Last Updated:
ಕೆಎಸ್ಆರ್ಟಿಸಿ ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ನಾನ್ ಎ.ಸಿ. ಸ್ಲೀಪರ್ ಬಸ್ ಸೇವೆ ಆರಂಭಿಸಿದೆ. ಆಗಸ್ಟ್ 7, 2026 ರಿಂದ ರೂ. 850 ದರದಲ್ಲಿ ಪ್ರಯಾಣ ಲಭ್ಯ.
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು (Bengaluru) ಕೇಂದ್ರ ವಿಭಾಗದ ವತಿಯಿಂದ ಪ್ರಯಾಣಿಕರ (Passengers) ಅನುಕೂಲಕ್ಕಾಗಿ ಗುಡ್ ನ್ಯೂಸ್ ಒಂದನ್ನು ಹೊರಡಿಸಲಾಗಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ಹೊಸದಾಗಿ ನಾನ್ ಎ.ಸಿ ಸ್ಲೀಪರ್ (Non-A.C. Sleeper) ವಾಹನವನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಬಸ್ ಪ್ರಯಾಣಿಕರಿಗೆ ಅತ್ಯಂತ ಆರಾಮದಾಯಕ ಹಾಗೂ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಈ ಹೊಸ ಸೇವೆ 2026ರ ಆಗಸ್ಟ್ 07 ರಿಂದ ಅಧಿಕೃತವಾಗಿ ಚಾಲನೆ ಪಡೆಯಲಿದೆ.
ಈ ಸಾರಿಗೆಯು ಬೆಂಗಳೂರಿನ ಮಡಿವಾಳದಿಂದ ಹೊರಟು ಶಾಂತಿನಗರ ಬಸ್ ನಿಲ್ದಾಣ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಕೆಂಗೇರಿ ಬಸ್ ನಿಲ್ದಾಣದ ಮೂಲಕ ಸಾಗಲಿದೆ. ತದನಂತರ ಮೈಸೂರು, ವಿರಾಜಪೇಟೆ, ಇರಿಟ್ಟು, ತಲಚೇರಿ ಮಾರ್ಗವಾಗಿ ಕಣ್ಣೂರು ತಲುಪಲಿದೆ. ಬೆಂಗಳೂರಿನಿಂದ ಕಣ್ಣೂರಿಗೆ ಪ್ರತಿ ಪ್ರಯಾಣಿಕರಿಗೆ ರೂ. 850/- ಪ್ರಯಾಣ ದರ ನಿಗದಿಪಡಿಸಲಾಗಿದೆ.
ಮಡಿವಾಳ (ಪ್ರಾರಂಭ: 20:36) ➔ ವಿರಾಜಪೇಟೆ (ತಲುಪುವ ಸಮಯ: 03:30) | ದರ: ರೂ. 600
ಶಾಂತಿನಗರ ಟಿಟಿಎಂಸಿ (ಪ್ರಾರಂಭ: 21:16) ➔ ಇರಿಟ್ಟು (ತಲುಪುವ ಸಮಯ: 04:45) | ದರ: ರೂ. 705
ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ (ಪ್ರಾರಂಭ: 22:00) ➔ ತಲಚೇರಿ (ತಲುಪುವ ಸಮಯ: 05:45) | ದರ: ರೂ. 805
ಕೆಂಗೇರಿ ಟಿಟಿಎಂಸಿ (ಪ್ರಾರಂಭ: 22:15) ➔ ಕಣ್ಣೂರು (ತಲುಪುವ ಸಮಯ: 06:30) | ದರ: ರೂ. 850
ಪ್ರಯಾಣಿಕರು ಈ ಹೊಸ ಸ್ಲೀಪರ್ ಬಸ್ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
BMTC, KSRTC ಬಸ್ ಟಿಕೆಟ್ ದರ ಏರಿಕೆ ಫಿಕ್ಸ್!
ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸೇರಿ ಹಲವು ಸಾರಿಗೆ ನಿಗಮಗಳು ಬಸ್ ಟಿಕೆಟ್ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನಲೆ ಸರ್ಕಾರ ಅವರ ಪ್ರಸ್ತಾವನೆ ಸ್ವೀಕರಿಸಿ ಎಲ್ಲಾ ನಿಗಮಗಳ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ದರ ಏರಿಕೆ ಬಗ್ಗೆ ಶಿಫಾರಸ್ಸು ಮಾಡಲು ಸಾರಿಗೆ ನಿಗಮ ಸೂಚನೆ ನೀಡಿದೆ.
Bangalore [Bangalore],Bangalore,Karnataka












