Last Updated:
ಅಮೆರಿಕಾ ಅಮೆರಿಕಾ ಚಿತ್ರ ಬಂದು 29 ವರ್ಷ ಆಗಿದೆ ಇಂದಿಗೂ ಈ ಚಿತ್ರವನ್ನ ಜನ ನೆನಪಿಸಿಕೊಳ್ಳುತ್ತಾರೆ ಆದರೆ ಇದೀಗ ನಾಗತಿಹಳ್ಳಿ ಮೇಷ್ಟು ಮತ್ತೊಂದು ಚಿತ್ರ ಮಾಡಿದ್ದಾರೆ ಈ ಚಿತ್ರಕ್ಕೆ ಅಮೆರಿಕಾ ಅಮೆರಿಕಾ 2 ಅಂತ ಹೆಸರಿಟ್ಟಿದ್ದಾರೆ ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ
ಕನ್ನಡದ ಕಲ್ಟ್ ಕ್ಲಾಸಿಕ್ ಅಮೆರಿಕಾ ಅಮೆರಿಕಾ ಚಿತ್ರ (America America Movie) ಬಂದು 29 ವರ್ಷ ಆಗಿದೆ. ಆದರೆ, ಇದೇ ಚಿತ್ರದ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekhar) ಅವರು ಮತ್ತೊಂದು ಚಿತ್ರ ಮಾಡಿದ್ದಾರೆ. ಇದನ್ನ ಅಮೆರಿಕಾದಲ್ಲಿಯೇ ಶೂಟಿಂಗ್ ಮಾಡಿದ್ದಾರೆ. ಕಳೆದ ವರ್ಷವೇ ಈ ಸಿನಿಮಾದ ಚಿತ್ರೀಕರಣದ ಬಹುತೇಕ ಕೆಲಸ ಕಂಪ್ಲೀಟ್ ಆಗಿದೆ. ಆದರೆ, ಈ ಚಿತ್ರಕ್ಕೆ ಟೈಟಲ್ ಏನು ಅನ್ನುವ ಕುತೂಹಲವು ಇತ್ತು. ಅಮೆರಿಕಾ ಅಮೆರಿಕಾ-2 (America America-2) ಅಂತ ಇಡಬೇಕು ಅನ್ನೋರೇ ಹೆಚ್ಚಿದ್ದರು. ಸೋಷಿಯಲ್ ಮೀಡಿಯಾದಲ್ಲೂ ಇದೇ ಚರ್ಚೆ ಇರ್ತಾ ಇತ್ತು. ಕೊನೆಗೆ ಈ ಚಿತ್ರದ ಟೈಟಲ್ ಏನು ಅನ್ನೋದು ಗೊತ್ತಾಗಿದೆ. ಅಧಿಕೃತವಾಗಿಯೇ ಈ ಟೈಟಲ್ ರಿವೀಲ್ (Title Reveal) ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ನಾಗತಿಹಳ್ಳಿ ಚಂದ್ರಶೇಖರ್ ಅವರು 29 ವರ್ಷದ ಹಿಂದೆ ಅಮೆರಿಕಾ ಅಮೆರಿಕಾ ಸಿನಿಮಾ ಮಾಡಿದ್ದರು. ಇದರಲ್ಲಿ ಅಕ್ಷಯ್ ಆನಂದ್, ರಮೇಶ್ ಅರವಿಂದ್ ಹಾಗೂ ಹೇಮಾ ಪಂಚಮುಖಿ ಇದ್ದರು.
ಅಮೆರಿಕಾ ಮತ್ತು ಇಂಡಿಯಾದಲ್ಲಿ ನಡೆಯುವ ಈ ಕತೆಯ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನ ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ, ಅಮೆರಿಕಾ ಅಮೆರಿಕಾ-2 ಚಿತ್ರ ಬಂದ್ರೆ ಚೆನ್ನಾಗಿರುತ್ತದೆ ಅಂದವರೇ ಹೆಚ್ಚು ನೋಡಿ.
ಈ ಒಂದು ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಮುಗಿದಿದೆ. ಆದರೆ, ಈ ಸಿನಿಮಾದ ಟೈಟಲ್ ಮಾತ್ರ ಫೈನಲ್ ಆಗಿರಲಿಲ್ಲ. ಈ ಚಿತ್ರವೂ ಅಮೆರಿಕಾದಲ್ಲಿಯೇ ಶೂಟಿಂಗ್ ಆಗಿದೆ.
ಹಾಗಾಗಿಯೇ ಈ ಚಿತ್ರ ಅಮೆರಿಕಾ ಅಮೆರಿಕಾ-2 ನೇ ಆಗಿರಬೇಕು ಅಂತಲೇ ಅನೇಕರು ಗೆಸ್ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲೂ ಇದೇ ಚರ್ಚೆ ಇತ್ತು. ಕೊನೆಗೆ ಈಗ ಟೈಟಲ್ ಫೈನಲ್ ಆಗಿದೆ.
ಅಮೆರಿಕಾದಲ್ಲಿ ಚಿತ್ರೀಕರಿಸಿದ ಮೇಷ್ಟ್ರ ಈ ಚಿತ್ರಕ್ಕೆ ಅಮೆರಿಕಾ ಅಮೆರಿಕಾ-2 ಅಂತಲೇ ಶೀರ್ಷಿಕೆ ಇಟ್ಟಿದ್ದಾರೆ. ಇದನ್ನ ಸ್ವತಃ ನಾಗತಿಹಳ್ಳಿ ಮೇಷ್ಟ್ರು ರಿವೀಲ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ಚಿತ್ರದ ಟೈಟಲ್ ಇರೋ ಪೋಸ್ಟರ್ ಹಂಚಿಕೊಂಡಿದ್ದಾರೆ. “ಹಳೆ ಕಥೆಗಳಿಂದಲೇ ಹೊಸ ಕಥೆಗಳು ಹುಟ್ಟುತ್ತವೆ” ಅಂತಲೇ ಬರೆದುಕೊಂಡಿದ್ದಾರೆ.
ಅಮೆರಿಕಾ ಅಮೆರಿಕಾ-2 ಚಿತ್ರದಲ್ಲಿ ನಿರೂಪ್ ಭಂಡಾರಿ ನಟಿಸಿದ್ದಾರೆ. ಪೃಥ್ವಿ ಅಂಬಾರ್ ಕೂಡ ಇದ್ದಾರೆ. ನಾಯಕಿ ಅಂತ ಬಂದ್ರೆ, ಶಾನ್ವಿ ಶ್ರೀವಾತ್ಸವ್ ಅಭಿನಯಸಿದಿದ್ದಾರೆ.
ಈ ಮೂವರು ಕಲಾವಿದರ ಚಿತ್ರವನ್ನ ಮೇಷ್ಟೇ ಡೈರೆಕ್ಷನ್ ಮಾಡಿದ್ದಾರೆ. ಮನೋ ಮೂರ್ತಿಗಳ ಸಂಗೀತ ಈ ಚಿತ್ರಕ್ಕೂ ಇದೆ. ಈ ಚಿತ್ರದ ಪೋಸ್ಟರ್ ಅನ್ನ ನಾಗತಿಹಳ್ಳಿ ಮೇಷ್ಟ್ರು ಈಗಾಗಲೇ ಹೇಳಿಂದತೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿದವರು ಒಳ್ಳೆ ಕಲಾವಿದರನ್ನೆ ಆಯ್ಕೆ ಮಾಡಿದ್ದೀರಿ ಅಂತಲೂ ಹೇಳಿದ್ದಾರೆ.
ಅಮೆರಿಕಾ ಅಮೆರಿಕಾ-2 ಚಿತ್ರ ಯಾವಾಗ ರಿಲೀಸ್ ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ. ಸದ್ಯ ಈ ಸಿನಿಮಾದ ಟೈಟಲ್ ಫೈನಲ್ ಆಗಿದೆ. ಅದನ್ನ ರಿಲೀಸ್ ಕೂಡ ಮಾಡಲಾಗಿದೆ. ಈ ಮೂಲಕ ಜನರಲ್ಲಿ ಕುತೂಹಲವು ಹೆಚ್ಚಾಗುತ್ತಿದೆ ಅಂತ ಹೇಳಬಹುದು .
-ರೇವನ್ ಪಿ.ಜೇವೂರ್
Bangalore,Karnataka













