Last Updated:
Actress Life: ಖ್ಯಾತ ಕಿರುತೆರೆ ನಟಿ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಲಕ್ಷ್ಮೀ ಹಾಗೂ ಗಣೇಶ ಇಬ್ಬರೂ ಮನೆಗೆ ಬಂದ್ರು ಎಂದಿದ್ದಾರೆ.
ಈ ವರ್ಷದ ಏಪ್ರಿಲ್‌ನಲ್ಲಿ ತಾನು ಗರ್ಭಿಣಿ (Pregnant) ಎಂದು ಘೋಷಿಸಿದ ನಂತರ ಕಿರುತೆರೆಯ ಅತ್ಯಂತ ಮುದ್ದಾದ ಜೋಡಿ ಸಂಭಾವನಾ ಸೇಠ್ (Sambhavna Seth) ಮತ್ತು ಅವಿನಾಶ್ ದ್ವಿವೇದಿ ಈಗ ಅವಳಿ ಮಕ್ಕಳಿಗೆ (Twins) ಪೋಷಕರಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳೊಂದಿಗೆ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ದಂಪತಿ ಶುಭ ಸುದ್ದಿ ಶೇರ್ ಮಾಡಿದ್ದಾರೆ. ಸಂಭಾವನಾ ಮತ್ತು ಅವಿನಾಶ್ ಹೆಣ್ಣು ಮಗು ಮತ್ತು ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ವೈಯಕ್ತಿಕ ಸಮಸ್ಯೆಗಳು ಹಾಗೂ ಫರ್ಟಿಲಿಟಿ ಸಮಸ್ಯೆಯಿಂದಾಗಿ ಅವರು ಸರೊಗಸಿ ಮೂಲಕ ಪೋಷಕರಾಗಿದ್ದಾರೆ.
ಸ್ವಲ್ಪ ಸಮಯದ ಹಿಂದೆ, ಸಂಭಾವನಾ ಸೇಠ್ ಮತ್ತು ಅವಿನಾಶ್ ದ್ವಿವೇದಿ ತಮ್ಮ ಮಕ್ಕಳ ಬಗ್ಗೆ ಜಂಟಿ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಹೃದಯಸ್ಪರ್ಶಿ ಸುದ್ದಿಯ ಜೊತೆಗೆ, ದಂಪತಿ ಆಸ್ಪತ್ರೆಯಿಂದ ಹಲವಾರು ಫೋಟೋಸ್ ಕೂಡಾ ಪೋಸ್ಟ್ ಮಾಡಿದರು.
ಭಾವನಾತ್ಮಕ ಫೋಟೋದಲ್ಲಿ ಸಂಭಾವನಾ ಕಣ್ಣೀರಿಡುತ್ತಿರುವುದನ್ನು ಕಾಣಬಹುದು. ಆ ವಿಶೇಷ ಕ್ಷಣದಲ್ಲಿ ಅವಿನಾಶ್ ಪ್ರೀತಿಯಿಂದ ಪತ್ನಿಗೆ ಸಾಂತ್ವನ ಹೇಳುತ್ತಿದ್ದರು. ಫೋಟೊಗಳ ಜೊತೆಗೆ, ಅವರು ಚಂದದ ಕ್ಯಾಪ್ಶನ್ ಕೂಡಾ ಬರೆದಿದ್ದಾರೆ.
ಪೋಸ್ಟ್‌ನಲ್ಲಿ, “ಈ ವರ್ಷ ದೊಡ್ಡ ದೀಪಾವಳಿ ಬೇಗನೆ ಬಂತು. ಲಕ್ಷ್ಮಿ ಹಾಗೂ ಗಣೇಶ ಇಬ್ಬರೂ ಮನೆಗೆ ಬಂದಿದ್ದಾರೆ. ನಮ್ಮ ಹೃದಯಗಳು ಕೃತಜ್ಞತೆಯಿಂದ ತುಂಬಿವೆ. ಹರ್ ಹರ್ ಮಹಾದೇವ್ ಎಂದು ಬರೆದಿದ್ದಾರೆ.

ಅವರು ಸಿಹಿ ಸುದ್ದಿ ಹಂಚಿಕೊಂಡ ಕೂಡಲೇ, ಅವರ ಅಭಿಮಾನಿಗಳು ಅವರ ಮೇಲೆ ಪ್ರೀತಿ ತೋರಿಸಿದ್ದಾರೆ. ಕಮೆಂಟ್ ಬಾಕ್ಸ್ ಪೂರ್ತಿ ಶುಭಾಶಯಗಳಿಂದ ತುಂಬಿತ್ತು. ಎಲ್ಲರೂ ಅವರಿಗೆ ಶುಭ ಹಾರೈಸಿದ್ದಾರೆ. ಒಬ್ಬ ಅಭಿಮಾನಿ ಕಮೆಂಟ್ ಮಾಡಿ “ನಿಮ್ಮಿಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು! ಹಲವು ವರ್ಷಗಳ ಕಾಯುವಿಕೆಯ ನಂತರ, ನಿಮ್ಮ ಕುಟುಂಬವು ಒಂದಲ್ಲ ಎರಡು ಮುದ್ದಾದ ಮಕ್ಕಳಿಂದ ಆಶೀರ್ವದಿಸಲ್ಪಟ್ಟಿರುವುದನ್ನು ನೋಡುವುದು ನಿಜಕ್ಕೂ ಅದ್ಭುತವಾಗಿದೆ. ನಿಮ್ಮ ಅವಳಿ ಮಕ್ಕಳು ನಿಮ್ಮ ಜೀವನದಲ್ಲಿ ಅಂತ್ಯವಿಲ್ಲದ ಸಂತೋಷ, ಪ್ರೀತಿ, ನಗು ಮತ್ತು ಆಶೀರ್ವಾದಗಳನ್ನು ತರಲಿ. ಮಕ್ಕಳಿಗೆ ಉತ್ತಮ ಆರೋಗ್ಯ ಇರಲಿ. ನಿಮ್ಮಿಬ್ಬರ ಪೋಷಕರಾದ ಪ್ರಯಾಣ ಸುಂದರವಾಗಿರಲಿ ಎಂದು ಹಾರೈಸಿದ್ದಾರೆ.

“ನಿಮ್ಮಿಬ್ಬರಿಗೂ ಅಭಿನಂದನೆಗಳು! ಜಗತ್ತಿಗೆ ಸ್ವಾಗತ ಅವಳಿಗಳೇ.. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ.
ಇದಕ್ಕೂ ಮೊದಲು, ಸಂಭಾವನಾ ತನ್ನ ಆರೋಗ್ಯದ ಸಮಸ್ಯೆ ಗರ್ಭಪಾತದ ಬಗ್ಗೆ ಹೌಟರ್‌ಫ್ಲೈಗೆ ತಿಳಿಸಿದ್ದಳು. “ನಾನು ಗರ್ಭಪಾತಗಳನ್ನು ಅನುಭವಿಸಿದ್ದೇನೆ. ನಂತರ ನಾನು ಇಲ್ಲಿಗೆ ತಲುಪಿದ್ದೇನೆ. ನನಗೆ ಗರ್ಭಪಾತಗಳಾಗಿವೆ, ಈ ಎಲ್ಲಾ ವರ್ಷಗಳಲ್ಲಿ ನಾನು 7 ಐವಿಎಫ್‌ಗಳನ್ನು ಪ್ರಯತ್ನಿಸಿದ್ದೇನೆ ಎಂದಿದ್ದಾರೆ.
Bangalore,Karnataka













