Last Updated:
ಆ ನಟಿ ರಕ್ತ ಉಗುಳಿ ಸಾಯುವ ದೃಶ್ಯವಿತ್ತು. ನಕಲಿ ರಕ್ತ ಬಾಯಿಗೆ ಸುರಿದದ್ದಷ್ಟೇ ಗೊತ್ತು. ಆಕೆಯ ಧ್ವನಿ ಶಾಶ್ವತವಾಗಿ ಕಳೆದು ಹೋಗಿತ್ತು.
ಮಾಲಿವುಡ್ನ (Mollywood) ಈ ನಟಿ ತಮ್ಮ ಕರ್ಕಶ ಧ್ವನಿಯಿಂದಲೇ ಗುರತಿಸಲ್ಪಟ್ಟರು. ಆದರೆ ಆಕೆ ಹುಟ್ಟುವಾಗಿದ್ದ ಧ್ವನಿ ಆದಾಗಿರಲಿಲ್ಲ. ಮಲಯಾಳಂ ಚಿತ್ರರಂಗದ ಖ್ಯಾತ ಪೋಷಕ ನಟಿ ಕಲಾರಂಜನಿಯ (Kala Ranjini) ಕಥೆ ಕುತೂಹಲಕಾರಿಯಾಗಿದೆ. ಒಡೆದ ಧ್ವನಿಯಿಂದಲೇ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡ ಕಲಾವಿದೆ ಈಕೆ.
ತನ್ನ ತಂಗಿಯರಾದ ಕಲ್ಪನಾ ಹಾಗೂ ಊರ್ವಶಿಯಂತಹ ಸಿನಿಮಾ ಕೆರಿಯರ್ ಕಲಾರಂಜನಿಯದ್ದಾಗಿರಲಿಲ್ಲ. ಆದರೆ ಅವರು ಹಲವಾರು ಮರೆಯಲಾಗದ ಪಾತ್ರಗಳಿಗೆ ಜೀವ ತುಂಬಿದರು. ತಮ್ಮ ಅಭಿನಯ, ಕಾಮಿಡಿ ಹಾಗೂ ಪಾತ್ರಗಳ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ಭರತನಾಟ್ಯಂ ಹಾಗೂ ಮೋಹಿನಿಯಟ್ಟಾಂ ಸಿನಿಮಾಗಳ ಮೂಲಕವೂ ಸದ್ದು ಮಾಡಿದರು.
ಮಲಯಾಳಂ ಸಿನಿಮಾ ಹೊರತು ಪಡಿಸಿ ಅವರು ತಮಿಳು, ತೆಲುಗು, ಕನ್ನಡದಲ್ಲಿ, ಕೆಲವು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ತನ್ನ ಕೆರಿಯರ್ನಲ್ಲಿ ನಿಧಾನವಾಗಿ ಮೇಲೇರುತ್ತಿರುವಾಗಲೇ ಅನಿರೀಕ್ಷಿತವಾಗಿ ಒಂದು ಘಟನೆ ನಡೆದಿತ್ತು. ಅದು ಕಲಾರಂಜನಿಯವರ ಬದುಕನ್ನು ಶಾಶ್ವತವಾಗಿ ಬದಲಾಯಿಸಿತು. ಇದು ಕಲಾರಂಜನಿಯವರ ಬದುಕನ್ನಷ್ಟೇ ಅಲ್ಲ ವೃತ್ತಿಯನ್ನೂ ಭಾದಿಸಿತು.
ದಶಕಗಳ ಹಿಂದೆ ಕಲಾರಂಜನಿ ಅವರು ತಮ್ಮ ಧ್ವನಿ ಬಹುತೇಕ ಕಳೆದುಕೊಂಡರು. ಅವರು ಸಿನಿಮಾಗಾಗಿ ನಕಲಿ ರಕ್ತವನ್ನು ಕುಡಿದಾಗ ಅದರಲ್ಲಿ ಆ್ಯಸಿಡ್ ಇತ್ತು. ತೆಂಗಿನೆಣ್ಣೆಯ ಬದಲು ಅದರಲ್ಲಿ ಆ್ಯಸಿಡ್ ಸೇರಿಸಲಾಗಿತ್ತು. ಇದು ಅವರ ಸಿನಿಮಾ ಕೆರಿಯೆರ್ ಮೇಲೆ ಗಂಭೀರ ಪರಿಣಾಮ ಬೀರಿದೆ. ಆದರೆ ಈ ಘಟನೆ ಸಂಬಂಧ ತನಗೆ ಯಾರ ಬಗ್ಗೆಯೂ ದೂರಿಲ್ಲ ಎಂದು ಅವರು ಇತ್ತೀಚೆಗೆ ಹೇಳಿದರು. ಆದರೆ ಇದು ಮೇಕಪ್ ಆರ್ಟಿಸ್ಟ್ ತಿಳಿಯದೇ ಮಾಡಿದ ತಪ್ಪು ಎಂದು ತಾವು ನಂಬುವುದಾಗಿ ಹೇಳಿದರು.
ಆ ಸಮಯದಲ್ಲಿ ಆತ ತುಂಬಾ ನೊಂದಿದ್ದ. ಅವನನ್ನು ಎಲ್ಲಾ ಸೆಟ್ಗಳಲ್ಲಿ ಎಲ್ಲರೂ ಅವಾಯ್ಡ್ ಮಾಡಿದರು. ಅವನ ಕೊನೆಗಾಲದಲ್ಲಿ ನಾನು ಅವನಿಗೆ ಸಹಾಯ ಮಾಡಿದೆ. ಅವರ ಮಕ್ಕಳು ಈಗಲೂ ನಮ್ಮೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದಾರೆ. ಹಾಗಾಗಿದ್ದಕ್ಕೆ ಅವರಿಗೂ ಬೇಸರವಾಗಿತ್ತು. ಆದರೆ ಅವರು ತನ್ನ ಕೆಲಸದಲ್ಲಿ ಎಂದಿಗೂ ಆ ರೀತಿ ಬೇಕೆಂದೇ ಮಾಡುವ ವ್ಯಕ್ತಿಯಲ್ಲ. ನಕಲಿ ರಕ್ತ ತಯಾರಿಸಿದ ಕೆವಿ ಭಾಸ್ಕರ್ ನಲಯಾಳಂ ಸಿನಿಮಾದ ಪ್ರಮುಖ ಮೇಕಪ್ ಆರ್ಟಿಸ್ಟ್ಗಳಲ್ಲಿ ಒಬ್ಬರಾಗಿದ್ದರು. ಅವರು ಖಂಡಿತವಾಗಿಯೂ ಅದನ್ನು ಉದ್ದೇಶಪೂರ್ವಕವಾಗಿ ಮಾಡಲು ಸಾಧ್ಯವೇ ಇಲ್ಲ. ಅದು ಕೈತಪ್ಪಿದ ಅಚಾತುರ್ಯ. ಅದರಿಂದ ನನ್ನ ಬದುಕು ಹೀಗಾಗುತ್ತದೆ ಎಂದು ಬಹುಶಃ ಅವನೂ ತಿಳಿದಿರಲಿಲ್ಲ ಎಂದು ಅವರು ಕ್ಯಾನ್ ಚಾನೆಲ್ ಜೊತೆ ಮಾತನಾಡುವಾಗ ಹೇಳಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಹಾಗಾಗಿ ನನಗೆ ದೊಡ್ಡ ಬೇಸರ ಏನಿಲ್ಲ. ನಾನು ಆಗಿನಿಂದಲೂ ಅಭಿನಯಿಸುತ್ತಿದ್ದೇನೆ. ನಾನು ನನ್ನ ಸಹ ನಟರಿಗೂ ಇತರ ಕಲಾವಿದರಿಗೂ ಧನ್ಯವಾದ ಹೇಳುತ್ತೇನೆ. ನಾನು ನನ್ನ ಡೈಲಾಗ್ ಹೇಳುವಾಗ ಎಲ್ಲರೂ ಸೈಲೆಂಟಾಗಿರಬೇಕಾಗಿತ್ತು. ಯಾಕೆಂದರೆ ನನ್ನೊಂದಿಗೆ ನಟಿಸುವವರು ನನ್ನ ಮಾತು ಕೇಳಿ ಅದಕ್ಕೆ ರಿಯಾಕ್ಟ್ ಮಾಡಬೇಕಾಗಿತ್ತು. ಈ ನಟನೆಯ ಪ್ರಯಾಣ ಎಲ್ಲರ ಸಹಕಾರದಿಂದ ಸಾಗಿ ಬಂದಿದೆ ಎಂದಿದ್ದಾರೆ.
ಅಂಬಿಲಿ ನನಗಾಗಿ ಎಲ್ಲವನ್ನೂ ಡಬ್ ಮಾಡುತ್ತಿದ್ದರು. ಆದರೆ ಆಕೆ ನಮ್ಮೊಂದಿಗಿಲ್ಲ. ನಂತರ ನಿರ್ದೇಶಕ ರೋಷನ್ ಆ್ಯಂಡ್ರ್ಯೂ ನನ್ನನ್ನು ನನ್ನದೇ ಧ್ವನಿ ಬಳಸುವಂತೆ ಹೇಳಿದರು. ನನಗೆ ಆಗ ಅಷ್ಟೂ ಆತ್ಮವಿಶ್ವಾಸವೂ ಇರಲಿಲ್ಲ. ನಂತರ ನಾನು ಚಿರಕೊಂಡಿಂಜ ಕಿನಾವುಗಳ್ ಸಿನಿಮಾ ಮಾಡಿದೆ. ಭರತನಾಟ್ಯಂನಲ್ಲಿ ನಿರ್ದೇಶಕರು ನಾನೇ ನನ್ನ ಪಾತ್ರಕ್ಕೆ ಡಬ್ ಮಾಡುವಂತೆ ಹೇಳಿದರು. ಈ ಮೂಲಕ ಅವರು ನನ್ನ ಧ್ವನಿ ಮರಳಿ ತರಲು ನೆರವಾದರು ಎಂದಿದ್ದಾರೆ.
ಪ್ರೇಮ್ ನಜೀರ್ ಜೊತೆ ಕೆಲಸ ಮಾಡುವಾಗ ಈ ಘಟನೆ ನಡೆದಿತ್ತು. ಆಕೆ ಒಂದು ದೃಶ್ಯದಲ್ಲಿ ರಕ್ತ ಉಗುಳಿ ಸಾಯಬೇಕಾಗಿತ್ತು. ಆಗ ತೆಂಗಿನೆಣ್ಣೆ ಮಿಕ್ಸ್ ಮಾಡಿ ನಕಲಿ ರಕ್ತ ತಯಾರಿಸುತ್ತಿದ್ದರು. ರಕ್ತ ಬಿದ್ದರೆ ಕಾಣುವಂತೆ ಬಿಳಿ ಸೀರೆ ಉಡಿಸಲಾಗಿತ್ತು. ನಾನೇ ಕುಡಿಸುತ್ತೇನೆ ಎಂದು ಪ್ರೇಮ್ ನಜೀರ್ ಹೇಳಿದ್ದಾಗಿ ನಟಿ ತಿಳಿಸಿದ್ದಾರೆ.
ಆದರೆ ನನಗೆ ನನ್ನ ಬಾಯಿಗೆ ಕೆಂಬಣ್ಣದ ಪಾನೀಯ ಹಾಕಿದ್ದಷ್ಟೆ ನೆನಪಿದೆ. ಕೂಡಲೇ ಬಾಯಿ ಗಂಡಲು ಉರಿದ ಅನುಭವವಾಗಿತ್ತು. ಬಹಳಷ್ಟು ಚಿಕಿತ್ಸೆ ನಂತರವೂ ಪ್ರಯೋಜನವಾಗಲಿಲ್ಲ. ಆಕೆ ತನ್ನ ಸಂಪೂರ್ಣ ಧ್ವನಿ ಕಳೆದುಕೊಂಡಿದ್ದಷ್ಟೇ ಅಲ್ಲದೆ ಅದು ವಾಪಸ್ ಬರಲಿಲ್ಲ. ನಟಿ ಸುಮಾರು 3 ತಿಂಗಳು ಆಸ್ಪತ್ರೆಯಲ್ಲಿದ್ದರು.














