Last Updated:
Air India Flight Turbulence: ಈ ಭಯಾನಕ ಘಟನೆಯಿಂದಾಗಿ, 10 ಪ್ರಯಾಣಿಕರು ಮತ್ತು 4 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಒಟ್ಟು 14 ಜನರು ಗಾಯಗೊಂಡಿದ್ದಾರೆ. ಏರ್ ಇಂಡಿಯಾ ಅಧಿಕೃತವಾಗಿ ಘಟನೆಯನ್ನು ದೃಢಪಡಿಸಿದ್ದು, ಈ ವಿಮಾನದಲ್ಲಿ 134 ಪ್ರಯಾಣಿಕರಿದ್ದಾರೆ ಎಂದು ವರದಿಯಾಗಿದೆ.
ನವದೆಹಲಿ: ಥೈಲ್ಯಾಂಡ್ನ ಫುಕೆಟ್ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ (Air India Turbulence) ಭಯಾನಕ ಘಟನೆ ನಡೆದಿದೆ.
ವಿಮಾನ ಹಾರಾಟ ನಡೆಸುತ್ತಿದ್ದಾಗಲೇ ಅತ್ಯಂತ ಭಯಾನಕ ಮತ್ತು ಆಘಾತಕಾರಿ ಘಟನೆ ನಡೆದಿದ್ದು, ಗಾಳಿಯಲ್ಲಿ ತೀವ್ರ ಪ್ರಕ್ಷುಬ್ಧತೆಯಿಂದಾಗಿ, ಈ ಏರ್ ಇಂಡಿಯಾ ವಿಮಾನವು ಹಠಾತ್ತನೆ ಸುಮಾರು 300 ಅಡಿಗಳಷ್ಟು ಕೆಳಗೆ ಕುಸಿದಿದೆ ಎಂದು ವರದಿಯಾಗಿದೆ.
ಈ ಭಯಾನಕ ಘಟನೆಯಿಂದಾಗಿ, 10 ಪ್ರಯಾಣಿಕರು ಮತ್ತು 4 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಒಟ್ಟು 14 ಜನರು ಗಾಯಗೊಂಡಿದ್ದಾರೆ. ಏರ್ ಇಂಡಿಯಾ ಅಧಿಕೃತವಾಗಿ ಘಟನೆಯನ್ನು ದೃಢಪಡಿಸಿದ್ದು, ಈ ವಿಮಾನದಲ್ಲಿ 134 ಪ್ರಯಾಣಿಕರಿದ್ದಾರೆ ಎಂದು ವರದಿಯಾಗಿದೆ.
Air India confirms that flight AI2379, operating from Phuket to Delhi on 4 August, experienced a brief in-flight turbulence-related event during cruise, resulting in a momentary change in altitude. The aircraft landed safely in Delhi, and all passengers and crew have safely…
— ANI (@ANI) August 4, 2026
New Delhi,Delhi












