Last Updated:
ಅಮೂಲ್ಯ ಜಗದೀಶ್ ಈ ವರ್ಷ ಗೌರಿ ಗಣೇಶ್ ಹಬ್ಬದ ದಿನ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಜನ್ಮ ದಿನಕ್ಕೆ ಪೀಕಬೂ ಚಿತ್ರ ಅನೌನ್ಸ್ ಆಗಿತ್ತು. ಟೀಸರ್ ಕೂಡ ಹೊರ ಬಂದಿತ್ತು. ಈ ವರ್ಷ ಏನು ಅನ್ನುವ ಕುತೂಹಲವು ಇದೆ. ಇವರ ಸಿನಿಮಾಗಳ ಒಂದಷ್ಟು ಮಾಹಿತಿನೂ ಇಲ್ಲಿದೆ ಓದಿ.
ಅಮೂಲ್ಯ ಜಗದೀಶ್ (Amulya Jagadish) ಈ ವರ್ಷ ತಮ್ಮ ಜನ್ಮ ದಿನವನ್ನ ಗೌರಿ ಗಣೇಶ ಹಬ್ಬದ (Gowri Ganesha Festival) ದಿನ ಆಚರಿಸಿಕೊಳ್ಳುತ್ತಿದ್ದಾರೆ. ಮನೆಗೆ ಗೌರಿನೂ ಬರ್ತಾಳೆ, ಗಣೇಶನೂ ಬರ್ತಾನೆ. ಈ ಒಂದು ವಿಶೇಷ ದಿನವೇ ಈ ವರ್ಷದ ಹುಟ್ಟುಹಬ್ಬವನ್ನ ಅಮೂಲ್ಯ (Amulya) ಆಚರಣೆ ಮಾಡಿಕೊಳ್ಳುತ್ತಿದ್ದಾರೆ. 33 ನೇ ಜನ್ಮ ದಿನದಂದು ಇವರ ಸಿನಿಮಾಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.














