು ರಿಲೀಸ್ (Song Release) ಆಗಿದೆ. ಇದು ರೆಟ್ರೋ ಕಾಲದ ಐಟಂ ನಂಬರ್ ಅಂತಲೇ ಹೇಳಬಹುದು. ರೆಡ್ ಥೀಮ್ ಅಲ್ಲಿ ಚೆಂದದ ಸೆಟ್ ಹಾಕಿದ್ದಾರೆ. ಆಗೆಲ್ಲ ಬೆಂಗಳೂರಿನಲ್ಲಿ ಇರ್ತಾ ಇದ್ದ ಕ್ಲಬ್‌ಗಳ ರೂಪವೇ ಇದಾಗಿದೆ. ಕಾರಣ, ಇಡೀ ಕತೆ ಆ ದಿನಗಳ ಸ್ಟೋರಿನೇ ಆಗಿದೆ. ಹಾಗಾಗಿಯೇ ಇಲ್ಲಿಯ ಕ್ಲಬ್ ಸಾಂಗ್ (Song Release) ಕೂಡ ಆ ಒಂದು ಕಾಲಘಟ್ಟವನ್ನ ನೆನಪಿಸುತ್ತದೆ. ಹಾಗೆ ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಜೂನ್-26 ರಂದು ರಿಲೀಸ್
ಈ ಹಾಡಿನಲ್ಲಿ ಬೆಂಗಳೂರಿನ ಅಂದಿನ ಕ್ಲಬ್ ಚಿತ್ರಣವೇ ಸಿಗುತ್ತದೆ. ಎಲ್ಲವು ಇಲ್ಲಿ ರೆಡ್ ಥೀಮ್ ಅಲ್ಲಿಯೇ ಇದೆ. ಡ್ಯಾನ್ಸರ್ ಪರಿಚಯ ಕೂಡ ಇಲ್ಲಿ ಚೆನ್ನಾಗಿ ಆಗಿದೆ. ಕ್ಯಾಂಡಲ್ ಹಂಚಿರೋದು ಇಲ್ಲಿ ಇಂಟ್ರಸ್ಟಿಂಗ್ ಆಗಿದೆ. ಬ್ಯಾಕ್ ಶಾಟ್‌ನಿಂದಲೇ ಹಾಡು ಓಪನ್ ಆಗುತ್ತದೆ.
Quarterru ಅನ್ನುವ ಈ ಹಾಡಿನ ಲಿರಿಕ್ಸ್ ಅನ್ನ ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಸಂಜನಾ ಕಲ್ಮಂಜೆ ಈ ಹಾಡನ್ನ ಹಾಡಿದ್ದಾರೆ. ಕಲಾವಿದರು ಅಂತ ಬಂದ್ರೆ ಈ ಹಾಡಿನಲ್ಲಿ ವಿನೋದ್ ಪ್ರಭಾಕರ್ ಇದ್ದಾರೆ.
ಆದರೆ, ಡ್ಯಾನ್ಸರ್ ಅಂತ ಬಂದ್ರೆ ಈ ಒಂದು ಹಾಡಿಗೆ ನಟಿ ವಂದಿತಾ ಗೌಡ ಡ್ಯಾನ್ಸ್ ಮಾಡಿದ್ದಾರೆ. ಅಷ್ಟೆ ಚೆನ್ನಾಗಿಯೂ ಕಾಣಿಸುತ್ತಿದ್ದಾರೆ.
ಈ ಒಂದು ಹಾಡಿನ ಸಂಗೀತವು ಗಮನ ಸೆಳೆಯುತ್ತದೆ. ಆ ದಿನಗಳ ಹಾಡು ಇದಾಗಿದ್ದರಿಂದಲೇ ಇಡೀ ಹಾಡಿನಲ್ಲಿ ಅಬ್ಬರ ಏನು ಇಲ್ಲ. ಆ ದಿನಗಳ ಸಂಗೀತವನ್ನ ಇದು ಕಟ್ಟಿಕೊಡುತ್ತದೆ.
ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಕೊಟ್ಟಿದ್ದಾರೆ. ಕೆ.ಎಂ.ಚೈತನ್ಯ ನಿರ್ದೇಶನದ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್, ರಮೇಶ್ ಇಂದಿರಾ, ಅತುಲ್ ಕುಲಕರ್ಣಿ, ವಿನಯ್ ಗೌಡ, ಆಶಿಶ್ ವಿದ್ಯಾರ್ಥಿ, ಪ್ರಿಯಾ ಆನಂದ್ ಸೇರಿ ಇನ್ನು ಅನೇಕರು ಇದರಲ್ಲಿ ಅಭಿನಯಿಸಿದ್ದಾರೆ.
ಬಲರಾಮನ ದಿನಗಳು
ಈಗಾಗಲೇ ಈ ಚಿತ್ರ ಎರಡು ಹಾಡುಗಳು ರಿಲೀಸ್ ಆಗಿವೆ. ಈ ಎರಡು ಹಾಡುಗಳು ಗಮನ ಸೆಳೆಯೋ ಕೆಲಸವನ್ನು ಮಾಡಿವೆ. ಇನ್ನೇನು ಈ ಚಿತ್ರ ರಿಲೀಸ್ ಕೂಡ ಆಗುತ್ತದೆ.
ಈ ಹಿನ್ನೆಲೆಯಲ್ಲಿಯೆ ಸಿನಿಮಾ ತಂಡ ಇದೀಗ ಬಲರಾಮನ ದಿನಗಳ ಚಿತ್ರದ ಮೂರನೇ ಹಾಡು ರಿಲೀಸ್ ಮಾಡಿದೆ.
ಬಲರಾಮನ ದಿನಗಳು ಚಿತ್ರ ಜೂನ್-26 ರಂದು ರಿಲೀಸ್ ಆಗುತ್ತಿದೆ. ಈ ದಿನವನ್ನ ಚಿತ್ರ ತಂಡವೇ ಅಧಿಕೃತವಾಗಿಯೇ ಘೋಷಣೆ ಮಾಡಿದೆ.
ಇನ್ನುಳಿದಂತೆ ಈ ಚಿತ್ರಕ್ಕೂ ಆ ದಿನಗಳು ಚಿತ್ರಕ್ಕೂ ಎಲ್ಲೂ ಲಿಂಕ್ ಇಲ್ಲ. ಹಾಗೆ ಇದು ಆ ದಿನಗಳು ಚಿತ್ರದ ಮುಂದುವರೆದ ಭಾಗವೂ ಅಲ್ಲ. ಬದಲಾಗಿ ಈ ಚಿತ್ರದಲ್ಲಿ ಡೈರೆಕ್ಟರ್ ಕೆ.ಎಂ.ಚೈತನ್ಯ ಬಲರಾಮನ ಕತೆ ಹೇಳುತ್ತಿದ್ದಾರೆ.
ಈ ಕತೆ ಕೂಡ ಬೆಂಗಳೂರು ಭೂಗತಲೋಕಕ್ಕೆ ಕನೆಕ್ಟ್ ಆಗಿದೆ. ಈ ಹಿಂದಿನ ಆ ದಿನಗಳು ಚಿತ್ರದಲ್ಲಿ ಬೆಂಗಳೂರಿನ ಭೂಗತಲೋಕದ ಕತೆಯನ್ನೆ ಡೈರೆಕ್ಟರ್ ಕೆ.ಎಂ.ಚೈತನ್ಯ ಹೇಳಿದ್ದರು ಅಂತ ಹೇಳಬಹುದು.
Bangalore [Bangalore],Bangalore,Karnataka













