Ayogya-2 Movie: ಜುಲೈ-8 ರಂದು ‘ಅಣ್ಣ ಬಂದ್ರೆ’ ಸಾಂಗ್ ರಿಲೀಸ್ | | ACTPnews

ಅಯೋಗ್ಯ-2 ಹೊಸ ನ್ಯೂಸ್; ಜುಲೈ-8 ರಂದು ಅಣ್ಣ ಬಂದ್ರೆ ಸಾಂಗ್ ರಿಲೀಸ್


Last Updated:

ಅಯೋಗ್ಯ-2 ಚಿತ್ರದ ‘ಅಣ್ಣ ಬಂದ್ರೆ’ ಹಾಡಿನ ಪ್ರೋಮೋ ಭರ್ಜರಿ ಆಗಿದೆ. ಸತೀಶ್ ನೀನಾಸಂ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಅಯೋಗ್ಯ-2 ಹೊಸ ನ್ಯೂಸ್; ಜುಲೈ-8 ರಂದು ಅಣ್ಣ ಬಂದ್ರೆ ಸಾಂಗ್ ರಿಲೀಸ್
ಅಯೋಗ್ಯ-2 ಹೊಸ ನ್ಯೂಸ್; ಜುಲೈ-8 ರಂದು ಅಣ್ಣ ಬಂದ್ರೆ ಸಾಂಗ್ ರಿಲೀಸ್

ಅಯೋಗ್ಯ-2 ಚಿತ್ರದ (Ayogya-2 Movie) ನಾಯಕ ನಟ ಸತೀಶ್ ನೀನಾಸಂ (Sathish Ninasam) ಒಂದು ಮಾತು ಹೇಳಿದ್ದರು. ಸಾವಿರಾರು ಜನ ಕೆಲಸ ಮಾಡಿರೋ ಒಂದು ಸಾಂಗ್ ಇದೆ. ಇದು ಅಷ್ಟೆ ಭರ್ಜರಿ ಆಗಿಯೇ ಬಂದಿದೆ. ಇದನ್ನ ಜುಲೈ-8 ರಂದು ರಿಲೀಸ್ ಮಾಡ್ತೀವಿ ಅಂತ ನ್ಯೂಸ್‌ -18 ಕನ್ನಡ ಡಿಜಿಟಲ್‌ಗೆ ಸತೀಶ್ ನೀನಾಸಂ (Sathish Ninasam) ಹೇಳಿಕೊಂಡಿದ್ದರು. ಇದೀಗ ಈ ಒಂದು ಹಾಡು ರಿಲೀಸ್ (Song Release) ಆಗುತ್ತಿದೆ. ಸಂಜೆ 6 ಗಂಟೆಗೆ ಇದು ಹೊರಗೆ ಬರ್ತಿದೆ. ಈ ಹಾಡು ಹೇಗೆ ಇರುತ್ತದೆ ಅನ್ನುವ ಪ್ರಶ್ನೆಗೆ ಒಂದು ಸಣ್ಣ ಝಲಕ್ ಕೂಡ ಈಗ ಸಿಕ್ಕಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಅಣ್ಣ ಬಂದ್ರೆ…

ಅಯೋಗ್ಯ-2 ಚಿತ್ರದ ಎರಡನೇ ಹಾಡು ರಿಲೀಸ್ ಆಗುತ್ತಿದೆ. ಮುದ್ದು ಲಕ್ಷ್ಮಿ ಹಾಡು ಬಂದ್ಮೇಲೆ ಎರಡನೇ ಹಾಡು ‘ಅಣ್ಣ ಬಂದ್ರೆ’ ಗೀತೆಯನ್ನ ಈಗ ರಿಲೀಸ್ ಮಾಡಲಾಗುತ್ತಿದೆ.
sathish ninasam ayogya-2 movie anna bandre second song release updates

ಸತೀಶ್ ನೀನಾಸಂ ಹೇಳೋದೇನು

ಇದು ಚಿತ್ರದ ಟೈಟಲ್ ಸಾಂಗ್ ಆಗಿದೆ. ಇದರ ಸಂಗೀತ ಚೆನ್ನಾಗಿದೆ. ಅಷ್ಟೆ ಅಟ್ರ್ಯಾಕ್ಟ್ ಮಾಡುತ್ತದೆ. ಫುಟ್ ಟ್ಯಾಪಿಂಗ್ ಅಂತೀವಲ್ಲ. ಆ ರೀತಿನೇ ಈ ಗೀತೆ ಇದೆ. ಇದನ್ನ ಕೇಳ್ತಾ ಹೋದ್ರೆ ಇಂಟ್ರಸ್ಟಿಂಗ್ ಅನಿಸುತ್ತದೆ. ಆದರೆ, ಸದ್ಯ ಅದರ ಒಂದೇ ಒಂದು ತುಣುಕು ಬಿಟ್ಟಿದ್ದಾರೆ. ಅದು ಅಷ್ಟೆ ಮಜಾ ಕೊಡುತ್ತದೆ.

ಅರ್ಜುನ್ ಜನ್ಯ ಮ್ಯೂಸಿಕ್

ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಇದೆ ಚಿತ್ರದ ಮುದ್ದುಲಕ್ಷ್ಮಿ ಹಾಡಿಗೆ ಸಿದ್ ಶ್ರೀರಾಮ್ ಅವರಿಂದಲೇ ಹಾಡಿಸಿದ್ದಾರೆ. ಪೃಥ್ವಿ ಭಟ್ ಕೂಡ ಇದನ್ನ ಹಾಡಿದ್ದಾರೆ.

ಆದರೆ, ಈ ಅಣ್ಣ ಬಂದ್ರೆ ಹಾಡನ್ನ ಆಂಥೋನಿ ದಾಸನ್ ಹಾಡಿದ್ದಾರೆ. ಚೇತನ್ ಕುಮಾರ್ ಈ ಚಿತ್ರಕ್ಕೆ ಹಾಡು ಬರೆದಿದ್ದಾರೆ. ಡ್ಯಾನ್ಸ್ ಮಾಸ್ಟರ್ ಸಂತೋಷ್ ಕೋರಿಯೋಗ್ರಾಫ್ ಮಾಡಿದ್ದಾರೆ.

ಜುಲೈ-8 ಸಾಂಗ್ ರಿಲೀಸ್

ಅಯೋಗ್ಯ-2 ಚಿತ್ರದ ಈ ಅಣ್ಣ ಬಂದ್ರೆ ಹಾಡನ್ನ ಜುಲೈ-8 ರಂದು ರಿಲೀಸ್ ಮಾಡಲಾಗುತ್ತಿದೆ. ಸಂಜೆ-6 ಗಂಟೆಗೆ ಈ ಗೀತೆಯನ್ನ ರಿಲೀಸ್ ಮಾಡಲಾಗುತ್ತಿದೆ.

sathish ninasam ayogya-2 movie anna bandre second song release updates

ಅರ್ಜುನ್ ಜನ್ಯ ಮ್ಯೂಸಿಕ್

ಈ ವಿಚಾರ ಅಧಿಕೃತವಾಗಿಯೇ ರಿವೀಲ್ ಮಾಡಲಾಗಿದೆ. ಬಿಟ್ಟಿರೋ ಸಾಂಗ್ ಪ್ರೋಮೋದ ಕೊನೆಯಲ್ಲಿ ಈ ವಿಷಯ ಇದೆ. ಮುದ್ದುಲಕ್ಷ್ಮಿ ಹಾಡಿಗಿಂತಲೂ ಈ ಅಣ್ಣ ಬಂದ್ರೆ ಹಾಡು ವೈರಲ್ ಆಗುವ ರೀತಿನೇ ಇದೆ. ಮ್ಯೂಸಿಕ್ ಮತ್ತು ಇದರ ಮೇಕಿಂಗ್ ಹಾಗೂ ಲಿರಿಕ್ಸ್ ಆ ರೀತಿನೇ ಇದೆ ಅಂತಲೂ ಹೇಳಬಹುದು.

ಆಗಸ್ಟ್-7 ರಂದು ಚಿತ್ರ ರಿಲೀಸ್

ಅಯೋಗ್ಯ-2 ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಆಗಸ್ಟ್-7 ರಂದು ಇದು ತೆರೆ ಕಾಣುತ್ತಿದೆ. ಅಯೋಗ್ಯ ಒನ್ ಚಿತ್ರದ ಡೈರೆಕ್ಟರ್ ಮಹೇಶ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಮದಗಜ ಆದ್ಮೇಲೆ ಈ ಸಿನಿಮಾ ಮಾಡಿದ್ದಾರೆ.

ಸತೀಶ್ ನೀನಾಸಂ ಹೇಳೋದೇನು

ಚಿತ್ರದ ನಾಯಕ ನಟ ಸತೀಶ್ ನೀನಾಸಂ ಈ ಚಿತ್ರದ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಅಯೋಗ್ಯ ಒನ್ ದಿಂದ ಅಯೋಗ್ಯ-2 ವರೆಗೂ ಸಾಕಷ್ಟು ಕಲಿತುಕೊಂಡಿದ್ದೇನೆ. ಇನ್ನು ಸಿನಿಮಾ ಬಗ್ಗೆ ತಿಳಿದುಕೊಳ್ತಾನೇ ಇದ್ದೇನೆ.

ಈ ಚಿತ್ರದಲ್ಲಿ ಕಳೆದ ಚಿತ್ರಕ್ಕಿಂತಲೂ ಡಬಲ್ ಮಜಾ ಇರುತ್ತದೆ. ಡಬಲ್ ಎಂಟರಟೈನಮೆಂಟ್ ಇರುತ್ತದೆ. ಈ ಸಿನಿಮಾದ ಮೊದಲ ಹಾಡು ಮುದ್ದು ಲಕ್ಷ್ಮಿ ರಿಲೀಸ್ ಆಗಿದೆ.

ಎರಡನೇ ಹಾಡು ಜುಲೈ-8 ರಂದು ರಿಲೀಸ್ ಆಗುತ್ತದೆ. ಇದು ತುಂಬಾನೆ ಚೆನ್ನಾಗಿ ಬಂದಿದೆ ಅಂತಲೇ ಹೇಳಿದ್ದಾರೆ. ಈಗ ಬಿಟ್ಟಿರೋ ಈ ಚಿತ್ರದ ಹಾಡಿನ ಪ್ರೋಮೋ ಇಂಟ್ರಸ್ಟಿಂಗ್ ಆಗಿಯೇ ಇದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed