Akila Thandur: ಒಮ್ಮೆ ನೋಡಿದ್ರೆ ನೋಡ್ತಾ ಇರಬೇಕು ಅನಿಸುತ್ತದೆ;ಯಶ್ ನನಗಿಷ್ಟ ಎಂದ ಮಿಥಿಲೆಯ ಸೀತೆಯರು ನಟಿ ಅಕಿಲಾ ತಂದೂರ್! | | ACTPnews

Mithileya Seetheyaru Akhila Thandur Talk about Yash on Screen Presence


ನನಗೆ ಯಶ್ ಇಷ್ಟ ಆಗುತ್ತಾರೆ

ಅಕಿಲಾ ತಂದೂರ್ ಅವರು 80-90 ದಶಕದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದವರು. ವಿದೇಶದಲ್ಲಿಯೇ ಇದ್ದ ಅಕಿಲಾ ಅವರು ಕಳೆದ ಎರಡು ವರ್ಷದ ಹಿಂದೆ ಕರ್ನಾಟಕಕ್ಕೆ ಬಂದಿದ್ದಾರೆ.

ಯಶ್ ನನಗಿಷ್ಟ ಎಂದ ನಟಿ ಅಕಿಲಾ ತಂದೂರ್

(ಚಿತ್ರ ಕೃಪೆ: ಅಕಿಲಾ ತಂದೂರ್ ಇನ್‌ಸ್ಟಾಗ್ರಾಮ್)

ಮೈಸೂರಿನಲ್ಲಿ ವಾಸವಾಗಿದ್ದಾರೆ. ಈ ಎರಡು ವರ್ಷಗಳಲ್ಲಿ ಹೇ ಪ್ರಭು ಅನ್ನುವ ಚಿತ್ರದಲ್ಲಿ ನಾಯಕಿಯ ಅಮ್ಮನ ಪಾತ್ರ ಮಾಡಿದ್ದಾರೆ. ಅದು ಬಿಟ್ಟರೆ, ಮನೆ ಮಕ್ಕಳು ಅಂತಲೇ ಇರ್ತಾರೆ. Daily ಮಾಧ್ಯಮ ಯುಟ್ಯೂಬ್ ಚಾನೆಲ್‌ಗೂ ವಿಶೇಷ ಸಂದರ್ಶನ ಕೊಟ್ಟಿದ್ದಾರೆ. ಇದರಲ್ಲಿಯೇ ಸುಮಾರು ವಿಚಾರ ಹಂಚಿಕೊಂಡಿದ್ದಾರೆ.

ಯಶ್ ಪ್ರಸೆನ್ಸ್ ಸೂಪರ್

ಕನ್ನಡದಲ್ಲಿ ಯಶ್ ತೆರೆ ಮೇಲೆ ಬಂದ್ರೆ ಆಯಿತು. ಅವರನ್ನ ನೋಡ್ತಾನೇ ಇರಬೇಕು ಅನಿಸುತ್ತದೆ. ಆ ರೀತಿನೇ ಅವರ ಪ್ರಸೆನ್ಸ್ ತೆರೆ ಮೇಲೆ ಇರುತ್ತದೆ.

ಹಾಗೆ ಯಶ್ ಬಂದ್ರೆ ಆಕಡೆ ಹಾಗೂ ಈಕಡೆ ನೋಡ್ಬೇಕು ಅನಿಸೋದಿಲ್ಲ. ಆ ರೀತಿನೇ ಯಶ್ ತೆರೆ ಮೇಲೆ ಕಾಣಿಸುತ್ತಾರೆ. ಇವರು ಬಿಟ್ಟರೆ, ವಿನೋದ್ ಪ್ರಭಾಕರ್ ಹೆಚ್ಚು ಇಷ್ಟ ಆಗುತ್ತಾರೆ.

ವಿನೋದ್ ತುಂಬಾ ಸಾಫ್ಟ್

ಡೈರೆಕ್ಟರ್ ಚೈತನ್ಯ ನನಗೆ ಇಷ್ಟ ಆಗುತ್ತಾರೆ. ಇವರ ಬಲರಾಮನ ದಿನಗಳು ಚಿತ್ರದ ಶೂಟಿಂಗ್‌ಗೆ ಹೋಗಿದ್ದೇನೆ. ಒಂದು ದೃಶ್ಯದ ಚಿತ್ರೀಕರಣ ನೋಡಿದ್ದೇನೆ.

Mithileya Seetheyaru Akhila Thandur Talk about Yash on Screen Presence

ಅಕಿಲಾ ತಂದೂರ್ ಸಿನಿಮಾಗಳು

(ಚಿತ್ರ ಕೃಪೆ: ಅಕಿಲಾ ತಂದೂರ್ ಇನ್‌ಸ್ಟಾಗ್ರಾಮ್)

ಈ ಸಮಯದಲ್ಲಿ ವಿನೋದ್ ಪ್ರಭಾಕರ್ ಅವರನ್ನ ನೋಡಿದ್ದೇನೆ. ಇವರು ದೈತ್ಯವಾಗಿಯೇ ಇದ್ದಾರೆ. ಆದರೆ, ಇವರು ತುಂಬಾನೆ ಸಾಫ್ಟ್ ಆಗಿದ್ದಾರೆ. ಇವರೂ ನನಗೆ ತುಂಬಾನೆ ಇಷ್ಟ ಅನ್ನೋದನ್ನು ಅಕಿಲಾ ತಂದೂರ್ ಹೇಳಿಕೊಡಿದ್ದಾರೆ.

ಅಕಿಲಾ ತಂದೂರ್ ಸಿನಿಮಾಗಳು

ಅಕಿಲಾ ಅವರು ಸಿನಿಮಾಗಳು ಅಂತ ಬಂದ್ರೆ ಹೆಚ್ಚು ಕಡಿಮೆ 7 ಚಿತ್ರಗಳಲ್ಲಿ ನಟಿಸಿದ್ದಾರೆ. 80 ಮತ್ತು 90ರ ದಶಕದಲ್ಲಿ ರಣರಂಗ, ದೇವತಾ ಮನುಷ್ಯ, ಮಿಥಿಲೆಯ ಸೀತೆಯರು, ಉತ್ಕರ್ಷ ಚಿತ್ರದಲ್ಲೂ ಅಕಿಲಾ ತಂದೂರ್ ನಟಿಸಿದ್ದಾರೆ.

ಇವರು ಇಂಡಸ್ಟ್ರಿ ನೋಡೋದು ಹೇಗೆ

ಅಕಿಲಾ ತಂದೂರ್ ಅವರು ಇಂಡಸ್ಟ್ರೀಯನ್ನ ಗಮನಿಸುತ್ತಲೇ ಇರ್ತಾರೆ. ಇಂದಿನ ಯುವಕರು ಒಳ್ಳೆ ಕತೆಗಳನ್ನು ಮಾಡುತ್ತಿದ್ದಾರೆ. ಇಲ್ಲಿ ಕತೆಯ ಕೊರತೆ ಏನೂ ಇಲ್ಲ.

ಆದರೆ, ಜನರ ಅಭಿರುಚಿ ಬೇರೆ ಆಗಿದೆ. ಒಂದೇ ಸಮಯದಲ್ಲಿ ಒಂದು ಕಡೆ ಟಿವಿ ಹಚ್ಚಿರುತ್ತಾರೆ. ಕೈಯಲ್ಲಿರೋ ಮೋಬೈಲ್ ಫೋನ್ ಆನ್ ಆಗಿರುತ್ತದೆ. ಮತ್ತೊಂದು ಕಡೆಗೆ ಲ್ಯಾಪ್‌ಟಾಪ್ ಕೂಡ ಓಪನ್ ಆಗಿರುತ್ತದೆ.

ಇವೆರಡನ್ನೂ ನೋಡುವ ಜನರನ್ನ ಸೆಳೆಯಬೇಕು. ಟಿವಿಯಲ್ಲಿ ಬರುವ ವಿಷಯ ಅರ್ಥ ಆಗದೇ ಇದ್ದರೆ ಮುಗಿತು. ಚಾನೆಲ್ ಚೇಂಜ್ ಮಾಡಿ ಬಿಡ್ತಾರೆ ಅಕಿಲಾ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports