Last Updated:
Actress Case: ಆ ನಟಿ ಬಾಯ್ಫ್ರೆಂಡ್ಗೆ ಕಾಲ್ ಮಾಡಿದ್ದಳು. ಆತ ಬರ್ತೀನಿ, ಐ ಲವ್ ಯೂ ಎಂದಿದ್ದ. ಆತ ಬರುವಷ್ಟರಲ್ಲಿ ಆಕೆಯ ಉಸಿರೇ ನಿಂತಿತ್ತು. 10 ವರ್ಷದ ನಂತರ ಏನಾಯ್ತು?
ಪೊಲೀಸ್, ಕೇಸ್, ಕೋರ್ಟ್ ತನಿಖೆ ಅಂದರೆ ಜನ ಯಾಕೆ ಹೆದರುತ್ತಾರೆ ಎಂದರೆ ಅದು ತೆಗೆದುಕೊಳ್ಳೋ ಸಮಯ ಹಾಗೂ ಖರ್ಚಿನ ಸಂಬಂಧ. 10 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಿವುಡ್ ನಟಿಯ ಸಾವಿಗೆ ಸಂಬಂಧಿಸಿ ಆಕೆಯ ಬಾಯ್ಫ್ರೆಂಡ್ಗೆ ಸಂಬಂಧಿಸಿ ಕೋರ್ಟ್ ಈಗ ತೀರ್ಪು ಕೊಟ್ಟಿದೆ.
ಬರೋಬ್ಬರಿ 10 ವರ್ಷಗಳ ನಂತರ ನಟಿ ಪ್ರತ್ಯೂಷಾ ಬ್ಯಾನರ್ಜಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಬಾಯ್ಫ್ರೆಂಡ್ ನಟ ಹಾಗೂ ನಿರ್ಮಾಪಕ ರಾಹುಲ್ ಸಿಂಗ್ ಅವರನ್ನು ಬಾಂಬೆ ಹೈಕೋರ್ಟ್ ನಿರ್ದೋಷಿ ಎಂದು ಘೋಷಿಸಿದೆ.
2023ರಲ್ಲಿ ನಿರ್ದೋಷಿಗೊಳಿಸಬೇಕೆಂದು ದಿಂದೋಷಿ ಸೆಷನ್ಸ್ ಕೋರ್ಟ್ಗೆ ರಾಹುಲ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಜಾ ಆಗಿತ್ತು. ಆ ನಂತರ ಅವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು.
ರಾಹುಲ್ ಸಿಂಗ್ನಿಂದ ಆರ್ಥಿಕ, ದೈಹಿಕ, ಭಾವನಾತ್ಮಕ ದೌರ್ಜನ್ಯಕ್ಕೊಳಗಾಗಿ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೆಷನ್ಸ್ ಕೋರ್ಟ್ ಆತನನ್ನು ನಿರ್ದೋಷಿ ಎನ್ನಲು ನಿರಾಕರಿಸಿತ್ತು. ಆದರೆ ಇತ್ತೀಚೆಗೆ ನ್ಯಾ. ಶಿವಕುಮಾರ್ ಡಿಗೆ ಅವರ ಏಕಸದಸ್ಯ ಪೀಠ ಕೇಸ್ನಿಂದ ರಾಹುಲ್ಸಿಂಗ್ನ ಡಿಚ್ಜಾರ್ಜ್ ಮಾಡುವಂತೆ ಆದೇಶ ನೀಡಿದೆ.
ಪ್ರತ್ಯೂಷಾ ಬಾಲಿಕಾ ವಧು ಸೀರಿಯಲ್ನಲ್ಲಿ ಆಕೆಯ ಪಾತ್ರಕ್ಕಾಗಿ ಭಾರೀ ಫೇಮಸ್ ಆಗಿದ್ದರು. ಅವರು 2016ರಲ್ಲಿ ಏಪ್ರಿಲ್ 1ರಂದು ಗೋರೆಗಾಂವ್ ಪಶ್ಚಿಮದಲ್ಲಿದ್ದ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜುಲೈ 2ರಂದು ರಾಹುಲ್ ಸಿಂಗ್ಗೆ ಮುಂಗಡ ಜಾಮೀನು ಲಭಿಸಿತ್ತು. ತನಿಖೆಯ 2 ವರ್ಷದ ನಂತರ 2018 ಏಪ್ರಿಲ್ನಲ್ಲಿ ಬಂಗೂರ್ ನಗರ ಪೊಲೀಸರು ಕೇಸ್ನ ಚಾರ್ಜ್ ಶೀಟ್ ರೆಡಿ ಮಾಡಿದ್ದರು. ಅದರಿಂದ ತಮ್ಮ ಹೆಸರನ್ನು ಬಿಡಬೇಕೆಂದು ರಾಹುಲ್ ಸಲ್ಲಿಸಿದ್ದ ಅರ್ಜಿ ಈಗ ಪುರಸ್ಕೃತವಾಗಿದೆ.
ವಕೀಲ ಶ್ರೇಯಾಂಶ್ ಮಿಥಾರೆ ಅವರ ಮೂಲಕ ರಾಹುಲ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ಅವರು 2016 ಡಿಸೆಂಬರ್ನಲ್ಲಿ ಮದುವೆಯಾಗಲು ಬಯಸಿದ್ದರು. ಆದರೆ ಪದೇ ಪದೇ ಆಕೆಯ ಪೋಷಕರು ಇದರಲ್ಲಿ ಮೂಗು ತೂರಿಸಿದ ಕಾರಣ ಪ್ರತ್ಯೂಷಾ ತುಂಬಾನೆ ನೊಂದುಕೊಂಡಿದ್ದರು ಎಂದು ಅರ್ಜಿಯಲ್ಲಿ ರಾಹುಲ್ ಸಿಂಗ್ ತಿಳಿಸಿದ್ದಾನೆ.
ಆಕೆಯ ಪೋಷಕರಿಗೆ ಹಣ ನೀಡಬೇಡ ಎಂದಿದ್ದು ಅವರಿಬ್ಬರ ಸಂಬಂಧದಲ್ಲಿ ಜಗಳಕ್ಕೆ ಕಾರಣವಾಗಿತ್ತು ಎಂದು ರಾಹುಲ್ ಸಿಂಗ್ ತಿಳಿಸಿದ್ದಾನೆ. ಆಕೆಯ ಪೋಷಕರಿಂದ ಆಕೆ ನೊಂದಿದ್ದಳು, ತನ್ನಿಂದ ಅಲ್ಲ ಎಂದು ರಾಹುಲ್ ಅರ್ಜಿಯಲ್ಲಿ ತಿಳಿಸಿದ್ದಾನೆ. ಪ್ರತ್ಯೂಷಾಳ ಪೋಷಕರು ಮಗಳ ಹಣದಿಂದ ಲ್ಯಾವಿಷ್ ಆಗಿ ಬದುಕುತ್ತಿದ್ದರು ಎಂದಿದ್ದಾನೆ.
ಇನ್ನೊಂದು ಕಡೆ ಪ್ರತ್ಯೂಷಾಳ ಅಮ್ಮ ಆರೋಪ ಮಾಡಿ ರಾಹುಲ್ ಸಿಂಗ್ ಪೊಸೆಸಿವ್ ಬಾಯ್ಫ್ರೆಂಡ್ ಆಗಿದ್ದ. ಆಕೆ ಮೇಲೆ ತುಂಬಾ ಸಲ ದೌರ್ಜನ್ಯ ಎಸಗಿದ್ದ. ಆಕೆಯ ಸಂಪಾದನೆಯನ್ನು ದುರ್ಬಳಕೆ ಮಾಡಿದ್ದಾನೆ. ಆಕೆಯನ್ನು ತಮ್ಮ ಜೊತೆಗೂ ಮಾತನಾಡಲು ಬಿಡುತ್ತಿರಲಿಲ್ಲ ಎಂದಿದ್ದಾರೆ.
ತನ್ನ ಅರ್ಜಿಯಲ್ಲಿ ರಾಹುಲ್ ಸಿಂಗ್ ತನ್ನ ಹಾಗೂ ಪ್ರತ್ಯೂಷಾ ನಡುವಿನ ಕೊನೆಯ ಸಂಭಾಷಣೆಯ ಬಗ್ಗೆಯೂ ಹೇಳಿದ್ದಾನೆ. ಪ್ರತ್ಯೂಷಾ ಬ್ಯಾನರ್ಜಿ ಚೆನ್ನಾಗಿ ಓದಿದ, ಗುರುತಿಸಿಕೊಂಡ ನಟಿ. ಆಕೆ ಸಂಬಂಧದಿಂದ ಹೊರನಡೆಯುವ ಆಯ್ಕೆಯ ಮುಂದೆ ಇತ್ತು. ಆದರೆ ಆಕೆ ರಾಹುಲ್ ಸಿಂಗ್ ಜೊತೆಗೆ ಬದುಕುತ್ತಿದ್ದಳು. ಇದರಿಂದ ಆಕೆಯ ಪೋಷಕರು ಮಾಡುತ್ತಿರುವ ಆರೋಪ ಅರ್ಥಹೀನ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆಕೆ ಸಾಯುವ ಕೆಲವೇ ಗಂಟೆಗಳ ಮೊದಲು ಆಕೆಯೊಂದಿಗೆ ಮಾತನಾಡಿದ್ದ ಕಾಲ್ ರೆಕಾರ್ಡ್ ಅನ್ನು ಕೂಡಾ ರಾಹುಲ್ ಸಿಂಗ್ ಸಾಕ್ಷಿಯಾಗಿ ನೀಡಿದ್ದಾನೆ.
ವಕೀಲ ಶ್ರೇಯಾಂಶ್ ಮಿಥಾರೆ ಈ ಬಗ್ಗೆ ಪ್ರತಿಕ್ರಿಯಿಸಿ, ಕೊನೆಯ ಫೋನ್ ಕಾಲ್, ಸಂಭಾಷೆಯನ್ನು ಕೋರ್ಟ್ ಗಮನಿಸಿದೆ. ಕೊನೆಯ ಸಂಭಾಷಣೆಯಲ್ಲಿ ರಾಹುಲ್ ಪ್ರತ್ಯೂಷಾಳನ್ನು ಸಮಾಧಾನ ಮಾಡುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಐ ಲವ್ ಯೂ, ಮನೆಗೆ ಬರ್ತಿದ್ದೀನಿ ಎಂದಿದ್ದ. ಹಾಗಾಗಿ ಆಕೆಯನ್ನು ಆತ್ಮಹತ್ಯೆಗೆ ದೂಡುವ ಉದ್ದೇಶ ರಾಹುಲ್ಗೆ ಇರಲಿಲ್ಲ. ಯಾವುದೇ ಆತ್ಮಹತ್ಯೆ ನೋಟ್ ಇಲ್ಲದೆ ರಾಹುಲ್ ವಿರುದ್ಧ ಯಾಕೆ ಎಫ್ಐಆರ್ ಮಾಡಲಾಗಿದೆ? ಎಂದು ಪ್ರಶ್ನಿಸಿದರು. ಸದ್ಯ ಕೇಸ್ನಿಂದ ರಾಹುಲ್ ಸಿಂಗ್ಗೆ ರಿಲೀಫ್ ಸಿಕ್ಕಿದೆ.














