Last Updated:
ದೀರ್ಘ ಕಾಯುವಿಕೆಯ ಸಮಯದಲ್ಲಿ ತಮ್ಮನ್ನು ತಾವು ಸಮಾಧಾನಪಡಿಸಿಕೊಂಡರು. ಆದರೆ ದೇವರ ದ್ವಾರವೆಂದು ಪರಿಗಣಿಸಿದ ಆಸ್ಪತ್ರೆ ಮುಂದೊಂದು ದಿನ ತಮ್ಮ ಮಗಳ ಮೃತದೇಹ ಸ್ವೀಕರಿಸುವ ಸ್ಥಳವಾಗುತ್ತದೆ ಎಂದು ಅವರು ಕನಸಲ್ಲೂ ಊಹಿಸಿರಲಿಕ್ಕಿಲ್ಲ.
ನವದೆಹಲಿ(ಸೆ.02): ತನ್ವಿಗೆ ಮೊದಲ ಬಾರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಎರಡು ವರ್ಷದವಳಿದ್ದಾಗ ಮೂರ್ಛೆ ಹೋದಾಗ, ಆಕೆಯ ಪೋಷಕರು ತೀವ್ರ ಆಘಾತಕ್ಕೊಳಗಾದರು. ಅಲ್ಲಿನ ವೈದ್ಯರು ಹೃದಯ ಸಮಸ್ಯೆ ಇದೆ ಎಂಬ ವಿಚಾರ ಬಹಿರಂಗಪಡಿಸಿದರು. ತಮ್ಮ ಮಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಅವರು ರಾಜಸ್ಥಾನದ ಕೋಟಾದಿಂದ ದೇಶದ ಅತಿದೊಡ್ಡ ತೃತೀಯ ಹಂತದ ಆರೈಕೆ ಕೇಂದ್ರವಾದ ದೆಹಲಿಯ ಏಮ್ಸ್‌ಗೆ ಆಕೆಯನ್ನು ಕರೆತಂದರು. 13 ವರ್ಷಗಳ ಕಾಲ, ಅವರು ಕೋಟಾ ಮತ್ತು ದೆಹಲಿಯ ನಡುವೆ ಇದಕ್ಕಾಗಿ ಪ್ರಯಾಣಿಸಿದರು, ವೈದ್ಯರ ಸಲಹೆಯನ್ನು ಆಲಿಸಿದರು, ವಿಭಿನ್ನ ಟೆಸ್ಟ್ ಮಾಡಿಸಿಕೊಂಡರು. ದೀರ್ಘ ಕಾಯುವಿಕೆಯ ಸಮಯದಲ್ಲಿ ತಮ್ಮನ್ನು ತಾವು ಸಮಾಧಾನಪಡಿಸಿಕೊಂಡರು. ಆದರೆ ದೇವರ ದ್ವಾರವೆಂದು ಪರಿಗಣಿಸಿದ ಆಸ್ಪತ್ರೆ ಮುಂದೊಂದು ದಿನ ತಮ್ಮ ಮಗಳ ಮೃತದೇಹ ಸ್ವೀಕರಿಸುವ ಸ್ಥಳವಾಗುತ್ತದೆ ಎಂದು ಅವರು ಕನಸಲ್ಲೂ ಊಹಿಸಿರಲಿಕ್ಕಿಲ್ಲ.














