Last Updated:
ಪತ್ನಿ ಜಯಾ ಬಚ್ಚನ್ ಅವರೊಂದಿಗೆ ತಮ್ಮ ದಾಂಪತ್ಯ ಜೀವನದ ಬಗ್ಗೆ ಅಮಿತಾಭ್ ಬಿಚ್ಚಿಟ್ಟಿರುವ ಒಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ಪತಿ ಸೀಸನ್ 18 ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಕಾರ್ಯಕ್ರಮದಲ್ಲಿ ಕೋಟಿ ಗೆಲ್ಲುವ ಅವಕಾಶದ ಜೊತೆಗೆ ಅಮಿತಾಭ್ ತಮ್ಮ ವೈಯಕ್ತಿಕ ಜೀವನದ ಹಲವು ಆಸಕ್ತಿದಾಯಕ ಘಟನೆಗಳನ್ನು ಹಂಚಿಕೊಳ್ಳುತ್ತಿರುವುದು ವೀಕ್ಷಕರಿಗೆ ವಿಶೇಷ ಕುತೂಹಲ ಮೂಡಿಸಿದೆ. ಇದೀಗ ಪತ್ನಿ ಜಯಾ ಬಚ್ಚನ್ (Jaya Bachchan) ಅವರೊಂದಿಗೆ ತಮ್ಮ ದಾಂಪತ್ಯ ಜೀವನದ ಬಗ್ಗೆ ಅಮಿತಾಭ್ ಬಿಚ್ಚಿಟ್ಟಿರುವ ಒಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.














