Actress: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಕುಣಿದು ಕುಪ್ಪಳಿಸಿದ ನಟಿ! ವೈರಲ್ ಚೆಲುವೆ ಹೇಳಿದ್ದೇನು ಗೊತ್ತಾ? | | ACTPnews

ರಿಯಾ ಅಹಿರ್


Last Updated:

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೊಲೀಸ್ ವ್ಯಾನ್ ಮುಂದೆ ನಿಂತು ವಿದ್ಯಾರ್ಥಿಗಳ ಪರ ಧೈರ್ಯದಿಂದ ಧ್ವನಿ ಎತ್ತಿದ ಯುವ ನಟಿ ರಿಯಾ ಅಹಿರ್ (Actress Rhea Ahir) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಿದ ಬೆನ್ನಲ್ಲೇ ನಟಿ ವ್ಯಕ್ತಪಡಿಸಿದ ಸಂತಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಿಯಾ ಅಹಿರ್
ರಿಯಾ ಅಹಿರ್

ನೀಟ್ ಪರೀಕ್ಷೆ (NEET Exam) ವಿವಾದದ ವಿರುದ್ಧ ದೇಶದಾದ್ಯಂತ ನಡೆದ ಪ್ರತಿಭಟನೆಗಳು ಹಲವು ಚರ್ಚೆಗಳಿಗೆ ಕಾರಣವಾಗಿದ್ದವು. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೊಲೀಸ್ ವ್ಯಾನ್ ಮುಂದೆ ನಿಂತು ವಿದ್ಯಾರ್ಥಿಗಳ ಪರ ಧೈರ್ಯದಿಂದ ಧ್ವನಿ ಎತ್ತಿದ ಯುವ ನಟಿ ರಿಯಾ ಅಹಿರ್ (Actress Rhea Ahir) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಿದ ಬೆನ್ನಲ್ಲೇ ನಟಿ ವ್ಯಕ್ತಪಡಿಸಿದ ಸಂತಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೆಹಲಿ ಸೇರಿದಂತೆ ಹಲವು ಭಾಗಗಳಲ್ಲಿ ನೀಟ್ ಪರೀಕ್ಷೆ ಸಂಬಂಧ ಉದ್ಭವಿಸಿದ ವಿವಾದದ ಬೆನ್ನಲ್ಲೇ ಮುಂಬೈನ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದ ಮುಂದೆ ರಿಯಾ ಅಹಿರ್ ಧೈರ್ಯವಾಗಿ ನಿಂತು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು.

ಪೊಲೀಸರೊಂದಿಗೆ ನಡೆದ ಮಾತಿನ ಚಕಮಕಿಯ ಬಳಿಕ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಘಟನೆಯ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದವು. ರಿಯಾ ಅವರ ಧೈರ್ಯವನ್ನು ಅನೇಕರು ಮೆಚ್ಚಿಕೊಂಡಿದ್ದರು.

ರಾಜೀನಾಮೆ ಬಳಿಕ ಮೊದಲ ಪ್ರತಿಕ್ರಿಯೆ

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ರಿಯಾ ಅಹಿರ್ ತಮ್ಮ ಸಂತಸವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಹೋರಾಟ ವ್ಯರ್ಥವಾಗಿಲ್ಲ , ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯ ಕಾಪಾಡಬೇಕೆಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.

ರಿಯಾ ಅಹಿರ್ ಯಾರು?

ರಿಯಾ ಅಹಿರ್ ಅವರ ಪೂರ್ಣ ಹೆಸರು ರಿಯಾ ಯಾದವ್. ಸಾಮಾಜಿಕ ಜಾಲತಾಣಗಳಲ್ಲಿ ಅವರು ‘ರಿಯಾ ಎಕೋಸಿಯಾ’ ಎಂಬ ಹೆಸರಿನಿಂದಲೂ ಪರಿಚಿತರಾಗಿದ್ದಾರೆ. 27 ವರ್ಷದ ರಿಯಾ ಮಾಡೆಲ್, ನಟಿ ಮತ್ತು ಉದ್ಯಮಿಯಾಗಿದ್ದು, ಫ್ಯಾಷನ್ ಕ್ಷೇತ್ರದಲ್ಲೂ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ.

ಜೊತೆಗೆ ನಟಿ, ರಿಯಾಸತ್ ಹೆಸರಿನ ಉಡುಪು ಬ್ರ್ಯಾಂಡ್ ನಡೆಸುತ್ತಿದ್ದು, ಡಿಸೈನರ್ ಉಡುಪುಗಳ ವಿನ್ಯಾಸದಲ್ಲೂ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ದಿಲ್ಬರಾ ಸಂಗೀತ ವೀಡಿಯೊದಲ್ಲಿ ಅಭಿನಯಿಸುವ ಮೂಲಕ ಮನರಂಜನಾ ಕ್ಷೇತ್ರದಲ್ಲೂ ಗಮನ ಸೆಳೆದಿದ್ದಾರೆ.

ಧೈರ್ಯದಿಂದ ವೈರಲ್ ಆದ ನಟಿ

ಒಂದು ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಪರವಾಗಿ ನಿಂತ ಧೈರ್ಯಶಾಲಿ ನಡೆ ರಿಯಾ ಅಹಿರ್ ಅವರನ್ನು ರಾತ್ರೋರಾತ್ರಿ ದೇಶದಾದ್ಯಂತ ಪರಿಚಿತ ಮುಖವನ್ನಾಗಿ ಮಾಡಿದೆ. ಈಗ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ಬಳಿಕ ಅವರು ನೀಡಿರುವ ಪ್ರತಿಕ್ರಿಯೆ ಮತ್ತೆ ಸುದ್ದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಹಾಗೆಯೇ ಒಂದು ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಪರವಾಗಿ ನಿಂತ ಧೈರ್ಯಶಾಲಿ ನಡೆ ರಿಯಾ ಅಹಿರ್ ಅವರನ್ನು ರಾತ್ರೋರಾತ್ರಿ ದೇಶದಾದ್ಯಂತ ಪರಿಚಿತ ಮುಖವನ್ನಾಗಿ ಮಾಡಿದೆ. ಈಗ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ಬಳಿಕ ಅವರು ನೀಡಿರುವ ಪ್ರತಿಕ್ರಿಯೆ ಮತ್ತೆ ಸುದ್ದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed