Last Updated:
ಬಿಗ್ ಬಾಸ್ ಆರಂಭಕ್ಕೂ ಮುನ್ನ ಕಲರ್ಸ್ ಕನ್ನಡದಿಂದ ಅಭಿಮಾನಿಗಳಿಗೆ ಬಂಪರ್ ಆಫರ್. ಲಾಲ್ಬಾಗ್ನಲ್ಲಿ ‘Bigg Boss Agnipariksha Experience Zone’ ಆರಂಭ. ವಿಜೇತರಿಗೆ ಕಿಚ್ಚ ಸುದೀಪ್ ಜೊತೆ ವೀಕೆಂಡ್ ಎಪಿಸೋಡ್ ಲೈವ್ ನೋಡುವ ಅವಕಾಶ.
ಬೆಂಗಳೂರು: ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss) ಆರಂಭಕ್ಕೂ ಮುನ್ನವೇ ಕಲರ್ಸ್ ಕನ್ನಡ (Colors Kannada) ವಾಹಿನಿ ಅಭಿಮಾನಿಗಳಿಗೆ (Fans) ಥ್ರಿಲ್ ನೀಡುವಂತಹ ಬಂಪರ್ ಆಫರ್ ಒಂದನ್ನು ಘೋಷಿಸಿದೆ. ಬಿಗ್ ಬಾಸ್ ಮನೆಗೆ ಅಧಿಕೃತವಾಗಿ ಬಾಗಿಲು ತೆರೆಯುವ ಮುನ್ನ, ಬೆಂಗಳೂರಿನ ಐತಿಹಾಸಿಕ ಲಾಲ್ಬಾಗ್ ಬೋಟಾನಿಕಲ್ ಗಾರ್ಡನ್ನಲ್ಲಿ ಅದ್ಧೂರಿಯಾಗಿ ‘Bigg Boss Agnipariksha Experience Zone’ ಆರಂಭವಾಗುತ್ತಿದೆ. ಬಿಗ್ ಬಾಸ್ ಲವರ್ಸ್ಗಾಗಿ ಹಮ್ಮಿಕೊಂಡಿರುವ ಈ ಸಾಹಸಮಯ ಅನುಭವದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ನೀವು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕೆಲವು ಸಿಂಪಲ್ ರೂಲ್ಸ್ ಫಾಲೋ ಮಾಡಬೇಕು.
ಲಾಲ್ಬಾಗ್ನ ಎಕ್ಸ್ಪೀರಿಯನ್ಸ್ ಜೋನ್ನಲ್ಲಿ ನಡೆಯುವ Agnipariksha Challengesನಲ್ಲಿ ಭಾಗವಹಿಸಿ.
ಅಲ್ಲಿ ಅತ್ಯಕರ್ಷಕ ಸೆಲ್ಫಿ ತೆಗೆದು, ನಿಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ #BBKAGNIPARIKSHE ಹ್ಯಾಶ್ಟ್ಯಾಗ್ ಬಳಸಿ ಪೋಸ್ಟ್ ಮಾಡಿ.
ಪೋಸ್ಟ್ ಮಾಡುವಾಗ ಅಧಿಕೃತ @ColorsKannada ಖಾತೆಯನ್ನು ಕಡ್ಡಾಯವಾಗಿ ಟ್ಯಾಗ್ ಮಾಡಿ.
ಅತ್ಯಂತ ಮುಖ್ಯವಾಗಿ ನಿಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು Public ಮೋಡ್ನಲ್ಲಿಡಿ!
ಸ್ಥಳ: ಲಾಲ್ಬಾಗ್ ಬೋಟಾನಿಕಲ್ ಗಾರ್ಡನ್, ಬೆಂಗಳೂರು.
ದಿನಾಂಕ: 6 ಆಗಸ್ಟ್ 2026.
ಸಮಯ: ಬೆಳಿಗ್ಗೆ 10:30 ರಿಂದ.
ಕರ್ನಾಟಕದ ಅತಿ ದೊಡ್ಡ ಮನರಂಜನಾ ಸಂಭ್ರಮಕ್ಕೆ ನಾಂದಿ ಹಾಡುತ್ತಿರುವ ಈ ರೋಚಕ ಕಾರ್ಯಕ್ರಮಕ್ಕೆ ತಡಮಾಡದೆ ಭೇಟಿ ನೀಡಿ, ನಿಮ್ಮ ಬಿಗ್ ಬಾಸ್ ಕ್ರೇಜ್ ಅನ್ನು ಜಗತ್ತಿಗೆ ತೋರಿಸಿ.
Bangalore [Bangalore],Bangalore,Karnataka














