Last Updated:
ಭಾರತೀಯ ಮೂಲದ ಮಾಜಿ ಪ್ರಾಂಶುಪಾಲರಾದ ಪಿಯಾ ದಾಂಡಿಯಾ ಅಮೆರಿಕನ್ ರಾಜಕೀಯಕ್ಕೆ ಭವ್ಯ ಪ್ರವೇಶ ಮಾಡಿದ್ದಾರೆ. ಫ್ಲೋರಿಡಾದ 22ನೇ ಕಾಂಗ್ರೆಷನಲ್ ಜಿಲ್ಲೆಯಲ್ಲಿ ನಡೆದ ಡೆಮಾಕ್ರಟಿಕ್ ಪ್ರಾಥಮಿಕ ಚುನಾವಣೆಯಲ್ಲಿ 68.6% ಮತಗಳನ್ನು ಗಳಿಸುವ ಮೂಲಕ ಗೆದ್ದಿದ್ದಾರೆ. ಇದೀಗ ಅವರು ನವೆಂಬರ್ನಲ್ಲಿ ರಿಪಬ್ಲಿಕನ್ ಪಕ್ಷದ ಕೇಸಿ ಆಸ್ಕರ್ ಅವರನ್ನು ಎದುರಿಸಲಿದ್ದಾರೆ.
ಭಾರತೀಯ-ಅಮೆರಿಕನ್ ಶಾಲೆಯ ಮಾಜಿ ಪ್ರಾಂಶುಪಾಲರಾದ ಪಿಯಾ ದಾಂಡಿಯಾ (Piya Dandia) ಅವರು ಅಮೆರಿಕನ್ ರಾಜಕೀಯಕ್ಕೆ (America Politics) ಭವ್ಯ ಪ್ರವೇಶ ಮಾಡಿದ್ದಾರೆ. ಫ್ಲೋರಿಡಾದ 22ನೇ ಕಾಂಗ್ರೆಷನಲ್ ಜಿಲ್ಲೆಗೆ ನಡೆದ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ನವೆಂಬರ್ನಲ್ಲಿ ನಡೆಯುವ ಮುಖ್ಯ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಅಭ್ಯರ್ಥಿ ಮತ್ತು ಮಾಜಿ ಮೆರೈನ್ ಕೇಸಿ ಅಸ್ಕರ್ ಅವರನ್ನು ಎದುರಿಸಲಿದ್ದಾರೆ. ಈಗ ಎಲ್ಲರ ಗಮನ ಈ ಚುನಾವಣೆಯ ಮೇಲಿದೆ.














