French Woman: ಐಫೆಲ್ ಟವರ್ ನೆರಳಲ್ಲಿ ತಣ್ಣಗಿದ್ದ ಫ್ರೆಂಚ್ ಯುವತಿಯ ಜೀವನ ನರಕ ಮಾಡಿದ ಪಾಕ್ ಯುವಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಫ್ರೆಂಚ್ ಮಹಿಳೆ


Last Updated:

French Woman: ಪಾಕಿಸ್ತಾನದ ಯುವಕನ ಪ್ರೀತಿಸಿದ್ದೇ ಆಕೆ ಮಾಡಿದ ತಪ್ಪಾ? ಪ್ಯಾರಿಸ್ ನೆರಳಲ್ಲಿ ತಣ್ಣಗಿದ್ದ ಫ್ರೆಂಚ್ ಸುಂದರಿಯ ಜೀವನ ನರಕ ಮಾಡಿದ ಪಾಕ್ ಯುವಕ!

ಫ್ರೆಂಚ್ ಮಹಿಳೆ
ಫ್ರೆಂಚ್ ಮಹಿಳೆ

ಪ್ಯಾರಿಸ್​ನಲ್ಲಿ (Paris) ಹಾಯಾಗಿದ್ದ ಆಕೆ ಯಾಕಾದರೂ ಆ ಪಾಕಿಸ್ತಾನದ (Pakistan) ಯುವಕನ ಪ್ರೀತಿಸಿದಳೋ, ಯಾಕಾಗಿ ಮದುವೆಯಾದಳೋ, ಯಾಕಾಗಿ ಆತನ ಜೊತೆ ಸಂಸಾರ ಶುರು ಮಾಡಿದಳೋ, ಯಾಕಾಗಿ ದೇಶವೇ ಬಿಟ್ಟು ಆತನಿಗಾಗಿ ಬಂದಳೋ.. ಪಾಕಿಸ್ತಾನಕ್ಕೆ ಕಾಲಿಟ್ಟಾಗಿನಿಂದ ಆಕೆಯ ಜೀವನ ನರಕವಾಗಿತ್ತು.

ವಾಯುವ್ಯ ಪಾಕಿಸ್ತಾನದಲ್ಲಿ 54 ವರ್ಷದ ಫ್ರೆಂಚ್ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ತಮ್ಮ ಐದು ಮಕ್ಕಳೊಂದಿಗೆ ಒಂದು ದಶಕದಿಂದಲೂ ಹೆಚ್ಚು ಕಾಲ ಪತಿಯ ಬಂಧನದಲ್ಲಿದ್ದು ದೌರ್ಜನ್ಯಕ್ಕೊಳಗಾಗಿದ್ದ ಅವರು ಈಗ ಕೊನೆಗೂ ಬಚಾವಾಗಿದ್ದಾರೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಾರಾ ಪಟ್ಟಣದ ಮನೆಯ ಮೇಲೆ ಜೂನ್ 18 ರಂದು ದಾಳಿ ನಡೆಸಿದ ಪೊಲೀಸರು ಎಲ್ಲರನ್ನೂ ರಕ್ಷಿಸಿದ್ದಾರೆ. ಈ ದಂಪತಿಯ ಪುತ್ರರೊಬ್ಬರು ಮನೆಯಿಂದ ಹೊರಬಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ತಾಯಿ ಮಕ್ಕಳನ್ನು ರಕ್ಷಿಸಲಾಗಿದೆ.

ಆ ವ್ಯಕ್ತಿಯ ಗುರುತು ಬಹಿರಂಗಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಿಲ್ವಿ ಯಾಸ್ಮಿನಾ ಮತ್ತು ಅವರ ಮಕ್ಕಳು ಒಂದು ಸಣ್ಣ, “ಶಿಥಿಲಗೊಂಡ ಕೋಣೆಯಲ್ಲಿ” ವಾಸಿಸುತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು. ಹಲವಾರು ಕುಟುಂಬ ಸದಸ್ಯರು ದೈಹಿಕವಾಗಿ ಗಾಯಗೊಂಡಿದ್ದರು ಎಂದು ಪೊಲೀಸರು ವರದಿ ಮಾಡಿದ್ದಾರೆ.

2014 ರಲ್ಲಿ ಆಸ್ಟ್ರೇಲಿಯಾದಿಂದ ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡಾಗಿನಿಂದ ಮಹಿಳೆ ತನ್ನ ಪಾಕಿಸ್ತಾನಿ ಪತಿಯ ಕಟ್ಟುನಿಟ್ಟಿನ ನಿಯಂತ್ರಣದಲ್ಲಿ ನರಕ ನೋಡಿದ್ದಾಗಿ ಯಾಸ್ಮಿನಾ ಪೊಲೀಸರಿಗೆ ಪದೇ ಪದೇ ಹೇಳಿದ್ದರು. ಅವರು 2003 ರಲ್ಲಿ ಆಸ್ಟ್ರೇಲಿಯಾದಲ್ಲಿ ವಿವಾಹವಾದರು. ಆರೋಪಿಯು ಅಲ್ಲಿ “ಅಕ್ರಮವಾಗಿ ವಾಸಿಸುತ್ತಿದ್ದ” ಎಂದು ಆರೋಪಿಸಲಾಗಿದೆ.

ಪಾಕಿಸ್ತಾನದ ಜಿಯೋಟಿವಿ ವರದಿ ಪ್ರಕಾರ, ದೌರ್ಜನ್ಯದಿಂದ ಮಹಿಳೆ ಹಾಗೂ ಮಕ್ಕಳ ಮುಖ ಮತ್ತು ದೈಹಿಕ ಗಾಯದ ಗುರುತುಗಳಿವೆ ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಅಧಿಕಾರಿಗಳನ್ನು ಕೋರಿದ್ದಾರೆ ಎನ್ನಲಾಗಿದೆ.

ಕುಟುಂಬದೊಂದಿಗೆ ಕೆಟ್ಟದಾಗಿ ನಡೆಸಿಕೊಳ್ಳುವ ಹಿಂಸಾತ್ಮಕ ವ್ಯಕ್ತಿಯಾಗಿದ್ದು, ಇತರರೊಂದಿಗೆ ಮಾತನಾಡದಂತೆ ಅವರನ್ನು ತಡೆಯಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. “ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು, ನನ್ನ ಪತಿ ಒಬ್ಬ ಪತಿಯಾಗಿ ಮತ್ತು ನನ್ನ ಮಕ್ಕಳ ತಂದೆಯಾಗಿ ನಮ್ಮನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಅವರು ಪ್ರತಿದಿನ ನಮ್ಮನ್ನು ಹೊಡೆಯುತ್ತಾರೆ ಮತ್ತು ನಮ್ಮ ಜೀವನದ ಮೇಲೆ ಒತ್ತಡ ಹೇರುತ್ತಾರೆ” ಎಂದು ಅವರು ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed