Last Updated:
ಬಿ.ಆರ್. ಚೋಪ್ರಾ ನಿರ್ದೇಶನದ ಮಹಾಭಾರತ ಧಾರಾವಾಹಿಯ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರ ನೆನಪಿನಲ್ಲಿ ಉಳಿದಿದೆ. ಇದೇ ಧಾರಾವಾಹಿಯಲ್ಲಿ ಆಶಾ ಸಿಂಗ್ ಕೃಪಿ ಪಾತ್ರವನ್ನು ನಿರ್ವಹಿಸಿದ್ದರು.
ಭಾರತೀಯ ಕಿರುತೆರೆ ಲೋಕದ ಇತಿಹಾಸದಲ್ಲಿ ಕೆಲವು ಧಾರಾವಾಹಿಗಳು ಎಂದಿಗೂ ಮರೆಯಲಾಗದ ಸ್ಥಾನ ಪಡೆದುಕೊಂಡಿವೆ. ಅವುಗಳಲ್ಲಿ ಬಿ.ಆರ್. ಚೋಪ್ರಾ (B.R. Chopra) ಅವರ ಮಹಾಭಾರತ (Mahabharata) ಪ್ರಮುಖವಾದದ್ದು. ಈ ಧಾರಾವಾಹಿ ಹಲವು ಕಲಾವಿದರಿಗೆ ದೇಶಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಅದರಲ್ಲಿನ ಕೃಪಿ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ಹಿರಿಯ ನಟಿ ಆಶಾ ಸಿಂಗ್ (Asha Singh) ಇದೀಗ ನಿಧನರಾಗಿದ್ದಾರೆ.














