Actor Darshan: ಮೂವರು ದರ್ಶನ್ ಅಭಿಮಾನಿಗಳು ಅರೆಸ್ಟ್! ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ರಾ ‘ಡಿ ಕಂಪನಿ’ ಸದಸ್ಯರು? | | ACTPnews

ದರ್ಶನ್ ಫ್ಯಾನ್ಸ್ ಅರೆಸ್ಟ್


Last Updated:

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ ಮೊದಲ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಇದೀಗ ಅಭಿಮಾನಿಗಳಿಂದಲೇ ದರ್ಶನ್‌ಗೆ ಸಂಕಷ್ಟ ಎದುರಾಗೋ ಸಾಧ್ಯತೆ ಇದೆ. ಅಂದಹಾಗೆ ಮೂವರು ದರ್ಶನ್ ಅಭಿಮಾನಿಗಳಿಬ್ಬರು ಅರೆಸ್ಟ್ ಆಗಿದ್ದಾರೆ!

ದರ್ಶನ್ ಫ್ಯಾನ್ಸ್ ಅರೆಸ್ಟ್
ದರ್ಶನ್ ಫ್ಯಾನ್ಸ್ ಅರೆಸ್ಟ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ (Renukaswamy murder case) ಮೊದಲ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಸೇರಿರುವ ನಟ ದರ್ಶನ್‌ಗೆ (Darshan) ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಇತ್ತ ದರ್ಶನ್ ಹೆಸರು ಹೇಳಿಕೊಂಡು, ನಟನ ಅಭಿಮಾನಿಗಳು ಅಂತ ಹೇಳಿಕೊಂಡು ನಟಿ ರಮ್ಯಾಗೆ (Ramya) ಕೆಟ್ಟ ಕೆಟ್ಟ ಮೆಸೇಜ್ ಹಾಕಿ, ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದರು. ಇದೀಗ ಅಭಿಮಾನಿಗಳಿಂದಲೇ ದರ್ಶನ್‌ಗೆ (Darshan Fans) ಸಂಕಷ್ಟ ಎದುರಾಗೋ ಸಾಧ್ಯತೆ ಇದೆ. ರೇಣುಕಾಸ್ವಾಮಿ ಕೇಸ್‌ನಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಆ ರೀತಿ ಬೆದರಿಕೆ ಹಾಕಿದ್ದು ದರ್ಶನ್ ಅಭಿಮಾನಿಗಳೇ ಎನ್ನುವುದು ಬೆಳಕಿಗೆ ಬಂದಿದ್ದು, ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ.

ಅಭಿಮಾನಿಗಳಿಂದಲೇ ದರ್ಶನ್‌ಗೆ ಸಂಕಷ್ಟ

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಗೆ ಮತ್ತೆ ಸಂಕಷ್ಟ ಎದುರಾಗೋ ಸಾಧ್ಯತೆ ಇದೆ. ಈ ಕೇಸ್‌ನಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ನ್ಯಾಯಾಧೀಶರ ಎದುರೇ ಸಾಕ್ಷಿಯೊಬ್ಬರು ನನಗೆ ಬೆದರಿಕೆ ಇದೆ ಅಂತ ಅಳಲು ತೋಡಿಕೊಂಡಿದ್ದರು. ಇದೀಗ ಆ ರೀತಿ ಬೆದರಿಕೆ ಹಾಕಿದ್ದು ದರ್ಶನ್ ಫ್ಯಾನ್ಸ್ ಅನ್ನೋದು ಗೊತ್ತಾಗಿದೆ.

ಮೂವರು ದರ್ಶನ್ ಅಭಿಮಾನಿಗಳು ಅರೆಸ್ಟ್

ಸಾಕ್ಷಿಗೆ ಬೆದರಿಕೆ ಹಾಕಿದ್ದು ದರ್ಶನ್ ಅಭಿಮಾನಿಗಳು ಅನ್ನೋದು ಪತ್ತೆಯಾಗಿದೆ. ಸಾಕ್ಷಿಗೆ ಬೆದರಿಕೆ ಹಾಕಿದ್ದ ದರ್ಶನ್‌ನ ಇಬ್ಬರು ಅಭಿಮಾನಿಗಳನ್ನು ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಡಿ ಕಂಪನಿಯ ಮೂವರು ಅರೆಸ್ಟ್

ಡಿ ಕಂಪನಿ ಎಂಬ ದರ್ಶನ್ ಅಭಿಮಾನಿಗಳ ಸಂಘದ ಇಬ್ಬರು ಸದಸ್ಯರನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರನ್ನು ವೇಣು, ಸುಹಾಸ್ ಹಾಗೂ ಪುನೀತ್ ಎಂದು ಗುರುತಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿದಾರ ಸಂದೀಪ್ ಎಂಬಾತನಿಗೆ ಈ ಮೂವರು ಬೆದರಿಕೆ ಹಾಕಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಸಾಕ್ಷ್ಯ ಹೇಳದಂತೆ ಬೆದರಿಕೆ

ಬಂಧಿತ ಮೂವರು ಡಿ ಕಂಪನಿ ಎಂಬ ದರ್ಶನ್ ಅಭಿಮಾವಿ ಸಂಘಟನೆಯ ಸದಸ್ಯರಾಗಿದ್ದು, ತುಮಕೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಯವರು ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ರೇಸ್‌ನಲ್ಲಿ ಸಾಕ್ಷ್ಯ ಹೇಳದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ವಿಚಾರವನ್ನು  ನ್ಯಾಯಾಲಯದಲ್ಲಿ ಖುದ್ದು ಸಾಕ್ಷಿದಾರನೇ ಹೇಳಿದ್ದ. ಕೋರ್ಟ್ ಸೂಚನೆ ಮೇರೆಗೆ ಈ ಬಗ್ಗೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸ್ರು, ಮೂವರನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ.

ಏನಿದು ಬೆದರಿಕೆ ಪ್ರಕರಣ?

ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ವೇಳೆ ಸ್ಪೋಟಕ ಬೆಳವಣಿಗೆ ನಡೆದಿದ್ದು, ಟ್ರಯಲ್ ವೇಳೆ ಅಪರಿಚಿತರು ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಂದಿತ್ತು. ಪ್ರಾಸಿಕ್ಯೂಷನ್ ಸಾಕ್ಷಿ ಓರ್ವರಿಗೆ ಅಪರಿಚಿತ ವ್ಯಕ್ತಿಯಿಂದ  ವಾಟ್ಸಾಪ್ ಮೂಲಕ ಕರೆ ಬಂದಿದ್ದು, ಆರೋಪಿಗಳ ಪರವಾಗಿ ಸಾಕ್ಷಿ ನುಡಿಯುವಂತೆ ಬೆದರಿಕೆ ಹಾಕ್ತಿದ್ದಾರೆ ಎಂದು ಸಾಕ್ಷಿಯೋರ್ವ ಕೋರ್ಟ್​​ಗೆ ತಿಳಿಸಿದ್ದರು.

ಸಾಕ್ಷಿಗೆ ಅಪರಿಚಿತ ಹೇಳಿದ್ದೇನು?

ಆರೋಪಿಗಳನ್ನು ಗುರುತಿಸಲು ಆಗುವುದಿಲ್ಲ ಎಂದು ಹೇಳು ಎನ್ನುವಂತೆ ಸಾಕ್ಷಿಗೆ ಹೇಳಿದ್ದರಂತೆ. ಬಾರ್ ಬಳಿ ಇರುವ ಸಿಸಿಟಿವಿಯನ್ನ ಪೊಲೀಸರು ಎತ್ತುಕೊಂಡು ಹೋದ್ರು ಎಂದು ಹೇಳು, ಕಿಡ್ನಾಪ್ ಮಾಡಿದ ಆರೋಪಿಗಳನ್ನು ಗುರುತಿಸಲಾಗುವುದಿಲ್ಲ ಎಂದು ಹೇಳು ಎಂದಿದ್ದ ಆರೋಪಿಗಳು, ಪೊಲೀಸರ ಮಹಜರಿನಲ್ಲಿ ಏನಿದೆ ಎಂಬುವುದು ನನಗೆ ಗೊತ್ತಿಲ್ಲ ಅಂತೇಳು ಅಂತೆಲ್ಲ ಹೇಳಿಕೊಟ್ಟಿದ್ದರಂತೆ.

(ವರದಿ: ಮಾದೇಶ್, ನ್ಯೂಸ್ 18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *