Last Updated:
ಡಾಲಿ ಧನಂಜಯ್ ತಮ್ಮ ಜನ್ಮ ದಿನವನ್ನ ಅರ್ಥಪೂರ್ಣವಾಗಿಯೇ ಆಚರಣೆ ಮಾಡಿದ್ದಾರೆ. ರಕ್ತದಾನ ಮಾಡಿ ಈ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡಾಲಿ ಧನಂಜಯ ಹುಟ್ಟುಹಬ್ಬದ (Daali Dhananjaya Birthday) ಸಂಭ್ರಮದಲ್ಲಿದ್ದಾರೆ. ಇದನ್ನ ಅಷ್ಟೆ ಅರ್ಥ ಪೂರ್ಣವಾಗಿಯೇ ಆಚರಣೆ ಮಾಡಿದ್ದಾರೆ. ರಕ್ತದಾನದ (Blood Donation) ಮೂಲಕವೇ ಈ ದಿನವನ್ನ ಆಚರಣೆ ಮಾಡಿದ್ದಾರೆ. ಮೊದಲೇ ಅಭಿಮಾನಿಗಳಿಗೆ ಹೇಳಿದ್ದರು. ನೀವು ಏನೂ ತರಬೇಡಿ. ಆ ದಿನ ಬನ್ನಿ ಸಿಗೋಣ ಅಂತಲೇ ವಿಡಿಯೋ ಮೂಲಕ ಡಾಲಿ ಧನಂಜಯ್ (Daali Dhananjaya) ಹೇಳಿದ್ದರು. ಆ ಪ್ರಕಾರ ಜಯನಗರದ ಎಂಇಎಸ್ ಗ್ರೌಂಡ್ಗೆ (MES Ground) ಫ್ಯಾನ್ಸ್ ಬಂದಿದ್ದಾರೆ. ಇವರ ಈ ಸಂಭ್ರಮದ ಇನ್ನಷ್ಟು ವಿಷಯ ಇಲ್ಲಿದೆ ಓದಿ.














