Last Updated:
ಅಯೋಗ್ಯ-2 ಚಿತ್ರದ ‘ಅಣ್ಣ ಬಂದ್ರೆ’ ಹಾಡಿನ ಪ್ರೋಮೋ ಭರ್ಜರಿ ಆಗಿದೆ. ಸತೀಶ್ ನೀನಾಸಂ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಯೋಗ್ಯ-2 ಚಿತ್ರದ (Ayogya-2 Movie) ನಾಯಕ ನಟ ಸತೀಶ್ ನೀನಾಸಂ (Sathish Ninasam) ಒಂದು ಮಾತು ಹೇಳಿದ್ದರು. ಸಾವಿರಾರು ಜನ ಕೆಲಸ ಮಾಡಿರೋ ಒಂದು ಸಾಂಗ್ ಇದೆ. ಇದು ಅಷ್ಟೆ ಭರ್ಜರಿ ಆಗಿಯೇ ಬಂದಿದೆ. ಇದನ್ನ ಜುಲೈ-8 ರಂದು ರಿಲೀಸ್ ಮಾಡ್ತೀವಿ ಅಂತ ನ್ಯೂಸ್ -18 ಕನ್ನಡ ಡಿಜಿಟಲ್ಗೆ ಸತೀಶ್ ನೀನಾಸಂ (Sathish Ninasam) ಹೇಳಿಕೊಂಡಿದ್ದರು. ಇದೀಗ ಈ ಒಂದು ಹಾಡು ರಿಲೀಸ್ (Song Release) ಆಗುತ್ತಿದೆ. ಸಂಜೆ 6 ಗಂಟೆಗೆ ಇದು ಹೊರಗೆ ಬರ್ತಿದೆ. ಈ ಹಾಡು ಹೇಗೆ ಇರುತ್ತದೆ ಅನ್ನುವ ಪ್ರಶ್ನೆಗೆ ಒಂದು ಸಣ್ಣ ಝಲಕ್ ಕೂಡ ಈಗ ಸಿಕ್ಕಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸತೀಶ್ ನೀನಾಸಂ ಹೇಳೋದೇನು
ಇದು ಚಿತ್ರದ ಟೈಟಲ್ ಸಾಂಗ್ ಆಗಿದೆ. ಇದರ ಸಂಗೀತ ಚೆನ್ನಾಗಿದೆ. ಅಷ್ಟೆ ಅಟ್ರ್ಯಾಕ್ಟ್ ಮಾಡುತ್ತದೆ. ಫುಟ್ ಟ್ಯಾಪಿಂಗ್ ಅಂತೀವಲ್ಲ. ಆ ರೀತಿನೇ ಈ ಗೀತೆ ಇದೆ. ಇದನ್ನ ಕೇಳ್ತಾ ಹೋದ್ರೆ ಇಂಟ್ರಸ್ಟಿಂಗ್ ಅನಿಸುತ್ತದೆ. ಆದರೆ, ಸದ್ಯ ಅದರ ಒಂದೇ ಒಂದು ತುಣುಕು ಬಿಟ್ಟಿದ್ದಾರೆ. ಅದು ಅಷ್ಟೆ ಮಜಾ ಕೊಡುತ್ತದೆ.
ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಇದೆ ಚಿತ್ರದ ಮುದ್ದುಲಕ್ಷ್ಮಿ ಹಾಡಿಗೆ ಸಿದ್ ಶ್ರೀರಾಮ್ ಅವರಿಂದಲೇ ಹಾಡಿಸಿದ್ದಾರೆ. ಪೃಥ್ವಿ ಭಟ್ ಕೂಡ ಇದನ್ನ ಹಾಡಿದ್ದಾರೆ.
ಆದರೆ, ಈ ಅಣ್ಣ ಬಂದ್ರೆ ಹಾಡನ್ನ ಆಂಥೋನಿ ದಾಸನ್ ಹಾಡಿದ್ದಾರೆ. ಚೇತನ್ ಕುಮಾರ್ ಈ ಚಿತ್ರಕ್ಕೆ ಹಾಡು ಬರೆದಿದ್ದಾರೆ. ಡ್ಯಾನ್ಸ್ ಮಾಸ್ಟರ್ ಸಂತೋಷ್ ಕೋರಿಯೋಗ್ರಾಫ್ ಮಾಡಿದ್ದಾರೆ.
ಅಯೋಗ್ಯ-2 ಚಿತ್ರದ ಈ ಅಣ್ಣ ಬಂದ್ರೆ ಹಾಡನ್ನ ಜುಲೈ-8 ರಂದು ರಿಲೀಸ್ ಮಾಡಲಾಗುತ್ತಿದೆ. ಸಂಜೆ-6 ಗಂಟೆಗೆ ಈ ಗೀತೆಯನ್ನ ರಿಲೀಸ್ ಮಾಡಲಾಗುತ್ತಿದೆ.
ಅರ್ಜುನ್ ಜನ್ಯ ಮ್ಯೂಸಿಕ್
ಈ ವಿಚಾರ ಅಧಿಕೃತವಾಗಿಯೇ ರಿವೀಲ್ ಮಾಡಲಾಗಿದೆ. ಬಿಟ್ಟಿರೋ ಸಾಂಗ್ ಪ್ರೋಮೋದ ಕೊನೆಯಲ್ಲಿ ಈ ವಿಷಯ ಇದೆ. ಮುದ್ದುಲಕ್ಷ್ಮಿ ಹಾಡಿಗಿಂತಲೂ ಈ ಅಣ್ಣ ಬಂದ್ರೆ ಹಾಡು ವೈರಲ್ ಆಗುವ ರೀತಿನೇ ಇದೆ. ಮ್ಯೂಸಿಕ್ ಮತ್ತು ಇದರ ಮೇಕಿಂಗ್ ಹಾಗೂ ಲಿರಿಕ್ಸ್ ಆ ರೀತಿನೇ ಇದೆ ಅಂತಲೂ ಹೇಳಬಹುದು.
ಅಯೋಗ್ಯ-2 ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಆಗಸ್ಟ್-7 ರಂದು ಇದು ತೆರೆ ಕಾಣುತ್ತಿದೆ. ಅಯೋಗ್ಯ ಒನ್ ಚಿತ್ರದ ಡೈರೆಕ್ಟರ್ ಮಹೇಶ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಮದಗಜ ಆದ್ಮೇಲೆ ಈ ಸಿನಿಮಾ ಮಾಡಿದ್ದಾರೆ.
ಚಿತ್ರದ ನಾಯಕ ನಟ ಸತೀಶ್ ನೀನಾಸಂ ಈ ಚಿತ್ರದ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಅಯೋಗ್ಯ ಒನ್ ದಿಂದ ಅಯೋಗ್ಯ-2 ವರೆಗೂ ಸಾಕಷ್ಟು ಕಲಿತುಕೊಂಡಿದ್ದೇನೆ. ಇನ್ನು ಸಿನಿಮಾ ಬಗ್ಗೆ ತಿಳಿದುಕೊಳ್ತಾನೇ ಇದ್ದೇನೆ.
ಈ ಚಿತ್ರದಲ್ಲಿ ಕಳೆದ ಚಿತ್ರಕ್ಕಿಂತಲೂ ಡಬಲ್ ಮಜಾ ಇರುತ್ತದೆ. ಡಬಲ್ ಎಂಟರಟೈನಮೆಂಟ್ ಇರುತ್ತದೆ. ಈ ಸಿನಿಮಾದ ಮೊದಲ ಹಾಡು ಮುದ್ದು ಲಕ್ಷ್ಮಿ ರಿಲೀಸ್ ಆಗಿದೆ.
ಎರಡನೇ ಹಾಡು ಜುಲೈ-8 ರಂದು ರಿಲೀಸ್ ಆಗುತ್ತದೆ. ಇದು ತುಂಬಾನೆ ಚೆನ್ನಾಗಿ ಬಂದಿದೆ ಅಂತಲೇ ಹೇಳಿದ್ದಾರೆ. ಈಗ ಬಿಟ್ಟಿರೋ ಈ ಚಿತ್ರದ ಹಾಡಿನ ಪ್ರೋಮೋ ಇಂಟ್ರಸ್ಟಿಂಗ್ ಆಗಿಯೇ ಇದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













