Last Updated:
ಗುರುಗ್ರಾಮದಲ್ಲಿ ಮಹಿಳಾ ಬೈಕ್ ರೈಡರ್ (Bike Rider) ಒಬ್ಬರಿಗೆ ವ್ಯಕ್ತಿಯೊಬ್ಬ ಕಾರಿನಿಂದ ಡಿಕ್ಕಿ ಹೊಡೆಸಿರುವ ಹಿಟ್ ಆಂಡ್ ರನ್ (Hit and Run) ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಭಯಾನಕ ಘಟನೆಯ ಲೈವ್ ವಿಡಿಯೋ ಮಹಿಳಾ ಬೈಕರ್ ಧರಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹರಿಯಾಣದ ಗುರುಗ್ರಾಮದಲ್ಲಿ ಮಹಿಳಾ ಬೈಕ್ ರೈಡರ್ (Bike Rider) ಒಬ್ಬರಿಗೆ ವ್ಯಕ್ತಿಯೊಬ್ಬ ಕಾರಿನಿಂದ ಡಿಕ್ಕಿ ಹೊಡೆಸಿರುವ ಹಿಟ್ ಅಂಡ್ ರನ್ (Hit and Run) ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಭಯಾನಕ ಘಟನೆಯ ಲೈವ್ ವಿಡಿಯೋ ಮಹಿಳಾ ಬೈಕರ್ ಧರಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯ ನಂತರ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದರೂ, ಆತನ ಕಾರಿನ ನಂಬರ್ ಪತ್ತೆಯಾಗಿದೆ. ಘಟನೆಯ ನಂತರ ಮಹಿಳಾ ಬೈಕರ್ ಸ್ನೇಹಿತ ಆರೋಪಿ ಚಾಲಕನನ್ನು ಬೆನ್ನಟ್ಟಿ ಆತನನ್ನು ತಡೆಯಲು ಪ್ರಯತ್ನಿಸಿದರಾದರೂ, ಆತ ಸಿಗದೆ ತಪ್ಪಿಸಿಕೊಂಡಿದ್ದಾನೆ. ತನಿಖೆಯ ವೇಳೆ ಆರೋಪಿಯನ್ನು ಕಬಡ್ಡಿ ಆಟಗಾರ ಕಲ್ಯಾಣ್ ಬೈಂಸ್ಲಾ ಎಂದು ಗುರುತಿಸಲಾಗಿದೆ. ಆದರೆ, ಅಪಘಾತಕ್ಕೆ ಬಳಸಲಾದ ಕಾರು ಆರೋಪಿಯದ್ದಲ್ಲ, ಅದು ಬೇರೊಬ್ಬರ ಹೆಸರಿನಲ್ಲಿದೆ ಎಂದು ತಿಳಿದುಬಂದಿದೆ.














