Last Updated:
ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಜತ್ಕರ್ ಕಳೆದ ಸುಮಾರು ಐದು ವರ್ಷದಿಂದ ಒಂದು ಅಭಿಯಾನ ಮಾಡ್ತಿದ್ದಾರೆ. ಗುಂಡಿ ಮುಕ್ತ ಬೆಂಗಳೂರು ಅಂತ ರಸ್ತೆ ಗುಂಡಿಯನ್ನ ತೋರಿಸ್ತಾನೇ ಇದ್ದಾರೆ. ಇದೀಗ ಮತ್ತೊಂದು ರಸ್ತೆ ಗುಂಡಿಯ ಕತೆ ಹೇಳಿದ್ದಾರೆ. ಇದರ ವಿವರ ಮುಂದೆ ಇದೆ ಓದಿ.
ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅಳಿಯ ಅನಿರುದ್ಧ್ ಜತ್ಕರ್ (Aniruddha Jatkar) ಮನವಿ ಮಾಡ್ತಾನೇ ಇದ್ದಾರೆ. ಬೆಂಗಳೂರಿನ ರಸ್ತೆಗಳನ್ನ ಸರಿ ಮಾಡಿಸಿ ಅಂತ ಸರ್ಕಾರದ ಗಮನಕ್ಕೂ ತರ್ತಾನೇ ಇದ್ದಾರೆ. ಈ ರೀತಿಯ ಒಂದಿಲ್ಲ ಒಂದು ಸಮಸ್ಯೆಯನ್ನ ಎತ್ತಿ ತೋರಿಸುವ ನಟ ಅನಿರುದ್ಧ್ ಜತ್ಕರ್ (Aniruddha Jatkar) ಈಗ ಮತ್ತೊಂದು ರಸ್ತೆಯ ಗುಂಡಿ (Road Potholes) ಮುಚ್ಚಿ ಅಂತ ಮನವಿ ಮಾಡಿದ್ದಾರೆ. ರಸ್ತೆಯಲ್ಲಿ ಬಿದ್ದ ಗುಂಡಿಯಲ್ಲಿ ವಾಹನ ಸಾಗುತ್ತಿರೋ ವಿಡಿಯೋ ಮಾಡಿದ್ದಾರೆ. ಈ ಸ್ಥಿತಿ ಯಾವ ರಸ್ತೆಯಲ್ಲಿದೆ ಅನ್ನೊದನ್ನು ಹೇಳಿದ್ದಾರೆ. ಈ ಕುರಿತು ಇನ್ನಷ್ಟು ವಿವರ ಇಲ್ಲಿದೆ ಓದಿ.














