Ananth Nag: ಅನಂತ್ ನಾಗ್​ಗೆ ದಾದಾಸಾಹೇಬ್ ಫಾಲ್ಕೆ ಕಿರೀಟ! ಸಂತಸದ ಸಮಯದಲ್ಲೂ ಸ್ಯಾಂಡಲ್​​ವುಡ್ ಬಗ್ಗೆ ಬೇಸರ ಹೊರಹಾಕಿದ್ಯಾಕೆ? | | ACTPnews

ಎವರ್‌ಗ್ರೀನ್‌ ನಟನಿಗೆ ಫಾಲ್ಕೆ ಪ್ರಶಸ್ತಿ!


Last Updated:

ಅನಂತ್‌ ನಾಗ್​ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಭಾಜನರಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಹಿರಿಯ ನಟ ಸಂತಸ ಹಂಚಿಕೊಂಡಿದ್ದಾರೆ. ಆದ್ರೆ, ಈ ವೇಳೆ ಕನ್ನಡದ ಚಿತ್ರರಂಗದ ಈಗಿನ ಬೆಳವಣಿಗೆ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಎವರ್‌ಗ್ರೀನ್‌ ನಟನಿಗೆ ಫಾಲ್ಕೆ ಪ್ರಶಸ್ತಿ!
ಎವರ್‌ಗ್ರೀನ್‌ ನಟನಿಗೆ ಫಾಲ್ಕೆ ಪ್ರಶಸ್ತಿ!

ಅನಂತ್‌ ನಾಗ್‌ (Ananth Nag) ನಟನಾ ಲೋಕದ ಧ್ರುವತಾರೆ. ಪಾತ್ರ ಯಾವುದೇ ಇರಲಿ, ಆ ಪಾತ್ರಕ್ಕೆ ಜೀವ ತುಂಬುವ ಅದ್ಭುತ ಪ್ರತಿಭೆ.. ಸರಳತೆ, ಸೌಮ್ಯತೆ ಮತ್ತು ಸಹಜ ಅಭಿನಯದಿಂದ ಕೋಟ್ಯಂತರ ಕನ್ನಡಿಗರ ಮನ ಗೆದ್ದ ಮಹಾನ್‌ ನಟ. ಅಷ್ಟೇ ಯಾಕೆ ನಟನೆಯಲ್ಲಿ ನವರಸಗಳನ್ನ ಹರಿಸಬಲ್ಲ, ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾಗಿ ಬೇರೂರ ಬಲ್ಲ ನಟ ಅಂದ್ರೆ ಅದು ಅನಂತ್‌ ನಾಗ್‌. ಇವರು ಕೇವಲ ಬಣ್ಣ ಹಚ್ಚಿ ನಟರಾದವರಲ್ಲ. ಬದಲಿಗೆ ಪಾತ್ರವನ್ನೇ ಜೀವಂತವಾಗಿಸಿ ನಟರಾದವರು.

ಹೀಗಾಗಿಯೇ ಇವತ್ತಿಗೂ ಎವರ್‌ಗ್ರೀನ್‌ ನಟ ಅಂತಾ ಕರೆಸಿಕೊಳ್ತಿರೋದು. ಅನಂತ್‌ ನಾಗ್‌ಗೆ ವಯಸ್ಸಾಗಿರಬಹುದು, ಆದ್ರೆ, ಅವರ ನಟನೆಗೆ ವಯಸ್ಸಾಗಿಲ್ಲ. ಅವರಲ್ಲಿರೋ ಉತ್ಸಾಹಕ್ಕೆ ವಯಸ್ಸಾಗಿಲ್ಲ. ಪ್ರಶಸ್ತಿಗಳ ಸರಮಾಲೆಯನ್ನೇ ಹೊತ್ತ, ಮಹಾನಟನಿಗೆ ಈಗ ಮತ್ತೊಂದು ಕಿರೀಟ ಮುಡಿಗೇರಿದೆ. ಕೇಂದ್ರ ಸರ್ಕಾರ ಕೊಡಮಾಡುವ ಮಹೋನ್ನತ ಪ್ರಶಸ್ತಿ ಅನಂತ್‌ನಾಗ್‌ರನ್ನ ಅರಸಿ ಬಂದಿದೆ.

ನ್ಯೂಸ್ 18 ಕನ್ನಡದ ಜೊತೆ ಅನಂತ್ ನಾಗ್ ಮಾತು

ನಟ ಅನಂತ್ ನಾಗ್​ ಅವರಿಗೆ ದಾದಾ ಸಾಹೇಬ್ ಪ್ರಶಸ್ತಿ ಘೋಷಣೆ ಹಿನ್ನೆಲೆ ನ್ಯೂಸ್ 18 ಕನ್ನಡದ ಜೊತೆ ಅನಂತ್ ನಾಗ್ ಮಾತನಾಡಿದ್ದಾರೆ. ಇದು ಜೀವಮಾನದ ಸಾಧನೆ. ಸ್ವತಃ ಪ್ರಧಾನಿಯವರೇ ಟ್ವೀಟ್ ಮಾಡಿದ್ದಾರೆ. ಪದ್ಮಭೂಷಣ ಪ್ರಶಸ್ತಿ ಬಂದಾಗಲೂ ಭೇಟಿ ಆಗಿದ್ದೆ. ನಾನು ಕರ್ನಾಟಕದಲ್ಲಿ ಇರೋದ್ರಿಂದಲೇ ಈ ಸಾಧನೆ ಮಾಡೋಕೆ ಆಯ್ತು. ಪದ್ಮವಿಭೂಷಣ ಪ್ರಶಸ್ತಿಯನ್ನು ಕರ್ನಾಟಕದ ಜನರಿಗೆ ಅರ್ಪಿಸಿದ್ದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೂಡ ಕರ್ನಾಟಕದ ಜನರಿಗೆ ಅರ್ಪಿಸ್ತೇನೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಇದು ಜೀವಮಾನದ ಸಾಧನೆ. 1995ರಲ್ಲಿ ಡಾ. ರಾಜ್​​ಕುಮಾರ್ ಅವರಿಗೆ ಲಭಿಸಿತ್ತು. ಈಗ ನನಗೆ ಬಂದಿದೆ ಬಹಳ ಸಂತೋಷ ಇದೆ. ಡಾ. ರಾಜ್​ಕುಮಾರ್ ಅವರು ಎಂತೆಂಥಹ ಸಿನಿಮಾಗಳನ್ನ ಮಾಡಿದರು. ದೊಡ್ಡ ದೊಡ್ಡ ಪೌರಾಣಿಕ ಸಿನಿಮಾಗಳನ್ನ ಮಾಡಿದರು. ಅವರು ಹಾಕಿದ್ದ ರಸ್ತೆಯಲ್ಲಿ ನಾವೆಲ್ಲ ಬಂದ್ವಿ. ಕರಾವಳಿಯಲ್ಲಿ ಬೆಳೆದವ ನಾನು. ಮುಂಬೈಗೆ ಹೋದ್ರೂ ಕನ್ನಡ ನಾಟಕಗಳನ್ನ ಮಾಡಿದೆ. ಕಾದಂಬರಿ ಆಧಾರಿತ ಸಿನಿಮಾಗಳನ್ನ ಮಾಡಿದ್ದೆ ಎಂದು ಅನಂತ್​ ನಾಗ್​ ಅವರು ತಮ್ಮ ಸಿನಿಮಾ ಎಂಟ್ರಿ ಸಿನಿಮಾ ಎಂಟ್ರಿ ಮತ್ತು ತಮ್ಮ ಹಳೆಯ ಸಿನಿಮಾಗಳನ್ನ‌ ಮೆಲಕು ಹಾಕಿದರು.

ಕನ್ನಡ ಚಿತ್ರರಂಗದ ಈಗಿನ ಬೆಳವಣಿಗೆ ಬಗ್ಗೆ ಅನಂತ್ ನಾಗ್ ಬೇಸರ

ಡಾ. ರಾಜ್​ಕುಮಾರ್ ಅವರು ಎಂತೆಥಹ ಸಿನಿಮಾಗಳು ಮಾಡಿದರು. ಅಂತಹ ಸಿನಿಮಾಗಳು ಇವತ್ತು ಮಾಡೋಕೆ ಆಗುತ್ತಾ? ಎಂದು ಕನ್ನಡ ಚಿತ್ರರಂಗದ ಈಗಿನ ಬೆಳವಣಿಗೆ ಬಗ್ಗೆ ಅನಂತ್ ನಾಗ್ ಬೇಸರ ಹೊರಹಾಕಿದರು. ಈಗ ಫ್ಯಾಮಿಲಿ ಅನ್ನೋದೆ ಮರೆತಿದ್ದಾರೆ. ಅಸಲಿ ಮನರಂಜನೆ ಅನ್ನೋದನ್ನೇ ಮರೆತಿದ್ದಾರೆ. ಬರೀ ವೈಲೆನ್ಸ್ ವೈಲೆನ್ಸ್ ಅನ್ನೋ ರೀತಿಯ ಸಿನಿಮಾ. ಈಗಿನವರು ಮನರಂಜನೆ ಸಿನಿಮಾಗಳ ಬಗ್ಗೆ ಗಮನವಹಿಸಬೇಕು. ಸಾಹಿತ್ಯ ಇಲ್ಲ, ಬರಹಗಾರರೇ ಇಲ್ಲ, ನಿರ್ಮಾಪಕರ ನಿರ್ದೇಶಕರು ಗಮನಿಸಬೇಕು. ಪ್ಯಾನ್ ಇಂಡಿಯಾ ಹುಚ್ಚಿನ ಬಗ್ಗೆ ಹಿರಿಯ ನಟ ಅನಂತ್ ನಾಗ್ ಬೇಸರ ಹೊರಹಾಕಿದರು.

ಮನರಂಜನೆ ಅನ್ನೋದೆ ಇಲ್ಲ

ಈ ಹಿಂದೆ ಹೆಣ್ಣುಮಕ್ಕಳು ಸಾಹಿತ್ಯ ಬರೀತಿದ್ರು. ಆಗಿನ ರೀತಿ ಕಥೆಗಳು ಬರ್ತಿಲ್ಲ. ಮನರಂಜನೆ ಅನ್ನೋದೆ ಇಲ್ಲ ಹೀಗಾದ್ರೆ, ಎಲ್ಲಿಂದ ಜನ ಥಿಯೇಟರ್​ಗೆ ಬರ್ತಾರೆ. ಹಣ ಕೊಟ್ಟು ತಿಂಡಿ ತಿನ್ನಬಹುದು. ಬಿಸ್ಕೆಟ್, ಸ್ವೀಟ್ ತಿನ್ನಬಹುದು. ಆದರೆ, ದುಡ್ಡು ಕೊಟ್ಟು ಸಿನಿಮಾಗೆ ಬರೋ ಜನ ಮನರಂಜನೆ ಬಯಸ್ತಾರೆ. ಅಲ್ಲಿ ತಿಂಡಿ ಸಿಗುತ್ತಾ ಜನರಿಗೆ. ಅವರಿಗೆ ಮನರಂಜನೆ ಕೊಡಬೇಕು. ಆ ನಿಟ್ಟಿನಲ್ಲಿ ಈಗಿನವರು ಕೆಲಸ ಮಾಡಬೇಕು. ಎಂದು ಅನಂತ್​ ನಾಗ್​ ಅವರು ಕಿವಿಮಾತು ಹೇಳಿದರು.

ಈಗಿನವರಿಗೆ ಹೇಳಲಿಕ್ಕೆ ಆಗೋದಿಲ್ಲ, ಆದ್ರೂ ಹಿರಿಯರಾಗಿ ನಾವು ಕೆಲವನ್ನ ಹೇಳ್ತೀವಿ. ಜನರಿಗೆ ಮನರಂಜನೆ ಕೊಡುವ ಸಿನಿಮಾಗಳನ್ನ ಮಾಡಬೇಕು ಎಂದು ಹಿರಿಯ ನಟ ಅನಂತ್​ ನಾಗ್​ ಅವರು ಹೇಳಿದರು.

(ವರದಿ: ಮಾದೇಶ್​, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed