Anvay Dravid: ಶ್ರೀಲಂಕಾ ನೆಲದಲ್ಲಿ ದ್ರಾವಿಡ್ ಪುತ್ರ ವಿಧ್ವಂಸಕ ಪ್ರದರ್ಶನ! ಭಾರತದ ಸವಾಲಿನ ಮೊತ್ತಕ್ಕೆ ನೆರವಾದ ಅನ್ವಯ್ | ಕ್ರೀಡಾ ಸುದ್ದಿ | ACTPnews

ಅರ್ಧಶತಕ ಸಿಡಿಸಿ ಮಿಂಚಿದ ದ್ರಾವಿಡ್ ಮಗ


Last Updated:

ಅನ್ವಯ್ ಪ್ರಸ್ತುತ ಭಾರತ U-19 ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸೋಮವಾರ, ಹಂಬಂಟೋಟಾದಲ್ಲಿ ಶ್ರೀಲಂಕಾ U-19 ತಂಡದ ವಿರುದ್ಧದ ಎರಡನೇ ಯೂತ್ ODI ಪಂದ್ಯದಲ್ಲಿ, ಅದ್ಭುತ ಇನ್ನಿಂಗ್ಸ್ ಆಡಿ ಭಾರತ ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು.

ಅರ್ಧಶತಕ ಸಿಡಿಸಿ ಮಿಂಚಿದ ದ್ರಾವಿಡ್ ಮಗ
ಅರ್ಧಶತಕ ಸಿಡಿಸಿ ಮಿಂಚಿದ ದ್ರಾವಿಡ್ ಮಗ

ರಾಹುಲ್ ದ್ರಾವಿಡ್ (Rahul Dravid) ಭಾರತೀಯ ಕ್ರಿಕೆಟ್ (India Cricket) ಇತಿಹಾಸದಲ್ಲಿ ಆಟಗಾರನಾಗಿ ಮತ್ತು ತರಬೇತುದಾರರಾಗಿ ಅನೇಕ ದಾಖಲೆ, ಪ್ರಶಸ್ತಿಗಳನ್ನ ತಂದುಕೊಟ್ಟಿದ್ದಾರೆ. ಮೈದಾನದಲ್ಲಿನ ಪರಿಸ್ಥಿತಿಗಳು ಎಷ್ಟೇ ಕಷ್ಟಕರವಾಗಿದ್ದರೂ, ಒತ್ತಡದಿಂದ ವಿಚಲಿತರಾಗದೆ ಮತ್ತು ವಿಕೆಟ್ ಕಳೆದುಕೊಳ್ಳದೆ ಗೋಡೆಯಂತೆ ಕ್ರೀಸ್​​ನಲ್ಲಿ ನಿಂತು ಎದುರಾಳಿ ಬೌಲರ್​ಗಳ ಬೆವರಿಳಿಸುತ್ತಿದ್ದರು. ದ್ರಾವಿಡ್ ತನ್ನ ವಿಶಿಷ್ಟ ಆಟದ ಮೂಲಕ ಭಾರತೀಯ ತಂಡಕ್ಕೆ ಹಲವಾರು ವಿಜಯಗಳನ್ನು ತಂದುಕೊಟ್ಟಿದ್ದರು. ಇದೀಗ ರಾಹುಲ್ ದ್ರಾವಿಡ್ ಕಿರಿಯ ಮಗ ಅನ್ವಯ್ ದ್ರಾವಿಡ್ (Anvay Dravid) ಸುಮಾರು ಎರಡು ದಶಕಗಳ ಕಾಲ ಟೀಮ್ ಇಂಡಿಯಾಕ್ಕೆ ಶಕ್ತಿಯ ಆಧಾರಸ್ತಂಭವಾಗಿ ನಿಂತ “ದಿ ವಾಲ್” ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.

67 ಎಸೆತಗಳಲ್ಲಿ 87 ರನ್​​​ಗಳ  ಅರ್ಧಶತಕ

ಅನ್ವಯ್ ಪ್ರಸ್ತುತ ಭಾರತ U-19 ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸೋಮವಾರ, ಹಂಬಂಟೋಟಾದಲ್ಲಿ ಶ್ರೀಲಂಕಾ U-19 ತಂಡದ ವಿರುದ್ಧದ ಎರಡನೇ ಯೂತ್ ODI ಪಂದ್ಯದಲ್ಲಿ, ಅದ್ಭುತ ಇನ್ನಿಂಗ್ಸ್ ಆಡಿ ಭಾರತ ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಅಂಡರ್-19 ತಂಡದ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. ತಂಡದ ಸ್ಕೋರ್ ಕೇವಲ 11 ರನ್ ಆಗುವಷ್ಟರಲ್ಲಿ ಆರಂಭಿಕ ಆಟಗಾರರಾದ ನಾಯಕ ಯಶ್ವರ್ಧನ್ ಸಿಂಗ್ (6) ಮತ್ತು ಸಾಗರ್ ವಿರ್ಕ್ (4) ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಆ ಬಳಿಕ ಕುಶಾಗ್ರ ಓಜಾ (38) ಮತ್ತು ವಿಕೆ ವಿನೀತ್ (24) ಜೋಡಿ ಸ್ವಲ್ಪ ಚೇತರಿಕೆ ನೀಡಿದರೂ, ಭಾರತ ತಂಡ 81 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಬ್ಯಾಟಿಂಗ್​ ಮಾಡಿದ ಅವರು ಭಾರತ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗದಂತೆ ರಕ್ಷಿಸಿದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಅನ್ವಯ್ 67 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸೇರಿದಂತೆ 87 ರನ್ ಗಳಿಸಿದರು. ಇದು ಅವರ ಆಕ್ರಮಣಕಾರಿ ಮನಸ್ಥಿತಿಯನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿತು.

145 ರನ್​ಗಳ ಜೊತೆಯಾಟ

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅನ್ವಯ್ 6ನೇ ವಿಕೆಟ್ ಜೊತೆಯಾಟದಲ್ಲಿ ಅರ್ಜುನ್ ರಜಪೂತ್ ಅವರೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಈ ಜೋಡಿ ಐದನೇ ವಿಕೆಟ್‌ಗೆ 145 ರನ್‌ಗಳ ಬೃಹತ್ ಪಾಲುದಾರಿಕೆಯನ್ನು ಒಟ್ಟುಗೂಡಿಸಿತು. ಅನ್ವಯ್ ಜೊತೆಗೆ ಮಿಂಚಿದ ಅರ್ಜುನ್ 81 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 76 ರನ್​ಗಳಿಸಿದರು. ಇವರಿಬ್ಬರ ಪತನದ ನಂತರ ಭಾರತ ತಂಡ ದಿಢೀರ್ ಕುಸಿತ ಕಂಡು 47.2 ಓವರ್‌ಗಳಲ್ಲಿ 285 ರನ್‌ಗಳಿಗೆ ಆಲೌಟ್ ಆಯಿತು.

ಶ್ರೀಲಂಕಾದ ಬೌಲರ್‌ಗಳಲ್ಲಿ, ಗಿಮ್ಹನ್ ಮೆಂಡಿಸ್ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಮಿಂಚಿದರು. ಇವರಿಗೆ ಸಾಥ್ ನೀಡಿದ ಕವಿಜ ಗಮಗೆ 54ಕ್ಕೆ2, ಸೆತ್ಮಿಕಾ ಸೆನವಿರತ್ನೆ 44ಕ್ಕೆ1 ವಿಕೆಟ್ ಪಡೆದರು.

ಮೊದಲ ಪಂದ್ಯದಲ್ಲಿ ಅನ್ವಯ್ ವಿಫಲ

ಭಾರತ ಅಂಡರ್-19 ತಂಡವು ಸರಣಿಯಲ್ಲಿ 1-0 ಮುನ್ನಡೆಯನ್ನು ಕಾಯ್ದುಕೊಂಡಿದೆ. ಹಿಂದಿನ ಪಂದ್ಯದಲ್ಲಿ, ಭಾರತ 321 ರನ್‌ಗಳನ್ನು ಬೆನ್ನಟ್ಟಿ ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು. ಅನ್ವಯ್ ದ್ರಾವಿಡ್ ಆ ಪಂದ್ಯದಲ್ಲಿ ಕೇವಲ 14 ರನ್​ಗಳಿಸಿ ವಿಫಲರಾಗಿದ್ದರು. ಇದೀಗ 2ನೇ ಪಂದ್ಯದಲ್ಲಿ ಸ್ಫೋಟಕ ಆಟವಾಡಿ ತಂಡಕ್ಕೆ ನೆರವಾಗಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed