Actor Nani: ‘ದಿ ಪ್ಯಾರಡೈಸ್’ ಬಳಿಕ ನಾನಿ ಹೊಸ ಅವತಾರ; ‘ಬ್ಲಡಿ ರೋಮಿಯೋ’ ಲುಕ್‌ಗೆ ಫ್ಯಾನ್ಸ್ ಫಿದಾ! | | ACTPnews

News18


Last Updated:

ತೆಲುಗು ಚಿತ್ರರಂಗದ ನಟ ನಾನಿ  (Actor Nani) ತಮ್ಮ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ದಿ ಪ್ಯಾರಡೈಸ್ (The Paradise) ಚಿತ್ರಕ್ಕಾಗಿ ಉದ್ದ ಕೂದಲು ಮತ್ತು ಗಡ್ಡ ಬೆಳೆಸಿಕೊಂಡಿದ್ದ ನಟ , ಇದೀಗ ತಮ್ಮ ಮುಂದಿನ ಸಿನಿಮಾ ಬ್ಲಡಿ ರೋಮಿಯೋಗಾಗಿ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

News18
News18

ತೆಲುಗು ಚಿತ್ರರಂಗದ ನಟ ನಾನಿ  (Actor Nani) ತಮ್ಮ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ದಿ ಪ್ಯಾರಡೈಸ್ (The Paradise) ಚಿತ್ರಕ್ಕಾಗಿ ಉದ್ದ ಕೂದಲು ಮತ್ತು ಗಡ್ಡ ಬೆಳೆಸಿಕೊಂಡಿದ್ದ ನಟ , ಇದೀಗ ತಮ್ಮ ಮುಂದಿನ ಸಿನಿಮಾ ಬ್ಲಡಿ ರೋಮಿಯೋಗಾಗಿ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಸುಜೀತ್ ಅವರೊಂದಿಗೆ ಮೊದಲ ಬಾರಿಗೆ ಕೈಜೋಡಿಸಿರುವ ನಾನಿ, ರೆಟ್ರೋ ಶೈಲಿಯ ವಿಭಿನ್ನ ರೂಪದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಚಿತ್ರದ ತೆರೆಮರೆಯ ಮೇಕ್‌ಓವರ್ ವಿಡಿಯೋ ಬಿಡುಗಡೆಯಾಗಿದ್ದು, ನಟನ ಹೊಸ ಲುಕ್ ಈಗ ಚರ್ಚೆಗೆ ಕಾರಣವಾಗಿದೆ.

ಬ್ಲಡಿ ರೋಮಿಯೋ ಚಿತ್ರಕ್ಕಾಗಿ ನಾನಿ ತಮ್ಮ ನೋಟದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಈ ಹಿಂದೆ ದಿ ಪ್ಯಾರಡೈಸ್ ಚಿತ್ರದಲ್ಲಿ ಉದ್ದ ಕೂದಲು ಮತ್ತು ಗಡ್ಡದೊಂದಿಗೆ ಕಾಣಿಸಿಕೊಂಡಿದ್ದ ಅವರು, ಹೊಸ ಸಿನಿಮಾದಲ್ಲಿ ವಿಭಿನ್ನ ಕೇಶವಿನ್ಯಾಸದ ಮೂಲಕ ಗಮನ ಸೆಳೆದಿದ್ದಾರೆ.

ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ನಾನಿಗೆ ಹೊಸ ಹಾಗೂ ಆಕರ್ಷಕ ಲುಕ್ ನೀಡಿದ್ದಾರೆ. ಟ್ರೆಂಡಿ ಕರ್ಲಿ ಮಲ್ಲೆಟ್ ಲುಕ್  ಮತ್ತು  ಸನ್‌ಗ್ಲಾಸ್‌ಗಳೊಂದಿಗೆ ನಟ ವಿಭಿನ್ನ ಗೆಟಪ್‌ನಲ್ಲಿ ಮಿಂಚಿದ್ದಾರೆ.

ನಿಹಾರಿಕಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯಡಿ ವೆಂಕಟ್ ಬೋಯನಪಲ್ಲಿ ಈ ಬಹುನಿರೀಕ್ಷಿತ ಆ್ಯಕ್ಷನ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಘೋಷಣೆಯಾದ ದಿನದಿಂದಲೇ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲವಿತ್ತು. ಇದೀಗ ನಾನಿಯ ವಿಭಿನ್ನ ಲುಕ್ ಬಿಡುಗಡೆಯಾಗಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬ್ಲಡಿ ರೋಮಿಯೋ ಚಿತ್ರದ ಚಿತ್ರೀಕರಣ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ವಿಭಿನ್ನ ಕಥಾಹಂದರ ಮತ್ತು ಹೊಸ ಶೈಲಿಯ ನಿರೂಪಣೆಯೊಂದಿಗೆ ನಿರ್ದೇಶಕ ಸುಜೀತ್ ಈ ಸಿನಿಮಾವನ್ನು ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಚಿತ್ರೀಕರಣ ಆರಂಭದ ದಿನಾಂಕ ಹಾಗೂ ವೇಳಾಪಟ್ಟಿಗೆ ಸಂಬಂಧಿಸಿದಂತೆ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: Bigg Boss: ಗಗನ್ ತಾಯಿಗೆ ಕ್ಷಮೆ ಕೇಳಿ ಕಣ್ಣೀರಿಟ್ಟ ಕಿಚ್ಚ ಸುದೀಪ್; ಬಿಗ್ ಬಾಸ್ ವೇದಿಕೆಯಲ್ಲಿ ಭಾವುಕ ಕ್ಷಣ!

ನಾನಿ ನಟನೆಯ ದಿ ಪ್ಯಾರಡೈಸ್ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಂಡಿದೆ ಎಂದು ವರದಿಗಳು ತಿಳಿಸಿವೆ. ಈಗ ‘ಬ್ಲಡಿ ರೋಮಿಯೋ’ ಮೂಲಕ ನಾನಿ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ತಮ್ಮ ಹೊಸ ಲುಕ್‌ನಿಂದಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ನ್ಯಾಚುರಲ್ ಸ್ಟಾರ್, ಈ ಚಿತ್ರದಲ್ಲಿ ಯಾವ ರೀತಿಯ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ನಾನಿ ಇತ್ತೀಚೆಗೆ ದಿ ಪ್ಯಾರಡೈಸ್ ಚಿತ್ರದ ಮೂಲಕ ಸುದ್ದಿಯಲ್ಲಿದ್ದರು. ಚಿತ್ರವು ಆರಂಭಿಕ ಹಂತದಲ್ಲಿ ಉತ್ತಮ ಗಳಿಕೆ ದಾಖಲಿಸಿದರೂ, ಬಿಡುಗಡೆಯ ನಂತರ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಚಿತ್ರವು 17 ದಿನಗಳಲ್ಲಿ ವಿಶ್ವಾದ್ಯಂತ ಸುಮಾರು 172.65 ಕೋಟಿ ರೂಪಾಯಿ ಗಳಿಸಿತ್ತು ಎಂದು ವರದಿಯಾಗಿದೆ.

ಇದೀಗ ‘ಬ್ಲಡಿ ರೋಮಿಯೋ’ಗಾಗಿ ನಾನಿ ಮಾಡಿಕೊಂಡಿರುವ ವಿಭಿನ್ನ ಮೇಕ್‌ಓವರ್ ಅವರ ಮುಂದಿನ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಹೊಸ ಪಾತ್ರ, ರೆಟ್ರೋ ಶೈಲಿ ಮತ್ತು ಸುಜೀತ್ ಅವರ ನಿರ್ದೇಶನದೊಂದಿಗೆ ಈ ಸಿನಿಮಾ ಹೇಗೆ ಮೂಡಿಬರಲಿದೆ ಎಂಬುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports