Ayogya-2: ಅಯೋಗ್ಯ-2 ಸಿನಿಮಾ ರಿಲೀಸ್ ಡೇಟ್ ಚೇಂಜ್! ಯಾವಾಗ? ಕಾರಣವೇನು ಗೊತ್ತಾ? | | ACTPnews

ಸತೀಶ್ ನೀನಾಸಂ "ಅಯೋಗ್ಯ-2" ಚಿತ್ರದ ರಿಲೀಸ್ ಡೇಟ್ ಚೇಂಜ್; ಯಾಕ್ ಗೊತ್ತಾ?


Last Updated:

ಅಯೋಗ್ಯ-2 ಚಿತ್ರದ ರಿಲೀಸ್ ಡೇಟ್ ಚೇಂಜ್ ಆಗಿದೆ. ಹೊಸ ರಿಲೀಸ್ ಡೇಟ್ ವಿಷಯವನ್ನ ಸ್ವತಃ ಸತೀಶ್ ಹೇಳಿಕೊಂಡಿದ್ದಾರೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.

ಸತೀಶ್ ನೀನಾಸಂ "ಅಯೋಗ್ಯ-2" ಚಿತ್ರದ ರಿಲೀಸ್ ಡೇಟ್ ಚೇಂಜ್; ಯಾಕ್ ಗೊತ್ತಾ?
ಸತೀಶ್ ನೀನಾಸಂ “ಅಯೋಗ್ಯ-2” ಚಿತ್ರದ ರಿಲೀಸ್ ಡೇಟ್ ಚೇಂಜ್; ಯಾಕ್ ಗೊತ್ತಾ?

ಅಯೋಗ್ಯ-2 ಚಿತ್ರದ (Ayogya-2 Movie) ಪ್ರೆಸ್ ಮೀಟ್ ವಿವಾದ ಏನು ಅನ್ನೋದು ಗೊತ್ತೇ ಇದೆ. ಸತೀಶ್ (Sathish) ತಾವು ಮಾತನಾಡಿರೋದಕ್ಕೆ ಕ್ಷಮೆನೂ ಕೇಳಿದ್ದಾರೆ. ನೇರವಾಗಿ ನಿರ್ಮಾಪಕರಿಗೂ ಹೋಗಿಯೇ ಸಾರಿ ಕೇಳಿರೋದು ಇದೆ. ಇದೆಲ್ಲ ಆದ್ಮೇಲೆ ಇದೀಗ ಅಯೋಗ್ಯ-2 ಚಿತ್ರದ ರಿಲೀಸ್ ಡೇಟ್ ಚೇಂಜ್ (Release Date Change) ಆಗಿದೆ. ಚಿತ್ರದ ಸಾಂಗ್ ರಿಲೀಸ್ (Movie Song Release) ಆದ ದಿನ ಒಂದು ಡೇಟ್ ಇತ್ತು. ಆದರೆ, ವಿವಾದದ ಬಳಿಕ ಇನ್ನು ಒಂದು ಡೇಟ್ ಇದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಅಯೋಗ್ಯ-2 ರಿಲೀಸ್ ಡೇಟ್

ಅಯೋಗ್ಯ-2 ಚಿತ್ರದ ರಿಲೀಸ್ ಡೇಟ್ ಚೇಂಜ್ ಆಗಿದೆ. ಆಗಸ್ಟ್ ತಿಂಗಳ 14 ರಂದು ನಮ್ಮ ಚಿತ್ರ ರಿಲೀಸ್ ಆಗುತ್ತದೆ ಅಂತ ಚಿತ್ರ ತಂಡವೇ ಹೇಳಿತ್ತು. ಮುದ್ದುಲಕ್ಷ್ಮಿ ಹಾಡು ರಿಲೀಸ್ ಆದ ದಿನವೇ ಇದನ್ನ ಅಷ್ಟೆ ಖುಷಿಯಿಂದಲೇ ಹೇಳಿಕೊಂಡಿತ್ತು.
rachita ram sathish ayogya-2 movie release date latest updates

ಅಯೋಗ್ಯ-2 ರಿಲೀಸ್ ಡೇಟ್ ಚೇಂಜ್

ಇದೇ ಸಾಂಗ್ ರಿಲೀಸ್ ಇವೆಂಟ್ ಅಲ್ಲಿಯೇ ಸತೀಶ್ ನೀನಾಸಂ ಸ್ವಲ್ಪ ಖಾರವಾಗಿಯೇ ಮಾತನಾಡಿದ್ದರು. ನಮ್ಮ ಸಿನಿಮಾರಂಗ ಮುಳುಗುತ್ತಿಲ್ಲ. ಮುಂದೆ ಕರಾವಳಿ ಚಿತ್ರ ಬರ್ತಿದೆ. ಮದರ್ ಪ್ರಾಮಿಸ್ ಸಿನಿಮಾ ಇದೆ. ಅಷ್ಟೆ ಯಾಕೆ ಅಯೋಗ್ಯ -2 ಚಿತ್ರವೂ ಇದೆ ಅಂತ ಹೇಳಿದ್ದರು.

ನಿರ್ಮಾಪಕರು ತಿಳಿದುಕೊಳ್ಬೇಕು

ನಿರ್ಮಾಪಕರು ಸಿನಿಮಾ ಬಗ್ಗೆ ತಿಳಿದುಕೊಳ್ಳಬೇಕಿದೆ. ಸಿನಿಮಾ ಬಗ್ಗೆ ಜ್ಞಾನ ಹೊಂದುವುದು ಅವಶ್ಯ ಇದೆ. ಏನು ಗೊತ್ತಿಲ್ಲದೆ ದುಡ್ಡು ಹಾಕಿ ಸಿನಿಮಾ ಸೋತು ಹೋಯಿತು ಅಂದ್ರೆ ಏನ್ ಆಗುತ್ತದೆ.

ಚಿತ್ರ ಮಾಡುವವರು ಡಿಮೋಟಿವೇಟ್ ಆಗ್ತಾರೆ. ಚಿತ್ರದಿಂದ ಅಷ್ಟು ಹೋಯಿತು. ಇಷ್ಟು ಹೋಯಿತು ಅಂತ ಹೇಳೋದು ಅಲ್ವೇ ಅಲ್ಲ ಅಂತಲೇ ಸತೀಶ್ ಹೇಳಿದ್ದರು. ಆದರೆ ಇದರಿಂದ ಕೆಲವು ನಿರ್ಮಾಪಕರಿಗೆ ನೋವಾಗಿತ್ತು. ಇದನ್ನ ತಿಳಿದುಕೊಂಡ ಸತೀಶ್ ಕ್ಷಮೆ ಕೇಳಿದ್ದರು. ನಿರ್ಮಾಪಕರ ಪ್ರೆಸ್ ಮೀಟ್ ಮಾಡಿದ್ದರು. ಅಲ್ಲೂ ಹೋಗಿ ಕ್ಷಮೆ ಕೇಳಿದರು.

ಅಯೋಗ್ಯ-2 ರಿಲೀಸ್ ಡೇಟ್ ಚೇಂಜ್

ಅಯೋಗ್ಯ-2 ಚಿತ್ರದ ರಿಲೀಸ್ ಡೇಟ್ ಚೇಂಜ್ ಆಗಿದೆ. ಮೊದಲು ಆಗಸ್ಟ್-14 ರಂದು ಈ ಚಿತ್ರ ಬರೋದಿತ್ತು. ಆದರೆ, ಇದೀಗ ಈ ಚಿತ್ರ ಆಗಸ್ಟ್-7 ರಂದು ರಿಲೀಸ್ ಆಗುತ್ತಿದೆ.

rachita ram sathish ayogya-2 movie release date latest updates

ಅಯೋಗ್ಯ-2 ರಿಲೀಸ್

ಈ ಒಂದು ಹೊಸ ರಿಲೀಸ್ ಡೇಟ್ ವಿಚಾರವನ್ನ ಸ್ವತಃ ಸತೀಶ್ ನೀನಾಸಂ ಅವರು ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ. ಆದರೆ, ಈ ಬದಲಾವಣೆ ಯಾಕೆ ಆಯಿತು ಅದನ್ನು ಇನ್ನಷ್ಟೆ ಹೇಳಬೇಕಿದೆ.

ಅಯೋಗ್ಯ-2 ಚಿತ್ರದ ಮಾಹಿತಿ

ಅಯೋಗ್ಯ-2 ಚಿತ್ರವನ್ನ ಮಹೇಶ್ ಕುಮಾರ್ ಡೈರೆಕ್ಷನ್ ಮಾಡಿದ್ದಾರೆ. ಈ ಹಿಂದಿನ ಅಯೋಗ್ಯ ಚಿತ್ರವನ್ನು ಇವರೇ ಡೈರೆಕ್ಷನ್ ಮಾಡಿದ್ದರು. ಆದರೆ ಮದಗಜ ಆದ್ಮೇಲೆ ಈ ಅಯೋಗ್ಯ-2 ಚಿತ್ರ ಮಾಡಿದ್ದಾರೆ.

ಇವರ ಸಂಗೀತದ ಮುದ್ದುಲಕ್ಷ್ಮಿ ಹಾಡನ್ನ ಸಿದ್ ಶ್ರೀರಾಮ್ ಹಾಡಿದ್ದಾರೆ. ಪೃಥ್ವಿ ಭಟ್ ಇದಕ್ಕೆ ಜೀವ ತುಂಬಿದ್ದಾರೆ. ಆದರೆ, ಸತೀಶ್ ನೀನಾಸಂ ಅವರಿಗೆ ಇದು ಸೂಟ್ ಆಗ್ತಿಲ್ಲ ಅನ್ನುವ ಮಾತು ಕೇಳಿ ಬರ್ತಿವೆ. ಇನ್ನು ಕೆಲವರಿಗೆ ಇದು ಇಷ್ಟ ಕೂಡ ಆಗುತ್ತಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed