Last Updated:
ಏಷ್ಯನ್ ಗೇಮ್ಸ್ನ ಟಿ20 ಕ್ರಿಕೆಟ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈಗ ಬಿಡುಗಡೆಯಾಗಿದೆ. ಭಾರತದ ಮಹಿಳಾ ಮತ್ತು ಪುರುಷರ ತಂಡಗಳು ಮೈದಾನಕ್ಕೆ ಯಾವಾಗ ಇಳಿಯತ್ತವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಈ ಬಾರಿ 2026ರ ಏಷ್ಯನ್ ಗೇಮ್ಸ್ (Asian Games) ಜಪಾನ್(Japan)ನಲ್ಲಿ ನಡೆಯಲಿದೆ. ಭಾರತ(India)ವೂ ಅದರಲ್ಲಿ ಭಾಗವಹಿಸುತ್ತಿದೆ. ಈ ಬಾರಿ ಕ್ರಿಕೆಟ್ (Cricket) ಪಂದ್ಯಗಳು ಕೂಡ ಇರುತ್ತವೆ. ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಎಲ್ಲಾ ಪಂದ್ಯಗಳು ಕೊರೋಗಿ ಅಥ್ಲೆಟಿಕ್ ಪಾರ್ಕ್(Korogi Athletic Park)ನಲ್ಲಿ ನಡೆಯುತ್ತವೆ. ಭಾರತದ ಪುರುಷ ಮತ್ತು ಮಹಿಳಾ ತಂಡಗಳು (Teams) ಪದಕ ಗೆಲ್ಲುವ ನಿರೀಕ್ಷೆಯಲ್ಲಿವೆ. ಕಳೆದ ಏಷ್ಯನ್ ಗೇಮ್ಸ್ನಲ್ಲಿ ಭಾರತ ಎರಡೂ ವಿಭಾಗಗಳಲ್ಲಿ ಗೆದ್ದಿತ್ತು.














